ಮಸ್ಕಿ: ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿ ಅಭಿಷೇಕ್ ಮೋತಿಲಾಲ್ ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಮೃತ ವಿದ್ಯಾಥಿಗೆ ತಂದೆ ೫ ಲಕ್ಷದ ಪರಿಹಾರ ಚೆಕ್‌ನ್ನು ಶಾಸಕ ಆರ್.ಬಸನಗೌಡ ತುರವಿಹಾಳ ಸೋಮವಾರ ವಿತರಿಸಿದರು.
ತಾಲೂಕಿನ ಕಿರಣ ತಾಂಡಾದ ವಿದಾರ್ಥಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ (ಗುಂಜಳ್ಳಿ) ವಿದ್ಯಾರ್ಥಿ ಅಭಿಷೇಕ್ ಬೆಳಿಗಿನ ಜಾವ ೪ ಗಂಟೆಗೆ ವಾಯುವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ಖಾಸಗಿ ವಾಹನ ಡಿಕ್ಕಿ ಹೊಡೆದಿದ್ದರಿಂದ ಮೃತ ಪಟ್ಟಿದ್ದರಿಂದ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೫ ಲಕ್ಷ ರೂ ಗಳ ಪರಿಹಾರ ಚೆಕ್ ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಚಾರ್ಯ ಮರಿಯಪ್ಪ ನಾಯಕ, ಹಾಸ್ಟೆಲ್ ಮೇಲ್ವಿಚಾರಕರ ರಮೇಶ್ ಸಜ್ಜನ್ ಇದ್ದರು.

