ಅರಕೇರಾ 12 : ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಸೊಗಡಿನ ಆಚರಣೆ ಹಾಗೂ ಪರಂಪರೆಯ ಉಳಿವಿಗೆ ಪ್ರತಿಯೊಬ್ಬರ ಸಹಕಾರ ನೀಡಬೇಕು ಎಂದು ವೇ.ಮೂ. ಕಲಿಗಣನಾಥ ಸ್ವಾಮಿ ಹೇಳಿದರು.
ತಾಲ್ಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿ ವೀರಭದ್ರ ಸ್ವಾಮಿಗಳ‌ ಜಾತ್ರೆಯ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಎತ್ತುಗಳು ಬಾರ ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಇದೊಂದು ರೈತರ ಹಬ್ಬವಾಗಿದ್ದು ,ತಮ್ಮ ಎತ್ತುಗಳ ಪ್ರದರ್ಶನ ಹಾಗೂ ಸಾಮರ್ಥ್ಯ ಇಲ್ಲಿ ಅನಾವರಣ ಮಾಡಲು ಉತ್ತಮ ಅವಕಾಶವಿದೆ. ಪೂರ್ವಜರ ಕಾಲದ ಆಚರಣೆ, ವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಲು ಆಗಾಗ್ಗೆ ಇಂತಹ ಸ್ಪರ್ಧೆಗಳನ್ನು ಆಯೋಜಿಸಿಬೇಕು
ಇದರಿಂದ ನಮ್ಮ ನೆಲದ ಸಂಸ್ಕೃತಿ ಗೌರವ ಹೆಚ್ಚುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗೆದ್ದಿರುವ ಅಂತಹ ಎತ್ತುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನೆರವೇರಿತು
ಪ್ರಥಮ ಬಹುಮಾನ 21,000 ರವಿ ಗೌಡ ಮಾತ್ಪಳ್ಳಿ,
ದ್ವಿತೀಯ ಬಹುಮಾನ 15,000 ತಾಯಪ್ಪ ಇರಬಿಗೇರ
ತೃತೀಯ ಬಹುಮಾನ 10,000 ರಂಗನಾಥ್ ಇರಬಿಗೇರ
ಚತುರ್ಥಿ ಬಹುಮಾನ ನವಕಲ್ಲು ಕಿಚ್ಚ ಬಾಯ್ಸ್ 5,000 ಈ ರೀತಿಯಾಗಿ ಪೂಜ್ಯಶ್ರೀಗಳಿಂದ ಬಹುಮಾನಗಳನ್ನು ವಿತರಿಸಲಾಯಿತು.
ಈ ವೇಳೆಯಲ್ಲಿ ಬಸವರಾಜ್ ಪೂಜಾರಿ ಅರಕೇರಾ, ಹನುಮಂತರಾಯ ಆಕಳ ಕುಂಪಿ, ಶೇಖರಪ್ಪ ಗೌಡ ಅರಕೇರಾ, ಪಶುಆಧಿಕಾರಿ ಇಮಾಮ್ ಸಾಬ್, ಹುಸ್ಮಾನ್ ಅಲ್ಲಿ,ಕಲ್ಲು ತುಂಡಿನ ಅಧ್ಯಕ್ಷರು ರಾದ ರವಿಗೌಡ ಮಾತ್ಪಳ್ಳಿ, ನಿರ್ಣಯಾಕರಾದ ಹನುಮಂತರಾಯ ಜಿ, ಶರಣಬಸವ ಕಾನಪುರ್, ಗ್ರಾಮದ ಮುಖಂಡರು ಗುರುಹಿರಿಯರು ಹಾಗೂ ಕಲ್ಲು ತುಂಡು ಕಮಿಟಿಯ ಊರಿನ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *