ಲಿಂಗಸಗೂರು : ಫೆ .18 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಜಾರಿಗೊಳಿಸಿ, ಸದ್ಯ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ’ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿದರು .

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು 2005 ರಲ್ಲಿ ಜಾರಿಗೆ ಬಂದಂತಹ, ವಿಶ್ವದಲ್ಲಿಯೇ ಅತಿಹೆಚ್ಚು ಗ್ರಾಮೀಣ ಭಾಗದ ಜನರಿಗೆ ಖಾತರಿಯ ಉದ್ಯೋಗವನ್ನು ಒದಗಿಸಿದ ಯೋಜನೆಯಾಗಿದೆ. ಇದರಿಂದ ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದ ಜನರ ಜೀವನ ಸುಧಾರಣೆಯಾಗಿದ್ದು, ಗ್ರಾಮಕ್ಕೆ ಅವಶ್ಯವಿರುವ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿ, ಗ್ರಾಮೀಣ ಭಾಗವನ್ನು ಅಭಿವೃದ್ಧಿ ಪಡಿಸಿದೆ. ಗಾಂಧೀಜಿಯವರ ಕನಸಾದಂತಹ ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯನ್ನುವುದನ್ನು ಈ ಯೋಜನೆಯು ಈಡೇರಿಸಿದೆ. ಈ ಯೋಜನೆಯಿಂದ ಹಳ್ಳಿಯಿಂದ ಪಟ್ಟಣದೆಡೆಗೆ ವಲಸೆ ಹೋಗುತ್ತಿದ್ದ ಕಾರ್ಮಿಕರಿಗೆ ಅವರ ಊರಿನಲ್ಲಿಯೇ, ಉದ್ಯೋಗದ ಖಾತರಿಯನ್ನು ನೀಡಿ, ಅವರ ಬದುಕಿಗೆ ಬೆಳಕಾಗಿದ್ದ ಯೋಜನೆಯಾಗಿದೆ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಿಗಬೇಕಾದ ಅನುದಾನವನ್ನು ನೀಡದೇ ವಂಚಿಸುತ್ತಿದ್ದು, ಸದರಿ ಯೋಜನೆಯ ಹೆಚ್ಚಿನ ಆರ್ಥಿಕ ಹೊರೆಯನ್ನು ರಾಜ್ಯಗಳಿಗೆ ಹೊರಿಸುತ್ತಿದೆ. ಗ್ರಾಮೀಣ ಪ್ರದೇಶದ ಜನರ ದುಡಿಯುವ ಹಕ್ಕನ್ನು ಕಿತ್ತಿಕೊಳ್ಳುವುದು ನ್ಯಾಯ ಸಮ್ಮತವಲ್ಲ. ಸದ್ಯ ಜಾರಿಗೆ ತಂದಿರುವ ‘ವಿಬಿ-ಜಿ ರಾಮ್ ಜಿ’ ಯೋಜನೆಯನ್ನು ಹಿಂಪಡೆದು. ಜನರ ಜೀವನವನ್ನು ಸುಭದ್ರಗೊಳಿಸುವ ಮತ್ತು ಉದ್ಯೋಗದ ಖಾತರಿಯ ಹಕ್ಕನ್ನು ನೀಡಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ಮರುಜಾರಿಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು .

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ ಎಸ್ ಹುಲಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಅಮರೇಶ ಹೆಸರೂರು, ಎಂ ಡಿ ರಫಿ,ವೆಂಕಟೇಶ್ ಗುತ್ತೇದಾರ, ಶರಣಬಸವ ಮೇಟಿ, ತಮ್ಮಣ್ಣ ಗುತ್ತೇದಾರ್, ಎಸ್ ಆರ್ ರಸೂಲ, ನಾವಾಬ್, ಅಮರೇಶ್ ಮಡ್ಡಿ. ಸಂಜೀವಪ್ಪ ಹುನಕುಂಟಿ , ಉಮೇಶ್, ವಿಜಯಲಕ್ಷ್ಮಿ ದೇಸಾಯಿ , ಗಂಗಮ್ಮ, ಶ್ವೇತಾ ಸೇರಿದಂತೆ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *