ಕರ್ನಾಟಕ ಸರಕಾರವು ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕಲಾ ತಂಡದಿಂದ ಬೀದಿ ನಾಟಕದ ಮೂಲಕ ನೀಡಲಾಗುತ್ತಿದ್ದು ಜನರು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ದೇವದುರ್ಗದ ತಾಲೂಕಾ ಸಾರ್ವಜನಿಕ ಅಸ್ಪತ್ರೆಯ ವೈದ್ಯಾಧಿಕಾರಿ ಡಾ ನಾಗರಾಜ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ದೇವದುರ್ಗ ಮಾಹಿತಿ ಶಿಕ್ಷಣ ಸಂವಹನ ವಿಭಾಗದಿಂದ ದೇವದುರ್ಗದ ಆಸ್ಪತ್ರೆಯ ಹತ್ತಿರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಾನಪದ ಕಲಾ ಪ್ರದರ್ಶನದ ಮೂಲಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾಗೃತಿಗಾಗಿ ಜಾನಪದ ಕಲಾ ಪ್ರದರ್ಶನದ ವೇಳೆ, ಮಾತನಾಡಿ ಕರ್ನಾಟಕ ಸರಕಾರ ನಿಮ್ಮ ಆರೋಗ್ಯ-ನಮ್ಮ ಆಧ್ಯತೆ ಎಂಬ ಧ್ಯೆಯವಾಕ್ಯದೊಂದಿಗೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸುರಕ್ಷಿತ ಹೆರಿಗೆ ಸೇವೆ, ಲಸಿಕೆಗಳು, ಅಗತ್ಯವುಳ್ಳವರಿಗೆ ರಕ್ತ ಒದಗಿಸುವಿಕೆ, ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ, ಹೃದಯ ಆರೈಕೆಗಾಗಿ ಡಾ ಪುನೀತ್ ರಾಜಕುಮಾರ್‌ ಹೃದಯಜ್ಯೋತಿ ಯೋಜನೆ, ಕಿಡ್ನಿ ಆರೈಕೆಗೆ ಡಯಾಲಿಸಿಸ್‌ ಸೇವೆ ಮುಂತಾದವುಗಳನ್ನು ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸೇವೆ ನೀಡಲಾಗುತ್ತಿದ್ದು, ಇವೆಲ್ಲವುಗಳ ಜೊತೆಗೆ ಬಾಲ್ಯವಿವಾಹ ತಡೆ, ಭ್ರೂಣ ಲಿಂಗಪತ್ತೆ ನಿಷೇಧ ಕಾಯ್ದೆಯಡಿ ದಂಡ ಜೈಲು ಶಿಕ್ಷೆ, ನಗುಮಗು, 108 ಆಂಬ್ಯುಲೆನ್ಸ್ ಸೇವೆ, ಸಮುದಾಯದಲ್ಲಿ ಕಂಡುಬರಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಕ್ಷೀಪ್ರ ನಿಗಾವಣೆ, ಪರೀಕ್ಷೆ, ಕುಷ್ಟ ರೋಗ, ಕ್ಷಯರೋಗ, ಉಪಶಮನ ಆರೈಕೆ, ಆಪ್ತ ಸಮಾಲೋಚನೆ,
ಕುರಿತು ಜಾಗೃತಿ ನೀಡಲಾಗುತ್ತಿದ್ದು, ಜೊತೆಗೆ ಉಚಿತ ಕನ್ನಡಕ ವಿತರಣೆ, ಕಣ್ಣಿನ ಪೋರೆ ಶಸ್ತ್ರಚಿಕಿತ್ಸೆ, ದಂತ ಭಾಗ್ಯದಡಿ ಹಲ್ಲಿನ ಸೇಟ್‌ ಅಳವಡಿಕೆ, ಕುರಿತು ತಾಲೂಕಿನಲ್ಲಿ ಶೃತಿ ಸಂಸ್ಕೃತಿ ಕಲಾ ತಂಡದಿಂದ ‌ನೀಡುವ ಜಾಗೃತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ ನಿರ್ಮಲಾದೇವಿ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಸೋಮಪ್ಪ, ಚನ್ನಬಸವಯ್ಯ ಹೀರೆಮಠ, ಹಿರಿಯ ಫಾರ್ಮಸಿ ಅಧಿಕಾರಿ ಜಯಕುಮಾರ, ಆರೋಗ್ಯ ನೀರಿಕ್ಷಣಾಧಿಕಾರಿ ಚಂದ್ರಾಮಪ್ಪ, ಶರಣಪ್ಪ ರಾಂಪೂರು, ಚಾಂದಬೀ ಇಟಗಿ, ಇಮಾಮ್‌ ಅಲಿ ಇಲಕಲ್ಲ, ಮನೋಜಕುಮಾರ, ಕರಗುಳಿ ಆಂಜನೇಯ, ಬಸಪ್ಪ ಮಾಶೇಟ್ಟಿ, ಆಶಾ ಕಾರ್ಯಕರ್ತೆ ಲಕ್ಷ್ಮೀ, ಕಲಾ ತಂಡದ ಡಿಂಗ್ರಿ ನರಸಪ್ಪ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *