ಅರಕೇರಾ : ತಾಲೂಕಿನ ಮಲ್ಲೇದೇವರ ಗುಡ್ಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಬರುವ ನಾಗೋಲಿ ಗ್ರಾಮದ ಶ್ರೀಹ ನುಮಯ್ಯತಾತನವರ ಜಾತ್ರಾಮಹೋತ್ಸವ ಶಿವರಾತ್ರಿಯ ದಿನದಂದು ಪ್ರತಿವರ್ಷದಂತೆ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ಸಂಭ್ರಮದಿಂದ ಉತ್ಸವ ಹಾಗೂ ರಥೋತ್ಸವ ಜರುಗಿತು.
ನಾಗೋಲಿ ಗ್ರಾಮದ ಶ್ರೀ ಹನುಮಯ್ಯತಾತನವರ ಜಾತ್ರಾ ಮಹೋತ್ಸವ ಅಂಗವಾಗಿ ಉದಯ 5 ಗಂಟೆಯಿಂದ ೧೦ ಗಂಟೆಗೆಯವರೆಗೆ ಶ್ರೀ ಲಿಂ|| ಹನುಮಯ್ಯ ತಾತನವರ ಕರ್ತೃ ಗದ್ದುಗೆ ಅಭಿಷೇಕ ಪತ್ರಿ ಪುಷ್ಪಾರ್ಚನೆ, ವಿಶೇಷಪೂಜೆ ಅಲಂಕಾರ ಮಾಡಿ ಮಂಗಳಾರತಿ,ತೀರ್ಥ ಪ್ರಸಾದ ನಂತರ ೧೨.೩೦ ಗಂಟೆಗೆ ಮುತೈದೆಯರ ಕಳಸ ಕನ್ನಡಿ ಭಾಜಾ ಭಜಂತ್ರಿಯೊಂದಿಗೆ ನಂದಿಕೋಲ ಸೇವೆ ಜರುಗಿತು.ಬೆಳಿಗ್ಗೆ ೧೦ ಗಂಟೆಯಿಂದ ದೇವರಿಗೆ ವಿಶೇಷಪೂಜೆ ಕಾರ್ಯಕ್ರಮ ನಡೆದವು ಭಕ್ತರು ದೇವರಿಗೆ ಕಾಯಿ ಕರ್ಪೂರ ನೈವ್ಯದೆ ಸಲ್ಲಿಸಿ ದರ್ಶನಪಡೆದರು. ಸಂಜೆಯಾಗುತ್ತಿದ್ದAತೆ ಭಕ್ತರು ಶ್ರೀಹನುಮಯ್ಯತಾತನವರರ ದೇವಸ್ಥಾನಕ್ಕೆ ಆಗಮಿಸಿದರು. ಜಾತ್ರೆ ಎಂದ ಮೇಲೆ ಅಲ್ಲೋಂದು ರಥೋತ್ಸವವೂ ಇರುವದು ವಿಶೇಷವೇನೂ ಇಲ್ಲ ಅದರೆ ನಾಗೋಲಿ ಗ್ರಾಮದ ಶ್ರೀ ಹನುಮಯ್ಯತಾತನವರ ಜಾತ್ರಾ ಮಹೋತ್ಸವದಲ್ಲಿ ಉಚ್ಚಾಯ ಮಹೋತ್ಸವದ ನೇತೃತ್ವವಹಿಸುವುದು ಮಹಿಳೆಯರು ಎಂಬುವದು ವಿಶೇಷವಾಗಿತ್ತು.
ಚನ್ನಬಸವ ತಾತನವರು ಸಂಜೆ ೬ಗಂಟೆಗೆ ಮಹಿಳೆಯರಿಂದ ಉಚ್ಚಾಯ ಮಹೋತ್ಸವ ಜರುಗಿತು ನಂತರ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ರಥೋತ್ಸವಕ್ಕೆ ಬಾಳೆ,ಹಣ್ಣು ಉತ್ತುತ್ತಿ ಎಸೆದು ಭಕ್ತಿಭಾವ ಮೆರೆದರು. ರಥೋತ್ಸವ ಮುಂದೆವಿವಿಧ ವಾದ್ಯಮೇಳಗಳು ಗಮನಸೆಳೆಯಿತು, ರಥೋತ್ಸವ ಸ್ಥಳಕ್ಕೆ ಬಂದು ನಿಂತಾಗ ಭಕ್ತರು ಚಪ್ಪಾಳೆ ತಟ್ಟಿ ಹರ್ಷವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಸ್ಥಳಿಯ ಗ್ರಾಮದ ಮುಖಂಡರು ಜನಪ್ರತಿನಿಧಿಗಳು ದೂರದ ರಾಜ್ಯದ ಆಂದ್ರ,ಮಹಾರಾಷ್ಟç ಸೇರಿದಂತೆ ರಾಯಚೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾವಿರರಾರು ಜನ ಭಕ್ತಾಧಿಗಳು ಭಾಗವಹಿಸಿದ್ದರು.ಸಂದರ್ಭದಲ್ಲಿ ಚನ್ನಬಸವತಾತ,ಮಾಹಾಮುನಿತಾತ. ನಾಗವೀರಯ್ಯಸ್ವಾಮಿ ,ಸೋಮನಾಥಸ್ವಾಮಿ. ನಾಗೇಶಸ್ವಾಮಿ ಚನ್ನಬಸವನಾಯಕ ನಿವೃತ ಬ್ಯಾಂಕ್ ಅಧಿಕಾರಿ, ಪಂಪನಗೌಡ, ಪ್ರಭಣ್ಣಗೌಡ, ಹನುಮಯ್ಯ ಅಬಕಾರಿ,ಶಾಂತಪ್ಪಬಾಗ್ಲಿ, ಮುದಕಪ್ಪಬಾಗ್ಲಿ ಮಹಾದೇವ ಅಬಕಾರಿ, ಮುದಿರಂಗಪ್ಪನಾಯಕ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವವದಲ್ಲಿ ಪಾಲುಗೊಂಡ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತು.ನಾಗೋಲಿ ಗ್ರಾಮದ ಹನುಮಯ್ಯತಾತನವರ ಜಾತ್ರಾಮಹೋತ್ಸವ ಅಂಗವಾಗಿ ಉಚ್ಚಾಯವನ್ನು ಮಹಿಳೆಯರು ಎಳೆದರು.

