ಸಿಂಧನೂರು:
ಜೈವಿಕ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ.
ತುಮಕೂರು ವಿಶ್ವವಿದ್ಯಾಲಯ ದಲ್ಲಿ ಪಿ ಎಚ್ ಡಿ ವಿದ್ಯಾಭ್ಯಾಸ ನಿರತ ರಾಜೇಶ್ ಮೇದಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಕನ್ನಡಿಗರ ಹೆಗ್ಗಳಿಕೆಯನ್ನು ಹೆಚ್ಚಿಸಿದ್ದಾರೆ.
“ಏಗಲ್ ಮಾರ್ಮೆಲೋಸ್ ಬೀಜದ ಸಾರವನ್ನು ಬಳಸಿಕೊಂಡು TiO2 ಮತ್ತು Ag-TiO2 ನ್ಯಾನೊಪರ್ಟಿಕಲ್‌ಗಳ ಜೈವಿಕ ಸಂಶ್ಲೇಷಣೆ ಮತ್ತು ಮಾನವ ಲ್ಯುಕೇಮಿಕ್ ಕೋಶ ಪ್ರಸರಣ, ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡದಲ್ಲಿ ಅವುಗಳ ಸಂಭಾವ್ಯ ಪರಿಣಾಮಕಾರಿತ್ವದ ತನಿಖೆ” ಎಂಬ ಶೀರ್ಷಿಕೆಯ ಸಂಶೋಧನಾ ಲೇಖನವು, ಪ್ರಸಿದ್ಧ ಅಂತಾರಾಷ್ಟ್ರೀಯ ಜರ್ನಲ್ Biological Trace Element Research ( Springer ) ನಲ್ಲಿ ಪ್ರಕಟಣೆಗೆ ಅಂಗೀಕರಿಸಲಾಗಿದೆ.
ಈ ಸಂಶೋಧನಾ ಲೇಖನವನ್ನು ರಾಜೇಶ್ ಮೇದಾರ್ ಹಾಗೂ ಸಹ-ಲೇಖಕರು ಸಂಯುಕ್ತವಾಗಿ ರಚಿಸಿದ್ದು, ಮಾರ್ದರ್ಶಕರು ಮಾರ್ಗದರ್ಶಕರಾದ ಡಾ!!. ಭಾಗ್ಯಲಕ್ಷ್ಮಿ ಎಂ ಪ್ರೊಫೆಸರ್ ಜೀವ ರಸಾಯನಶಾಸ್ತ್ರ ವಿಭಾಗದ ಮೇಲ್ವಿಚಾರಣೆಯಲ್ಲಿ ಪೂರ್ಣಗೊಂಡು ಪರಿಶೀಲಿಸಿದ ನಂತರ ಪ್ರಕಟಣೆಗೆ ಅನುಮೋದನೆ ದೊರಕಿದೆ.
ಜರ್ನಲ್ ಸಂಪಾದಕೀಯ ವಿಭಾಗದಿಂದ ಬಂದ ಅಧಿಕೃತ ಪತ್ರದಲ್ಲಿ,
“ಈ ಸಂಶೋಧನಾ ಲೇಖನವು ವಿಜ್ಞಾನ ಸಮುದಾಯಕ್ಕೆ ಮಹತ್ವದ ಕೊಡುಗೆಯಾಗಿದೆ. ಪರಿಶೀಲನೆಯ ನಂತರ ಪ್ರಕಟಣೆಗೆ ಸ್ವೀಕರಿಸಿದ್ದೇವೆ” ಎಂಬ ಸಂದೇಶ ನೀಡಲಾಗಿದೆ.
ಈ ಸಾಧನೆಯಿಂದ ನಮ್ಮ ವಿಜ್ಞಾನಿಗಳ ಪರಿಶ್ರಮ, ಅಧ್ಯಯನ ಮತ್ತು ಜ್ಞಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗೌರವ ದೊರೆತಿದೆ ಶ್ರೀ ರಾಜೇಶ್ ಮೇದಾರ್ ಸನ್ ರೈಸ್ ಗ್ರೂಪ್ ಇನ್ಸ್ಟಿಟ್ಯೂಷನ್ ನಲ್ಲಿ ಜೀವರಸಾಯನಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸ್ತಾ ಇದ್ದು ಸದರಿವರ ಸಾಧನೆಯು ಕನ್ನಡಿಗರ ಸಾಧನೆ ಎಂದು ಸಂಸ್ಥೆಯ ಅಧ್ಯಕ್ಷರಾದ ಇರ್ಫಾನ್ ಅತ್ತಾರ್ ಪ್ರಶಂಸೆ ವ್ಯಕ್ತಪಡಿಸಿದರು ಮತ್ತು ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಸಹೋದ್ಯೋಗಿಗಳು ಸಿಬ್ಬಂದಿ ವರ್ಗದವರು ಶುಭಾಶಯಗಳು ಸಂತೋಷ ವ್ಯಕ್ತಪಡಿಸಿದರು.
