ಸಿಂಧನೂರು —- ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ (ರಿ)ಕಾರಟಗಿ ವತಿಯಿಂದ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 49ನೇ ವರ್ಷದ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ದರ್ಶನ್ ಅವರ ಹಲವಾರು ಸಮಾಜ ಪರವಾಗಿಗಳನ್ನು ನೆನಪಿಸಿಕೊಳ್ಳುತ್ತಾ ಅಭಿಮಾನಿಗಳಿಂದ ಜನ್ಮದಿನ ಸಮಾರಂಭ ಕಾರ್ಯಕ್ರಮ ನೆರವೇರಿತು. ಈ ಸಮಾರಂಭದಲ್ಲಿ ಆಶ್ರಮದ ಆಶ್ರಯದಾತರುಗಳ ವತಿಯಿಂದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಚಿರು ನಾಯಕ ಮಾತನಾಡಿ ನಮ್ಮ ದರ್ಶನ್ ಅವರು ಕಾನೂನನ್ನು ಪ್ರೀತಿಸಿ ಪೂಜಿಸುವಂತಹ ಅಭಿವ್ಯಕ್ತಿಯಾಗಿ ಇಂದು ಶಿಕ್ಷಗೊಳಪಟ್ಟಿದ್ದಾರೆ. ಆದರೆ ಅವರು ನಟಿಸಿರುವಂತಹ ಹಲವಾರು ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಾ ಸಮಾಜವನ್ನು ಕಾಪಾಡುವಂತಹ ನಿಟ್ಟಿನಲ್ಲಿ ಅವರ ನಟನೆ ಜಗತ್ತಿಗೆ ಹೆಸರಾಗಿತ್ತು. ಇಂತಹ ನಮ್ಮ ಮೇರು ನಟನ ಜನ್ಮದಿನವನ್ನು ಕಾರುಣ್ಯ ಕುಟುಂಬದಲ್ಲಿ ಆಚರಿಸಿ ಇಲ್ಲಿರುವಂತಹ ಎಲ್ಲ ಹಿರಿಯರ ಆಶೀರ್ವಾದದೊಂದಿಗೆ ಆದಷ್ಟು ಬೇಗನೆ ನಮ್ಮ ಡಿ ಬಾಸ್ ಹೊರಗಡೆ ಬರಲಿ ಎನ್ನುವ ಆಶೀರ್ವಾದವನ್ನು ಬಯಸಿ ಇಂದು ಸರಳವಾಗಿ ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಮಾತನಾಡಿದರು. ನಂತರ ಸಂಘದ ಅಧ್ಯಕ್ಷರಾದ ಶರಣು ಬಿಜಕಲ್ ಮಾತನಾಡಿ ದರ್ಶನ್ ಅವರ ಮಾರ್ಗದರ್ಶನ ಆದರ್ಶ ವ್ಯಕ್ತಿತ್ವವನ್ನು ನಾವುಗಳು ಮೈಗೂಡಿಸಿಕೊಂಡು ನಮ್ಮ ಡಿ ಬಾಸ್ ಜನ್ಮದಿನವನ್ನು ಈ ವರ್ಷ ಅತ್ಯಂತ ಸರಳವಾಗಿ ಆಚರಿಸುತ್ತಿದ್ದೇವೆ. ಸರಳವಾದರೂ ಸಹ ಕಾರುಣ್ಯ ಕುಟುಂಬದ ನಿಜವಾದ ದೇವರುಗಳ ಆಶೀರ್ವಾದ ನಮ್ಮ ದರ್ಶನ್ ಹಾಗೂ ಅವರ ಕುಟುಂಬ ಅಭಿಮಾನಿಗಳ ಮೇಲಿರಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಹೊರಗಡೆ ಬಂದ ನಂತರ ಕಾರುಣ್ಯ ಆಶ್ರಮದ ಸೇವೆಯನ್ನು ಸವಿಸ್ತಾರವಾಗಿ ತಿಳಿಸಿ ಒಮ್ಮೆ ನಮ್ಮ ಈ ಕಾರುಣ್ಯ ಕುಟುಂಬಕ್ಕೆ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡುತ್ತಿದ್ದೇವೆ. ತೆರೆಯ ಹಿಂದೆ ಹಲವಾರು ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಸಹಾಯ ಸಹಕಾರ ಮಾಡುತ್ತಾ ಹಲವಾರು ಸಮಾಜ ಪ್ರಕಾರಗಳನ್ನು ಮಾಡಿರುವ ನಮ್ಮ ಬಾಸ್ ಗೆ ಕಾರುಣ್ಯ ಆಶ್ರಮದ ಎಲ್ಲಾ ದೇವರ ಮಕ್ಕಳ ಆಶೀರ್ವಾದವಿರಲಿ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಕಾರಟಗಿ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ಅಭಿಮಾನಿಗಳಾದ ರಮೇಶ ನಾಯಕ. ರಾಜು ಸಾಲುಂಚಿಮರ ಕ್ಯಾಂಪ್. ಪ್ರಕಾಶ ಯರಡೋಣ. ಉಮೇಶ ಗೌಡ ಕಾರಟಗಿ. ಮಹಮ್ಮದ್ ಖಾಜಿ ಕಾರಟಗಿ ಮತ್ತು ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ. ಮತ್ತು ಹಲವಾರು ದರ್ಶನ್ ಅಭಿಮಾನಿಗಳು ಉಪಸ್ಥಿತರಿದ್ದರು

