ಮಸ್ಕಿ: ಪಟ್ಟಣದಲ್ಲಿ ಭೋವಿ(ವಡ್ಡರ) ಸಮಾಜದಿಂದ ಸಿದ್ದರಾಮೇಶ್ವರ ಜಯಂತಿ ಹಾಗೂ ಸಿದ್ದರಾಮೇಶ್ವರ ದೇವಸ್ಥಾನದ ೨೪ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕುಂಭ-ಕಳಸದೊಂದಿಗೆ ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ, ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮೆರವಣಿಗೆಗೆ ಚಾಲನೆ ನೀಡಿದರು.
ಪಟ್ಟಣದ ಕವಿತಾಳ ಕ್ರಾಸ್‌ನಿಂದ ಗಾಂಧಿನಗರ, ಅಶೋಕ ಸರ್ಕಲ್, ಅಗಸಿ, ಖಲೀಲ್ ವೃತ್ತ. ದೈವದಕಟ್ಟೆ, ತೇರು ಬಜಾರ, ಕನಕ ವೃತ್ತದ ಮೂಲಕ ಭ್ರಮರಾಂಭ ದೇವಸ್ಥಾನದ ಪಕ್ಕದಲ್ಲಿರುವ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ತಲುಪಿತು.
ಈ ಸಂದರ್ಭದಲ್ಲಿ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್ ಬಸನಗೌಡ ತುರುವಿಹಾಳ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಮಾಜಿ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಭೋವಿ ಸಮಾಜದ ಮುಖಂಡರಾದ ಆನಂದ ಬನಗಲ್, ಸಾರಪ್ಪ ಬಂಗಾಲಿ, ರಮೇಶ ಗುಡಸಲಿ, ಶಿವರಾಜ ಬುಕ್ಕಣ್ಣ, ದುರಗಪ್ಪ ಗೋನ್ವಾರ, ಮಲ್ಲಯ್ಯ ಛಾವಣಿ, ಜಿ.ಎಸ್.ಆನಂದ ವಿರೇಶ ಬಡಿಗಿ, ಆಂಜನೇಯ, ಅಮರೇಶ, ಸಾನಬಾಳ, ರವಿ ಸೇರಿದಂತೆ ಭೋವಿ ಸಮಾಜದ ಮುಖಂಡರು, ಮಹಿಳೆಯರು, ನೂರಾರು ಯುಕವರಿದ್ದರು.

Leave a Reply

Your email address will not be published. Required fields are marked *