ಅರಕೇರಾ :
ಮಕ್ಕಳ ಕಲಿಕೆಯನ್ನು ತಿಳಿಯುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತದೆ. ಎಂದು ತಾಲೂಕು ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜಪೂಜಾರಿ ಅಭಿಪ್ರಾಯಪಟ್ಟರು. ಅವರು ಬುಧುವಾರ ಅರಕೇರಾ ತಾಲೂಕಿನ ಬಿ. ಗಣೇಕಲ್ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆಗೊಂಡಿದ್ದ ಬಿ. ಗಣೇಕಲ್ ಕ್ಲಸ್ಟರ್‌ನ ಕಲಿಕಾಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ.
ಗುಣಮಟ್ಟದ ಶಿಕ್ಷಣವನ್ನು ನೀಡಲು ಆದ್ಯತೆ ನೀಡಲಾಗಿದೆ. ಮಕ್ಕಳ ಕಲಿಕೆಗೆ ಶಿಕ್ಷಕರು ವಿಶೇಷ ಗಮನಹರಿಸಿ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.
ಪ್ರಸ್ತಾವಿಕವಾಗಿ ಬಸವರಾಜ ಸಾತಲ್ ಸಿ ಆರ್ ಪಿ ಬಿ ಗಣೇಕಲ್ ಮಾತನಾಡಿದರು.ವೆಂಕಟೇಶ್ ಇ ಸಿ ಓ ಶಿವಕುಮಾರ್ ನಾಡಗೌಡ ಬಿ ಆರ್ ಪಿ ಹಾಗೂ SDMC ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ರೈತ ಸಂಘದ ಅಧ್ಯಕ್ಷರು ಮುಖ್ಯ ಗುರುಗಳು ಶಿಕ್ಷಕರು ಅತಿಥಿ ಶಿಕ್ಷಕರು ಭಾಗವಹಿಸಿದ್ದರು.ಪ್ರಿಯಾಂಕ ಶಿಕ್ಷಕರು ಸ್ವಾಗತ ಕೋರಿದರು ಸದ್ದಂ ಹುಸೇನ್ ಶಿಕ್ಷಕರು ವಂದಿಸಿದರು.

