ಮಾನವಿ: ನಗರದ ಶ್ರೀ ಮಾರಿಕಾಂಬಾ ಹಾರ್ಡ್ವೇವೆರ್ ಹತ್ತಿರ ವಿಶ್ವಕರ್ಮ ಸಮಾಜದ ಮುಖಂಡರು,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಕಾರ್ಯದರ್ಶಿ ಸೋಮಣ್ಣ ಪತ್ತಾರ ಸುಕಲಪೇಟೆ,ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಉದಯಕುಮಾರ ಪತ್ತಾರ ಮಸ್ಕಿ ಹಿರಿಯ ಮುಖಂಡರಾದ ಮನೋಹರ ವಕೀಲರು ನೇತೃತ್ವದಲ್ಲಿ ಪ್ರಥಮ ವಿಶ್ವಕರ್ಮ ಸಂಘಟನಾ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ಉದಯಕುಮಾರ ಪತ್ತಾರ ಮಾತನಾಡಿ ಮಾನವಿ ತಾಲೂಕಿನಲ್ಲಿ ಎಲ್ಲಾ ಹೋಬಳಿ ಗ್ರಾಮಗಳಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳು ಒಂದಾಗಿ ಮುಖ್ಯ ವಾಹಿನಿಗೆ ಬರಬೇಕು,ಪ್ರತಿಯೊಂದು ಕ್ಷೇತ್ರದಲ್ಲಿ ಭಾಗವಹಿಸಬೇಕು,ವಿಶ್ವಕರ್ಮ ಸಮಾಜ ಕಾಯಕ ಸಮಾಜವಾಗಿದೆ.ನಮ್ಮ ಸಮಾಜದ ಧೀಮಂತ ನಾಯಕರಾದ ಕೆ.ಪಿ.ನಂಜುಂಡಿ ಕನಸಿನಂತೆ ನಾವುಗಳು ಎಲ್ಲಾ ಸಮಾಜಗಳಂತೆ ಸಂಘಟಿತಾರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತಗಬೇಕು ಆದ್ದರಿಂದ ನಾವೆಲ್ಲರೂ ಸಮಾಜವನ್ನು ಗ್ರಾಮೀಣ ಮಟ್ಟದಿಂದ ಸಂಘಟಿಸೋಣ ಎಂದು ಸಮಾಜದ ಬಂಧುಗಳಿಗೆ ಸಂಘಟಿರಾಗುವಂತೆ ಕರೆ ನೀಡಿದರು.
ಇದೇವೇಳೆ ನೂತನವಾಗಿ ಆಯ್ಕೆಯಾದ ಜಿಲ್ಲಾ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಧರ್ಮಣ್ಣ ಗುಂಜಳ್ಳಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ದೇವರಾಜಕಂಬಾರ ಮಸ್ಕಿ,ಯುವ ಘಟಕ ಅಧ್ಯಕ್ಷ ಸುರೇಶ ಸಂಗಾಪುರ,ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಕೆ.ಹೊಸಹಳ್ಳಿ,ಸಂಘಟನಾ ಕಾರ್ಯದರ್ಶಿ ರಾಜು ಬಳಗಾನೂರು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಾಜಿ ಯುವ ಘಟಕದ ಅಧ್ಯಕ್ಷ ವಿಜಯಕುಮಾರ ಮಸ್ಕಿ, ಕಾಳಪ್ಪ ಮಸ್ಕಿ,ಮಂಜುನಾಥ ಕೊಟ್ನೆಕಲ್ ಸಿಂಧನೂರು,ಅಮರನಾಥ ಮಾನವಿ,ಶಿವರಾಜ ಹಾರ್ಡ್ವೇವೆರ್ ಮಾನವಿ,ಈರಣ್ಣ ಹರವಿ,ಮಹೇಶ ನಿರಮಾನ್ವಿ,ಬದ್ರಿ ಮಾನವಿ,ಬ್ರಹ್ಮಯ್ಯ ಕೊಟ್ನೆಕಲ್,ಶ್ರೀಧರ ಮಾನವಿ,ಸರ್ವಜ್ಞ ಸಂಗಾಪುರ,ಬಸವರಾಜ ಸಂಗಾಪುರ, ಬಸವರಾಜ ಜಂಬಲದಿನ್ನಿ,ಷಣ್ಮುಖ ಸಂಗಾಪುರ,ಸುರೇಶ ಬಿ.ಸಂಗಾಪುರ, ವೀರಭದ್ರಿ ಸಂಗಾಪುರ,ಬ್ರಹ್ಮಯ್ಯ ಶಿಲ್ಪಿ ಸಂಗಾಪುರ,ಚಾಮರಾಜ ಬೊಮ್ಮನಾಳ, ಉದಯ ಸಂಗಾಪುರ,ಮೋಹನ್ ಮಾನವಿ,ವೀರೇಶ ಮಾನವಿ (ಬ್ಯಾಗವಾಟ್),ದೇವರಾಜ(ಬ್ಯಾಂಕ್) ಸಂಗಾಪುರ,ಅಮರೇಶ ಸಂಗಾಪುರ,ಕಾಳಪ್ಪ ಸಂಗಾಪುರ ಇನ್ನೂ ಹಲವಾರು ಸಮಾಜದ ಹಿರಿಯರು, ಯುವಕರು ಉಪಸ್ಥಿತರಿದ್ದರು.

