ನಗರದ ನೂತನ ವಿದ್ಯಾಲಯ ಸಂಸ್ಥೆ ಪದವಿ ಕಾಲೇಜಿಗೆ ಉದ್ಯೋಗ ಆಧಾರಿತ ನಾಲ್ಕು ವರ್ಷದ ಸಮಗ್ರ ಶಿಕ್ಷಕ ಶಿಕ್ಷಣ ಕಾರ್ಯಕ್ರಮ (ಐಟಿಇಪಿ) ಡಬಲ್ ಡಿಗ್ರಿ ಕೋರ್ಸ್ ಮಂಜೂರಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ.ಗೌತಮ ಜಹಾಗೀರದಾರ್, ಕಾರ್ಯದರ್ಶಿ ಅಭಿಜಿತ್ ದೇಶಮುಖ ಹೇಳಿದರು.ಕಲ್ಯಾಣ ಕರ್ನಾಟಕದಲ್ಲಿ ಈ ಕೋರ್ಸ್ ಪಡೆದಿರುವ ಏಕೈಕ ಕಾಲೇಜು ನಮ್ಮದು.ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದ್ದು, ಪಿಯುಸಿ ಬಳಿಕ ಈ ಕೋರ್ಸ್ಗೆ ಸೇರಬಹುದು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಐಟಿಇಪಿ ಕೋರ್ಸ್ ಪೂರ್ಣಗೊಂಡ ನಂತರ ಬಿಎಸ್ಸಿ ಬಿ.ಇಡಿ, ಬಿಎ ಬಿ.ಇಡಿ ಪದವಿ ಪ್ರಮಾಣಪತ್ರ ದೊರೆಯಲಿದೆ. ಇದರ ಹೊರತಾಗಿ ಪ್ರತ್ಯೇಕ ಬಿ.ಇಡಿ ಮಾಡುವ ಅಗತ್ಯವಿಲ್ಲ. ಪದವಿ ನಂತರ ಬಿ.ಇಡಿ ಮಾಡಿದರೆ ಐದು ವರ್ಷದ ಅವಧಿ. ಆದರೆ ನಾಲ್ಕು ವರ್ಷದ ನೂತನ ಕೋರ್ಸ್ನಲ್ಲಿ ಬಿ.ಇಡಿ ಜತೆಯಾಗಿ ಪ್ರಮಾಣಪತ್ರ ಸಿಗಲಿದ್ದು, ಶಿಕ್ಷಕರ ಹುದ್ದೆಗೆ ನೇರವಾಗಿ ಅರ್ಹತೆ ಪಡೆಯಲಿದ್ದಾರೆ ಎಂದು ವಿವರಿಸಿದರು.ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಡಿ ಶಾಸನಬದ್ಧ ಸಂಸ್ಥೆಯಾಗಿರುವ ಎನ್ಸಿಟಿಇ ಈ ಕೋರ್ಸ್ ಮಂಜೂರು ಮಾಡಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದ ಸಂಲಗ್ನತೆ ಪಡೆಯಲಾಗುತ್ತಿದೆ. ಎನ್ಇಪಿ 2020 ಹೊಂದಾಣಿಕೆಯೊಂದಿಗೆ ಕೋರ್ಸ್ ವಿದ್ಯಾರ್ಥಿ ಶಿಕ್ಷಕರಿಗೆ ಸಂಯೋಜಿತ ಶಿಕ್ಷಕರ ಶಿಕ್ಷಣ ಕಾರ್ಯಕ್ರಮ (ಐಟಿಇಪಿ) ಒಳಗೊಂಡಿದೆ. ಶಿಕ್ಷಕರ ಶಿಕ್ಷಣಕ್ಕಾಗಿ ಏಕರೂಪದ ಮಾನದಂಡ ಕಾಯ್ದುಕೊಳ್ಳಲು, ಪೂರ್ವಸೇವಾ ಶಿಕ್ಷಕರ ಸಿದ್ಧತೆ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಪರೀಕ್ಷೆ ಸಂಸ್ಥೆ(ಎನ್ಇಟಿ) ನಡೆಸುವ ವಿಷಯ ಮತ್ತು ಯೋಗ್ಯತಾ ಪರೀಕ್ಷೆ ಮೂಲಕ ಪ್ರವೇಶಾವಕಾಶವಿದೆ ಎಂದು ತಿಳಿಸಿದರು.ಪ್ರೊ.ಗೋವಿಂದ ಪೂಜಾರ್, ಡಾ.ಮೀನಾ ಪತಕಿ, ಡಾ.ಗಿರೀಶ ಗಲಗಲಿ, ಡಾ.ದಯಾನಂದ ಶಾಸಿ, ಅನಂತ ಗುಂಡಿ ಇದ್ದರು.
ವಿನ್ಯಾಸ&ಅನುಷ್ಠಾನ ವಿಧಾನ

