ಹಾಲಾಪೂರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಗ್ರಾಮದ ಕರಿಯಪ್ಪ ಹಿರೇಕುರುಬರ ಅವರು ಕಳೆದ 35 ವರ್ಷಗಳಿಂದ ಶಿವರಾತ್ರಿ ದಿನದಂದು ತಮ್ಮ ಮನೆಯಿಂದ ಶ್ರೀ ದುಗ್ಗಮ್ಮ ದೇವಿಯ ಭಾವಚಿತ್ರ ಮೆರವಣಿಗೆಯು ಗಚ್ಚಿನ ಹೊಲದ ದೇವಸ್ಥಾನದವರೆಗೆ ಕುಂಭ, ಕಳಸ, ಡೊಳ್ಳು ಗಳೊಂದಿಗೆ ಬಹಳಷ್ಟು ಸುಮಂಗಲಯರಿಂದ ಈ ಒಂದು ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ತಮ್ಮ ಗಚ್ಚಿನ ಹೊಲದಲ್ಲಿರುವ ಶ್ರೀ ದುಗ್ಗಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಪೂಜಾ ಪುನಸ್ಕಾರಗಳನ್ನು ನೆರವೇರಿಸಿ ನಂತರ ಬಂದಂತಹ ನೂರಾರು ಜನರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ಹಾಗೆ ಪ್ರತಿ ವರ್ಷ ದಸರಾ ಸಮಯದಲ್ಲಿ ಪ್ರವಚನ ಕಾರ್ಯಕ್ರಮ ನಡೆಯುತ್ತದೆ ಇದಕ್ಕೆಲ್ಲ ಕಾರಣ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಸಹಾಯ ಸಹಕಾರದೊಂದಿಗೆ ಇಂಥಹ ಅಡವಿಯಲ್ಲಿ ಇರುವ ದೇವಸ್ಥಾನಕ್ಕೆ ಜನರು ಬಂದು ಹೋಗುತ್ತಾರೆ ಎಂದು ಕರಿಯಪ್ಪ ಹಿರೇಕುರುಬೂರ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಿದ್ದಯ್ಯ ಸ್ವಾಮಿ ಕಿರಾಣಿ, ಈಶಣ್ಣ ಸಾವುಕಾರ, ಶರಣಪ್ಪ ಏಳುಕುರಿ ಇನ್ನಿತರ ಇದ್ದರು.

Leave a Reply

Your email address will not be published. Required fields are marked *