ರಾಯಚೂರು ನವೆಂಬರ್ 25 (ಕ.ವಾ.): ಭಾರತ ದೇಶದಾದ್ಯಂತ ನವೆಂಬರ್ 26ರಂದು ಸಂವಿಧಾನ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಅದೆ ರೀತಿ ಕರ್ನಾಟಕ ರಾಜ್ಯದಲ್ಲಿಯು ಸಹ ಸಂವಿಧಾನ ದಿನಾಚರಣೆಯು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಚರಿಸಲಾಗುತ್ತದೆ.
ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಾಥಾವು ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮಹಾನಗರ ಪಾಲಿಕೆ ಆವರಣದಿಂದ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ ಮಹಾತ್ಮಗಾಂಧಿ ವೃತ್ತ, ಮಹಾವೀರ ವೃತ್ತ, ತೀನ್ ಖಂದೀಲ್, ಎಕ್ ಮೀನಾರ್, ತಹಸೀಲ್ ಕಚೇರಿ, ಬಸ್ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಂಚರಿಸಿ ಶ್ರೀ ಪಂಡಿತ ಸಿದ್ದರಾಮ ಜಂಬಲ್‌ದಿನ್ನಿ ರಂಗಮಂದಿರವರೆಗೆ ಸಾಗಿ ಮುಕ್ತಾಯವಾಗಲಿದೆ.
ಜಾಥಾದಲ್ಲಿ ಸಂವಿಧಾನದ ಜಾಗೃತಿಯ ಪ್ಲೇ ಕಾರ್ಡ ಹಿಡಿದು, ಸಂವಿಧಾನ ಪುಸ್ತಕ, ರಾಷ್ಟದ್ವಜ ಹಾಗೂ ಡಾ. ಬಿ.ಆರ್.ಅಂಬೇಡ್ಕರ ಅವರ ವೇಶ ಹಾಕಿದ ಯುವಕರಿಂದ ಜಾಥಾ ಆಯೋಜಿಸಲಾಗಿದೆ. ಆದಕಾರಣ ಎಲ್ಲ ನಾಗರಿಕರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಸಾರ್ವಜನಿಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸದಸ್ಯರು ಸೇರಿದಂತೆ ಎಲ್ಲರು ಸಂವಿಧಾನ ದಿನಾಚರಣೆಯಲ್ಲಿ ನಮ್ಮೊಂದಿಗೆ ಭಾಗವಹಿಸಿ, ಸಂವಿಧಾನ ಮಹತ್ವದ ಆಶಯದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸಿಂಧು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
