ರಾಯಚೂರು : ಮಂತ್ರಾಲಯ ನಡುವೆ ರಾತ್ರಿ 9 ಗಂಟೆಯ ಬಳಿಕ ಸರ್ಕಾರಿ ಬಸ್ ಸೇವೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಈ ಕುರಿತು ಚರ್ಚೆಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಲಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಹೊರಡಿಸಿರುವ ಪ್ರಕಟಣೆಯನ್ನು ಲಗತ್ತಿಸಿದ್ದಾರೆ.
ಈ ಪ್ರಕಟಣೆ ರಾತ್ರಿ 9 ಗಂಟೆಯ ನಂತರ ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್ ಸೇವೆ ಇಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್-X ಖಾತೆಯಲ್ಲಿ ಪ್ರಕಟವಾದ ಸುದ್ದಿಯ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾತ್ರಿ 9 ಗಂಟೆಯ ನಂತರ ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್‌ ಸೇವೆ ಇಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್-X ಖಾತೆಯಲ್ಲಿ ಪ್ರಕಟವಾದ ಸುದ್ದಿಯನ್ನು ಪರಿಶೀಲಿಸಲಾಯಿತು ಎಂದು ಹೇಳಿದ್ದಾರೆ.

ಪ್ರಸ್ತುತ ರಾಯಚೂರು-ಮಂತ್ರಾಲಯಕ್ಕೆ ರಾಯಚೂರು ಬಸ್ ನಿಲ್ದಾಣದಿಂದ ಬೆಳಗಿನ ಜಾವ 3:15 ರಿಂದ ರಾತ್ರಿ 23:30 ಗಂಟೆಯ ವರೆಗೆ ವೇಗದೂತ ಮತ್ತು ಪ್ರತಿಷ್ಠಿತ ಸಾರಿಗೆಗಳು ಸೇರಿದಂತೆ ಒಟ್ಟು 122 ಸುತ್ತುವಳಿಗಳು ಕಾರ್ಯಾಚರಣೆಯಲ್ಲಿರುತ್ತವೆ.

ಸದರಿ ಸಾರಿಗೆಗಳ ಪ್ರಯೋಜನವನ್ನು ಭಕ್ತಾಧಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳುತ್ತಿರುತ್ತಾರೆ ಎಂದು ಹೇಳಿದ್ದಾರೆ. ಪ್ರಸ್ತುತ 9 ಗಂಟೆಯ ನಂತರ ರಾಯಚೂರು ಬಸ್ ನಿಲ್ದಾಣದಿಂದ ಕಾರ್ಯಾಚರಣೆಯಲ್ಲಿರುವ ಬಸ್‌ಗಳ ವಿವರ ಇಲ್ಲಿದೆ.

122/ 123. ನಾನ್ ಎಸಿ ಸ್ಲೀಪರ್. ರಾಯಚೂರಿನಿಂದ ಹೊರಡುವ ಸಮಯ 21:21
46/ 47. ವೇಗದೂತ. ರಾಯಚೂರಿನಿಂದ ಹೊರಡುವ ಸಮಯ 21:30
59/ 60. ನಾನ್ ಎಸಿ ಸ್ಲೀಪರ್. ರಾಯಚೂರಿನಿಂದ ಹೊರಡುವ ಸಮಯ 21:30
15/ 16. ಅಂಬಾರಿ ಡ್ರೀಮ್‌ ಕ್ಲಾಸ್. ರಾಯಚೂರಿನಿಂದ ಹೊರಡುವ ಸಮಯ 21:45
98/ 99. ಕಲ್ಯಾಣ ರಥ. ರಾಯಚೂರಿನಿಂದ ಹೊರಡುವ ಸಮಯ 23:30
ಸಾರ್ವಜನಿಕ ಪ್ರಯಾಣಿಕರು ಹಾಗೂ ಭಕ್ತಾಧಿಗಳ ಅನುಕೂಲಕ್ಕಾಗಿ ರಾಯಚೂರು ಘಟಕ-1ರಿಂದ ಅನುಸೂಚಿ ಸಂಖ್ಯೆ:50 ರಲ್ಲಿ ರಾಯಚೂರಿನಿಂದ ಮಂತ್ರಾಲಯಕ್ಕೆ ಬೆಳಗಿನ ಜಾವ 4 ಗಂಟೆಗೆ ಹಾಗೂ ದೇವದುರ್ಗ ಘಟಕದ ಅನುಸೂಚಿ ಸಂಖ್ಯೆ 46/ 47 ರಲ್ಲಿ ದೇವದುರ್ಗ-ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ರಾತ್ರಿ 21:30ಕ್ಕೆ ರಾಯಚೂರು ಬಸ್ ನಿಲ್ದಾಣ ನಿರ್ಗಮಿಸಿ ಮಂತ್ರಾಲಯಕ್ಕೆ ಕಾರ್ಯಾಚರಣೆಯಾಗುವಂತೆ ಹೆಚ್ಚುವರಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.

ಸದರಿ ಸಾರಿಗೆಗಳ ಪ್ರಯೋಜನವನ್ನು ಸಾರ್ವಜನಿಕ ಪ್ರಯಾಣಿಕರು ಹಾಗೂ ಭಕ್ತಾಧಿಗಳು ಪಡೆದುಕೊಳ್ಳಬಹುದಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ.

Leave a Reply

Your email address will not be published. Required fields are marked *