ಮಸ್ಕಿ: ಕರ್ನಾಟಕ ವಿದ್ಯುತ್ ಪ್ರಸರಣವನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸುವ ಉದ್ದೇಶವನ್ನು ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ವಿರೋಧಿಸಿ ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.
ನಂತರ ಎಇಇ ವೆಂಕಟೇಶ ಮಾತನಾಡಿ ಕೇಂದ್ರ ಸರಕಾರ ಮುಂಬರುವ ಅಧಿವೇಶನದಲ್ಲಿ ವಿದ್ಯುತ್ ಸುಧಾರಣ ಕಾಯ್ದೆ 2026ನ್ನು ಜಾರಿಗೆ ತಂದು ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗಿಕರಣಗೊಳಿಸುವ ಉದ್ದೇಶ ಹೊಂದಿದ್ದು, 2026ರ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರಾದ್ಯಂತ ಒಂದು ದಿನ ಮುಷ್ಕರಕ್ಕೆ ಅಖಿಲ ಭಾರತ ವಿದ್ಯುತ್ ಇಂಜಿನಿಯರ್ ಮತ್ತು ನೌಕರರ ಒಕ್ಕೂಟ ನಿರ್ಧರಿಸಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಕ.ವಿ.ಪ್ರನಿ.ನೌಕರರ ಸಂಘ ಅಧ್ಯಕ್ಷ ಶ್ರೀಶೈಲ ಪಾಟೀಲ್, ಕಾರ್ಯದರ್ಶಿ ಚಂದಯ್ಯ, ವೆಂಕಟೇಶ ಪಾಟೀಲ್ ತಿರುಪತಿ, ಮೌನೇಶ ಪಾಟೀಲ್, ಹನುಮನಗೌಡ, ವಿನಾಯಕ, ಬನ್ನೆಪ್ಪ, ರವಿ, ರಾಜಶೇಖರಗೌಡ, ಎಲ್ಲಾ ಶಾಖೆಯ ಶಾಖಾಧಿಕಾರಿಗಳು
ಮತ್ತು ಸಂಘದ ಸದಸ್ಯರು ಅಧಿಕಾರಿಗಳು ಹಾಗೂ ನೌಕರರು, ಸಿಬ್ಬಂದಿಗಳಿದ್ದರು.ಮಸ್ಕಿ ಪಟ್ಟಣದಲ್ಲಿ ವಿದ್ಯುತ್ ಪ್ರಸರಣವನ್ನು ಖಾಸಗೀಕರಣಗೊಳಿಸುವುದುನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *