ಬಳಗಾನೂರು: ಫೆ 11 ಸ್ಥಳೀಯ ಶ್ರೀ ಮರಿ ಬಸವಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 11ರಂದು ನಮ್ಮ ದೇಶದ ಭವ್ಯ ಪರಂಪರೆಯನ್ನು ಬಿಂಬಿಸುವ ‘ಹಳ್ಳಿ ಸೊಗಡು’ ಮತ್ತು ಸಂಸ್ಕಾರಯುತ ‘ತಾಯಂದಿರ ಪಾದಪೂಜೆ’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು,ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶಾಲೆಯ ಕಾರ್ಯಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, “ತಾಯಿಯೇ ಮೊದಲ ಗುರು. ಮಕ್ಕಳಲ್ಲಿ ಬಾಲ್ಯದಿಂದಲೇ ತಂದೆ-ತಾಯಿಯರ ಬಗ್ಗೆ ಗೌರವ ಮತ್ತು ಭಕ್ತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸುಸಂಸ್ಕೃತ ಗುಣಗಳನ್ನು ