ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಪಾಟೀಲ್ ನ್ಯೂಸ್ ಅಲರ್ಟ್ ಸುದ್ದಿ ಚಾನೆಲ್ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಸಾನಿಧ್ಯವನ್ನು ಪೂಜ್ಯಶ್ರೀ ಮರಿಬಸವರಾಜ ದೇಸಿಕೇಂದ್ರ ಮಹಾಸ್ವಾಮಿಗಳು ಉಟಕನೂರು, ಅಭಿನವ ಶ್ರೀ ಸಿದ್ದಬಸವ ಮಹಾಸ್ವಾಮೀಜಿಗಳು ವಿರಕ್ತಮಠ ಬಳಗನೂರು, ಪರಮಪೂಜ್ಯ ಶ್ರೀ ದಂಡಗುಂಡಪ್ಪ ತಾತ ಜಂಗಮರಹಳ್ಳಿ, ಪೂಜ್ಯಶ್ರೀ ಮಂಜುನಾಥ ಸ್ವಾಮಿ ಹಳೆಕೋಟಿ ವಹಿಸಿದ್ದರು. ಕಾರ್ಯಕ್ರಮದ ಕುರಿತು ಅನೇಕರು ಮಾತನಾಡಿದರು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಸಂಗೀತಗಾರರಿಗೆ, ಸ್ಥಳೀಯ ವೈದ್ಯರಿಗೆ, ಗ್ರಾಮ ಪಂಚಾಯತಿಯ ನೀರು ಗಂಟೆ ವಾಟರ ಮ್ಯಾನ್ ಗಳಿಗೆ, ಪವರ್ ಮ್ಯಾನ್ ಗಳಿಗೆ , ಕಳೆದ ವರ್ಷ ಎಸ್ ಎಸ್ ಎಲ್ ಸಿ , ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ವಿಷಯದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಚೆನ್ನಯ್ಯ ತಾತ, ಶ್ರೀ ಕರಿಯಪ್ಪ ಹಿರೇಕುರುಬರ, ಬಸ್ಸಮ್ಮ ಬಸವರಾಜಪ್ಪಗೌಡ , ಶ್ರೀ ಗಣೇಶ ಪೂಜಾರಿ, ಮಲ್ಲಿಕಾರ್ಜುನ ಪಾಟೀಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶ್ರೀ ಜಗದೀಶಚಂದ್ರ ಸ್ವಾಮಿ ಅಧ್ಯಕ್ಷರು ಕೃಷಿ ಪ್ರಾಥಮಿಕ ಸಹಕಾರ ಸಂಘ, ಕರಿಯಪ್ಪ ಕೆ ಡಿ ಪಿ ಸದಸ್ಯರು, ಶಿವಣ್ಣ ನಾಯಕ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಬಿ ಕರಿಯಪ್ಪ, ನಾರಾಯಣಪ್ಪ ಕಾಸ್ಲಿ ಮಸ್ಕಿ, ಬಸನಗೌಡ ಹಿರೇಕಡಬೂರು, ಭೀಮಣ್ಣ ನಾಯಕ ಕಾಚಾಪೂರ, ಮಹಾಂತೇಶ ನಾಯಕ ಜಾಲವಾಡಿಗಿ, ಬಸವರಾಜ ಗೌಡ ವಡಗೇರಿ, ಎರಿತಾತ
ಜಂಗಮರಳ್ಳಿ, ಈರನಗೌಡ ದಳಪತಿ,ಬಸಪ್ಪ ಜಂಗಮರಳ್ಳಿ, ಮರಿಗೌಡ ಮಾಪಾ, ರಾಮರೆಡ್ಡಿ ಸಾಹುಕಾರ, ರವಿ ದೇಸಾಯಿ, ವೆಂಕೋಬ ಪ್ರಾಂಶುಪಾಲರು, ಸುಭಾಷ ಸಿಂಗ್ ಮುಖ್ಯಗುರುಗಳು ಇದ್ದರು, ನಂತರ ಗಂಗಾವತಿ ಶ್ರೀ ಕೊಟ್ಟೂರೇಶ್ವರ ಸಂಗೀತ ಬಳಗ, ಶ್ಯಾಮ್ ಖಾನಾಪುರ ತಂಡ, ಮೋನಮ್ಮ ಸೋಮನಮರಡಿ ಜಿ ಟಿವಿ ಸರಿಗಮಪ ಈ ಎಲ್ಲಾ ಕಲಾವಿದರಿಂದ ಸಂಗೀತ, ಗಾಯನ, ಹಾಸ್ಯ ಚಟಾಕಿಯಲ್ಲಿ ಜನರನ್ನು ತೆಲಾಡಿಸಿದರು. ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಮಂಜುನಾಥ ಶಿಕ್ಷಕರು, ಶ್ರೀಕಾಂತ ಕೆ ಉಪನ್ಯಾಸಕರು ನಡೆಸಿ ಕೊಟ್ಟರು.

Leave a Reply

Your email address will not be published. Required fields are marked *