ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ರಾಯಚೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ತಾಲೂಕು ಆರೋಗ್ಯಾ ಧಿಕಾರಿಗಳ ಕಾರ್ಯಾಲಯ ಸಿಂಧನೂರು ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಿಂಧನೂರು ಇವರ ಸಂಯುಕ್ತಾಶ್ರಯ ದಲ್ಲಿ ಅಂಗನವಾಡಿ ಕೇಂದ್ರ ಬಡಿಬೇಸ, ದೇಹದಲ್ಲಿ ಕಬ್ಬಿಣಾಂಶದ ಕೊರತೆಯೇ ರಕ್ತಹೀನತೆಗೆ ಕಾರಣ ಆರೋಗ್ಯವಂತ ತಾಯಿ ಆರೋಗ್ಯವಂತ ಮಗು ಕುರಿತು ತಾಯಂದಿರ ಸಭೆಯಲ್ಲಿ ಶ್ರೀಮತಿ ಗೀತಾ ಹಿರೇಮಠ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡಿದರು ಎಲ್ಲಾ ವಯಸ್ಸಿನವರು ತಮ್ಮ ದಿನನಿತ್ಯದ ಆಹಾರ ಸೇವನೆಯಲ್ಲಿ ಕಬ್ಬಿಣಾಂಶ ಪೋಲಿಕ್ ಆಮ್ಲ ಮಾತ್ರೆ, B12 vit, ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ತಪ್ಪದೇ ತಿಳಿಸುವುದು ಗರ್ಭಿಣಿಯರು ಎರಡನೆಯ ತ್ರೈಮಾಸಿಕದಲ್ಲಿ ಜಂತುಹುಳು ನಿವಾರಕ ಮಾತ್ರಗಳನ್ನು, ಸೇಂಗಾ ಎಳ್ಳು ಬೆಲ್ಲ ಹಸಿರು ತರಕಾರಿ ಖರ್ಜುರಾ, ಒಣ ದ್ರಾಕ್ಷಿ ಸೇವನೆ ಮಾಡುವುದು ತೊಂದರೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಕಬ್ಬಿಣಾಂಶದ ಮಾತ್ರೆಗಳ ಸೇವನೆ ಎಲ್ಲಾ ಗರ್ಭಿಣಿಯರ ಐದು ತಿಂಗಳ ಅವಧಿಯಿಂದ ಒಂದು (ಐರನ್ ಪೊಲೀಕ್ ಆಮ್ಲ) ಮಾತ್ರೆಯನ್ನ ಪ್ರತಿದಿನ ಒಂದರಂತೆ ತಪ್ಪದೆ ಸೇವಿಸಬೇಕು ಅತಿ ಹೆಚ್ಚು ತರಕಾರಿ ಸೇವನೆ ಮಾಡಬೇಕು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ಭೇಟಿ ನೀಡಿ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಕೊಳತಕ್ಕದ್ದು, ರಕ್ತ ಹೀನತೆಗೆ ಕಾರಣಗಳು ದಿನನಿತ್ಯ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತ ಉತ್ಪತ್ತಿಗೆ ಬೇಕಾದ ಕಬ್ಬಿಣ ಅಂಶ ಪೊಲೀಕ್ ಆಸಿಡ್,ವಿಟಮಿನ್ ಬಿ12 ಮುಂತಾದ ಪೋಷಕಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದು ಜಂತುಹುಳು ಕೊಕ್ಕೆ ಹುಳು ಮುಂತಾದ ಸೋಂಕಿಗೆ ತುತ್ತಾಗುವುದು ಬಯಲಿನಲ್ಲಿ ಮಲವಿಸರ್ಜನೆ ಮಾಡುವುದು ಶೌಚಾಲಯ ಬಳಸದೆ ಇರುವುದು ಸಾಬೂನು ಮತ್ತು ನೀರಿನಿಂದ ಕೈ ಕಾಲುಗಳನ್ನು ತೊಳೆಯದೆ ಇರುವುದು ಪಾದರಕ್ಷೆಗಳನ್ನು ಬಳಸದೆ ಇರುವುದು ಹೊರಗಡೆ ಸುತ್ತಾಡುವುದು ಮಹಿಳೆಯರಲ್ಲಿ ಮುಟ್ಟಿನ ಬೇಳೆ ಅತಿಯಾದ ರಕ್ತಸ್ರಾವಾಗುವಂತದ್ದು ಗರ್ಭಿಣಿಯರಲ್ಲಿ ರಕ್ತ ಹೀನತೆಯ ಪರಿಣಾಮ ಕಡಿಮೆ ತೂಕ ಮಗುವಿನ ಜನನ ಮಗು ಸತ್ತು ಹುಟ್ಟುವುದು ಹೆರಿಗೆ ಸಮಯದಲ್ಲಿ ಮರಣ ಹೆರಿಗೆಯ ಮುಂಚೆ ಮತ್ತು ಹೆರಿಗೆಯ ಸಮಯದಲ್ಲಿ ಅತಿಯಾದ ರಕ್ತಸ್ರಾವ ಅವಧಿಗೆ ಮೊದಲೇ ಹೆರಿಗೆಯಾಗುವುದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗರ್ಭಿಣಿಯರ ರಕ್ತ ಹೀನತೆ ವರ್ಗೀಕರಣ 11ಗ್ರಾಂ, ಇರಬೇಕು, 7 ಕ್ಕಿಂತ ಕಡಿಮೆ ಇದ್ದರೆ ಹೆಚ್ಚಿನ ಚಿಕಿತ್ಸೆ ಪಡೆಯಬೇಕು, ನಂತರ ಬಾಲ್ಯ ವಿವಾಹದ ಕುರಿತು ಹಾಗೂ ಸ್ವಚ್ಛತೆಯ, ಪೌಷ್ಟಿಕ ಆಹಾರದ ಸೇವನೆ ಬಹಳ ಮುಖ್ಯ ಬೇಸಿಗೆ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ತೆಗೆದು ಕೊಳ್ಳಬೇಕು ಎಂದು ತಿಳಿಸಿದರು. ಸದರಿ ಕಾರ್ಯಕ್ರಮದಲ್ಲಿ ಶಮಿನ PHCO, ಶೈನಜ ಆಶಾಕಾರ್ಯಕರ್ತೆ, ದಿಲಶಾದ ಅಂಗನವಾಡಿ ಕಾರ್ಯಕರ್ತೆ, ಸಾವಿತ್ರಿ ಅಂಗನವಾಡಿ ಸಹಾಯಕಿ, ಗರ್ಭಿಣಿ ತಾಯಂದಿರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *