ಬಳಗಾನೂರು : ನ.25,ರಾಜ್ಯ ಕೀಟ ಶಾಸ್ತ್ರಜ್ಞ ಅದ್ಯಯನ ತಂಡ ತಾಲೂಕಿನ ವಿವಿಧ ಗ್ರಾಮಗಳಿಗೆ ಬೇಟಿ ನೀಡಿ ಸೊಳ್ಳೆಗಳಿಂದ ಹರಡುವ ರೋಗ ಅದ್ಯಯನ ನಡೆಸಿತು.
ಜೀತುಲಾಲ್ ಪವಾರ ಬೀದರ, ಮಹದೇವ ಮೈಸೂರು,ಇವರ ನೇತೃತ್ವದ ರಾಜ್ಯ ಕೀಟ ಶಾಸ್ತ್ರಜ್ಞ ಅಧ್ಯಯನ ತಂಡ ತಾಲ್ಲೂಕಿನ ಬಳಗಾನೂರು ಜವಳಗೇರಾ, ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಆಯ್ದ ಗ್ರಾಮಗಳಲ್ಲಿ ಬೇಟಿ ನೀಡಿ ಆನೆ ಕಾಲು ರೋಗ ಹರಡಿಸುವ ಸೊಳ್ಳೆಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿತು.
ಎಂಟಮಾಲಾಜಿಕಲ್ ಕಾರ್ಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ನಿರ್ಧಿಷ್ಟವಾದ ಸೊಳ್ಳೆಯ ಅಧ್ಯನ ಅಗತ್ಯವಿದೆ.
ಇದರ ಪ್ರಭಾವ ಮತ್ತು ಹರಡುವಿಕೆ ತಡೆಗಟ್ಟಲು ಅಧ್ಯಯನದಿಂದ ಮಾತ್ರ ಸಾಧ್ಯವಾಗಿದ್ದು ಆನೆಕಾಲು ರೋಗವು,ಚರಂಡಿಗಳಲ್ಲಿ ಹೆಚ್ಚಾಗಿ ಹುಟ್ಟುವ ಕ್ಯೂಲೆಕ್ಸ ಜಾತಿಯ ಕ್ವಿಂಕಿಫಿಲಿಯಾ ಎಂಬ ಉಪಜಾತಿ ಸೊಳ್ಳೆಗಳಿಂದ ಹರಡುತ್ತದೆ ಎಂದರು.
ಈ ರೋಗ ಒಂದು ಎರಡು ವರ್ಷದಲ್ಲಿ ಬರುವುದಿಲ್ಲ ಸೊಂಕಿತ ಸೊಳ್ಳೆಯಿಂದ ಮೇಲಿಂದ ಮೇಲೆ ಕಚ್ಚಿದರೆ ಕನಿಷ್ಠ 5 ವರ್ಷಗಳ ನಂತರ ಕಾಲು,ಕೈ,ಮತ್ತು ದೇಹದ ಅನೇಕ ಭಾಗದಲ್ಲಿ ಊತ ಕಾಣಿಸಿಕೊಂಡು ನರಕ ಯಾತನೆ ಅನುಭವಿಸಬೇಕಾಗುತ್ತದೆ.
ಗಂಡಸರಲ್ಲಿ ವೃಷಣ ಬಾವು ಸೇರಿ ಲಿಂಫ್ಯಾಟಿಕ್ ಫೀಲಾರಿಯಾಸಿಸ್ ರೋಗ ಉಲ್ಬಣಕ್ಕೆ ಎಡೆಮಾಡಿಕೊಡುತ್ತದೆ ಎಂದು
ನಿಯೋಜಿತ ಬೀದರ ಜಿಲ್ಲೆಯ ಕೀಟಶಾಸ್ತ್ರಜ್ಞ ಜೀತುಲಾಲ ಪವಾರ ರವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕೀಟಶಾಸ್ತ್ರಜ್ಞ ಅಧ್ಯಯನ ತಂಡ ತಾಲೂಕಿನ ಬಳಗಾನೂರು, ಪಿ.ಡಬ್ಲೂ.ಡಿ ಕ್ಯಾಂಪ್,ವೆಂಕಟೇಶ್ವರ ನಗರ,ಮಹೆಬೂಬಿಯಾ ಕಾಲೋನಿ ಗ್ರಾಮಗಳಲ್ಲಿ ಡೆಂಗ್ಯೂ,ಚಿಕುಂಗುನ್ಯಾ, ಮಲೇರಿಯಾ ಹಾಗೂ ವಿಶೇಷವಾಗಿ ಆನೆಕಾಲು ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ಸಂಗ್ರಹ ಮತ್ತು ಅಧ್ಯಯನ ಕಾರ್ಯಗಳು ನಡೆಸುತ್ತಿದ್ದು, ಕಾರ್ಯದ ಮುಖ್ಯ ಉದ್ದೇಶಗಳು ಆಯ್ದ ಗ್ರಾಮಗಳಲ್ಲಿ ವಿವಿಧ ವಿಧದ ಸೊಳ್ಳೆಗಳ ಸಂಗ್ರಹಣೆ ಮತ್ತು ಜಾತಿ ಗುರುತಿಸುವುದು. ಡೆಂಗ್ಯೂ, ಚಿಕುಂಗುನ್ಯಾ, ಮಲೇರಿಯಾ ಮತ್ತು ಆನೆಕಾಲು (ಫಿಲೇರಿಯಾ) ಇಂತಹ ಪ್ರಮುಖ ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಕಾರಣವಾಗುವ ಸೊಳ್ಳೆಗಳ ವರ್ಗೀಕರಣ.