ಬಹುಶಿಸ್ತೀಯ ಪರಿಸರದಲ್ಲಿ ಶಿಕ್ಷಣ, ಶಾಲಾ ವ್ಯವಸ್ಥೆಯ 12ನೇ ತರಗತಿ ನಂತರ ನಾಲ್ಕು ವರ್ಷ ಅವಧಿ ಕೋರ್ಸ್ಗೆ ಎನ್ಟಿಎ ನಡೆಸುವ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶ, 2030ರ ವೇಳೆಗೆ ಶಿಕ್ಷಕರಾಗಲು ಕನಿಷ್ಠ ಪದವಿ ಅರ್ಹತೆ, ಯುಜಿಸಿ ಪ್ರಕಾರ ಕ್ರೆಡಿಟ್ ವ್ಯವಸ್ಥೆ ಪರಿಚಯ, ಸಂಯೋಜಿತ ದ್ವಿ ಪ್ರಮುಖ ಪದವಿ, ಶಿಕ್ಷಣದ ಶಿಸ್ತು ಮತ್ತು ವೃತ್ತಿಪರ ಜ್ಞಾನ, 21ನೇ ಶತಮಾನದ ಕೌಶಲ ಮೇಲೆ ಕೇಂದ್ರೀಕೃತ, ಸೆಕೆಂಡರಿ ಹಂತದ ವಿಶೇಷತೆ&9ರಿಂದ 12ನೇ ತರಗತಿ ಬೋಧನೆಗಾಗಿ, ಹೈಸ್ಕೂಲ್ ಮತ್ತು ಪಿಯು ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಹತೆ ದೊರೆಯಲಿದೆ.ನಾಲ್ಕು ವರ್ಷದ ಸಂಯೋಜಿತ ಬಿಇಡಿ ಶಿಕ್ಷಣದಲ್ಲಿ ಡ್ಯೂಯಲ್ ಮೇರ್ಜಸ್ ಸಮಗ್ರ ಪದವಿ ಮತ್ತು ವಿಶೇಷ ವಿಷಯವಾಗಿದೆ. ಭಾಷೆ, ಇತಿಹಾಸ, ಸಂಗೀತ, ಗಣಿತ, ಕಂಪ್ಯೂಟರ್, ವಿಜ್ಞಾನ, ರಸಾಯನಶಾಸ, ಅರ್ಥಶಾಸ, ಕಲೆ, ದೈಹಿಕ ಶಿಕ್ಷಣ ಇತತೆ, ಶಿಕ್ಷಕರ ಶಿಕ್ಷಣವು ಸಮಾಜಶಾಸ, ಇತಿಹಾಸ, ವಿಜ್ಞಾನ, ಮನೋವಿಜ್ಞಾನ, ಬಾಲ್ಯದ ಆರೈಕೆ ಮತ್ತು ಶಿಕ್ಷಣ, ಮೂಲ ಸಾಕ್ಷರತೆ ಮತ್ತು ಸಂಖ್ಯಾಶಾಸ, ಭಾರತದ ಜ್ಞಾನ, ಅದರ ಮೌಲ್ಯ, ನೀತಿ, ಕಲೆ, ಸಂಪ್ರದಾಯವನ್ನು ಒಳಗೊಂಡಿದೆ.
ಅರ್ಜಿ ಸಲ್ಲಿಕೆಗೆ ಮಾ.10 ಕೊನೇ ದಿನಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ಮಾ.10 ಕೊನೆಯ ದಿನ. ಏ.17ರಂದು ಪ್ರವೇಶ ಪರೀಕ್ಷೆ ನಡೆಸಿ ವೆಬ್ಸೈಟ್ (ಎಚ್ಟಿಟಿಪಿ@//ಎನ್ಟಿಎ.ಎಸಿ.ಇನ್)ನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಆಬ್ಜೆಕ್ಟಿವ್ ಟೈಪ್ ವಿತ್ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿರಲಿವೆ. 12ನೇ ತರಗತಿ ಪಠ್ಯಕ್ರಮ ಆಧರಿಸಿ ಕನ್ನಡ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ”
2026&27ರ ಶೈಕ್ಷಣಿಕ ಸಾಲಿನಿಂದ ಎನ್ಇಪಿ 2020ರಲ್ಲಿ ಕಲ್ಪಿಸಿದಂತೆ ಸಂಯೋಜಿತ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಕ್ಕಾಗಿ ಆಯ್ದ ಕೇಂದ್ರವಾಗಿ ನೂತನ ವಿದ್ಯಾಲಯ ಪದವಿ ಕಾಲೇಜಿಗೆ ಮಾನ್ಯತೆ ನೀಡಲಾಗಿದೆ. ಈ ಕೋರ್ಸ್ ಪಡೆದ ಕಲ್ಯಾಣ ಕರ್ನಾಟಕದ ಏಕೈಕ ಕಾಲೇಜು ನಮ್ಮದು

Leave a Reply

Your email address will not be published. Required fields are marked *