ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎನ್ನುವ ಪ್ರತೀತಿ ಹೊಂದಿರುವ ಐತಿಹಾಸಿಕ ಕಂಪ್ಲಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಕುಮಾರ ರಾಮನ ನಾಡಿನಲ್ಲಿ ಎರಡನೇ ಬಾರಿಗೆ ಕಂಪ್ಲಿ ಉತ್ಸವದ ಸಿದ್ಧತೆಗಳು ಗರಿಗೆದರಿದ್ದು, ಕಂಪ್ಲಿ ನಗರದುದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಗಮನ ಸೆಳೆಯುವ ಜೊತೆಗೆ ಕಂಪ್ಲಿ ಉತ್ಸವಕ್ಕೆ ಮೆರಗು ನೀಡಿದೆ. ಪ್ರಾಚೀನ ಕಾಲದಲ್ಲಿ ಹಂಪಿ ಸ್ಥಾಪನೆಗೆ ಸ್ಪೂರ್ತಿಯಾಗಿದ್ದ ಕಂಪ್ಲಿಯು ಮೊದಲಿಗೆ ತಾಲೂಕು ಕೇಂದ್ರವಾಗಿತ್ತು.
ನಂತರ ಹೊಸಪೇಟೆಯ ತಾಲೂಕು ವ್ಯಾಪ್ತಿಯಲ್ಲಿ ಕಂಪ್ಲಿ ಪಟ್ಟಣವಾಗಿತ್ತು. ಆದರೆ, ಈಗ ಮತ್ತೆ ಕಂಪ್ಲಿ ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದೆ.

Leave a Reply

Your email address will not be published. Required fields are marked *