ಗ್ರಾಮೀಣ ಸಾರ್ವಜನಿಕರಲ್ಲಿ ಈ ಸೊಳ್ಳೆಗಳು ಉಂಟುಮಾಡುವ ಆರೋಗ್ಯ ಶಿಕ್ಷಣ ಮತ್ತು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಅಗತ್ಯವಾದ ಪರಿಹಾರ ಕ್ರಮಗಳ ಪ್ರಚಾರಕ್ಕೆ ಆರೋಗ್ಯ ಇಲಾಖೆ ಮುಂದಾಗಿರುತ್ತದೆ ಎಂದರು. ತಾಲೂಕಾ ಮೇಲ್ವಿಚಾರಕ ಮಾತನಾಡಿ ಈಡಿಸ್ ಈಜಿಪ್ಟಿ, ಅನೋಫಿಲಿಸ್,ಕುಲಿಕ್ಸ್ ಪ್ರಭೇದಗಳ ಸೊಳ್ಳೆಗಳ, ಬೆಳವಣಿಗೆ ಮತ್ತು ಹರಡುವ ಸ್ಥಳಗಳ ಪರೀಕ್ಷೆ ಮಾಡಿ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳಿಗೆ ಆರೋಗ್ಯ ಇಲಾಖೆಯ ಲಾರ್ವಾ ಸಮೀಕ್ಷೆಗಳು,ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಮತ್ತು ನಿಯಂತ್ರಣ ಕುರಿತು ಸಾರ್ವಜನಿಕರ ಜೊತೆ ಆರೋಗ್ಯ ಶಿಕ್ಷಣ ಚಟುವಟಿಕೆ ಪರಿಸರ ವ್ಯವಸ್ಥೆಯಲ್ಲಿ ನೈರ್ಮಲೀಕರಣ ಹಾಗೂ ವೈಜ್ಞಾನಿಕ ಸೊಳ್ಳೆ ನಿರೋಧಕ ಕ್ರಮಗಳ ಕುರಿತು ವಿಸ್ತಾರವಾದ ಜಾಗೃತಿ ಅಭಿಯಾನ ಕೈಗೊಳ್ಳಲು ಈ ಕಾರ್ಯಕ್ರಮ ಅನುಕೂಲವಾಗಿದೆ ಎಂದರು.
ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರ ಪಾಲುದಾರಿಕೆ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಂಯುಕ್ತವಾಗಿ, ಆಶಾ ಕಾರ್ಯಕರ್ತರು ಮತ್ತು ಸ್ಥಳೀಯ ಆರೋಗ್ಯ ನಿರೀಕ್ಷಕರು ಈ ಕೆಲಸದಲ್ಲಿ ಸಕ್ರಿಯ ಪಾತ್ರ ವಹಿಸಿಕೊಂಡಿದ್ದು ಸಾರ್ವಜನಿಕರು ಸಹಕರಿಸಲು ಮತ್ತು ಆನೆಕಾಲು ರೋಗ ಮುಕ್ತ ಹೊಂದಲು ಮನವಿ ಮಾಡಿಕೊಂಡರು.
ಜನರಲ್ಲಿ ಪ್ಲಾಸ್ಟಿಕ್,ಡ್ರಮ್, ಡೋಣಿ ಮುಂತಾದ ನೀರು ಸಂಗ್ರಾಕಾಣಗಳಲ್ಲಿ ನಿರಂತರ ಬಳಕೆ ವೈಜ್ಞಾನಿಕ ತೆರವು ಮತ್ತು ಸ್ವಚ್ಛತೆ ಕಾಯ್ದಿಡುವ ಬಗ್ಗೆ ಅರಿವು ಮೂಡಿಸಿದರು.
ಬಳಗಾನೂರು ಆಶಾ ಕಾರ್ಯಕರ್ತರಾದ ರೇಣುಕಾ ಸಜ್ಜನ್,ರೇಣುಕಮ್ಮ ಕುಂಬಾರ, ಶಾಂತಾ ಪಿ,ಹನಮಂತಿ,ಪಟ್ಟಣ ಪಂಚಾಯ್ತಿ ಸಮುದಾಯ ಸಂಚಾಲಕರಾದ ಗೀತಾ ಎಸ್, ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *