ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರನ್ನು ಭೇಟಿಯಾಗಿ ಕಲ್ಯಾಣ ಕರ್ನಾಟಕದ ಜನರ ಆರೋಗ್ಯ ಸಂರಕ್ಷಣೆಗಾಗಿ ರಾಯಚೂರಿಗೆ ಏಮ್ಸ್ ಮಂಜೂರಾತಿ ನೀಡುವಂತೆ ಹಲವಾರು ಮನವಿಗಳನ್ನು ಸಲ್ಲಿಸಿದರೂ ಕೇಂದ್ರ ಸರ್ಕಾರ ತಾರಮ್ಯ ಧೋರಣೆ ಬಗ್ಗೆ ಗಮನ ಸೆಳೆದಿದ್ದಾರೆ.

ರಾಯಚೂರು ಜನರು 1,000 ದಿನಗಳ ಕಾಲ ಹೋರಾಟ ನಡೆಸಿದರೂ ಕಿಮ್ಮತ್ತು ನೀಡದ ಕೇಂದ್ರ ಸರ್ಕಾರವು ಕಿಮ್ಮತ್ತು ನೀಡಲಿಲ್ಲ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಾದಿಯಾಗಿ ಮನವಿಗಳನ್ನು ಸಲ್ಲಿಸಿದರೂ ಕಿಮ್ಮತ್ತು ನೀಡಲಿಲ್ಲ. ನಮ್ಮ ರಾಜ್ಯ ಸರ್ಕಾರ ಕೇಂದ್ರದ ಆರೋಗ್ಯ, ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಯೋಜನಾ ವರದಿ ಸಲ್ಲಿಸಿದೆ. ಏಮ್ಸ್ ಗೆ ಅಗತ್ಯವಿರುವ ಭೂಮಿ, ಸಂಪರ್ಕ ವ್ಯವಸ್ಥೆ ಮಾಡಲು ಮುಂದಾಗಿದೆ. ಇಷ್ಟಾದರೂ ಕೇಂದ್ರದ ಬಿಜೆಪಿ ಸರ್ಕಾರ ಬಡವರು, ಹಿಂದುಳಿದ ಸಮುದಾಯಗಳನ್ನೇ ಹೆಚ್ಚಾಗಿ ಹೊಂದಿರುವ ರಾಯಚೂರನ್ನು ಹೊರತಾಗಿಸಿ, ಇತರೆ 22 ರಾಜ್ಯಗಳಿಗೆ ಏಮ್ಸ್ ಮಂಜೂರು ಮಾಡುವ ಮೂಲಕ ತನ್ನ ಮಲತಾಯಿ ಧೋರಣೆ ಮುಂದುವರಿಸಿದೆ.

ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಕರ್ನಾಟಕ ಕೇಂದ್ರ ಸಚಿವರು ಈ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡದೆ ಅಧಿಕಾರ ಲಾಲಸೆಗಾಗಿ ಮುಗುಮ್ಮಾಗಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಕೇಂದ್ರ ತಾರತ್ಯಮದ ವಿರುದ್ಧ ದನಿ ಎತ್ತಿದ್ದಾರೆ. ಕಲ್ಯಾಣ ಕರ್ನಾಟಕ ಜನರ ಹಿತಬಯಸುವುರಾದರೆ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿರುವುದೇಕೆ?

ಕೇಂದ್ರದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಶ್ರೀ ಪ್ರಾಲ್ಹದ್ ಜೋಶಿ ಅವರೇ, ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರೇ ಈವಿಚಾರವಾಗಿ ತಾವು ಮೌನಮುರಿದು ಮಾತನಾಡುತ್ತಿಲ್ಲ ಏಕೆ? ನಿಮಗೆ ಕಲ್ಯಾಣ ಕರ್ನಾಟಕ ಜನರ ಹಿತ ಮುಖ್ಯವಲ್ಲವೇ ?

Leave a Reply

Your email address will not be published. Required fields are marked *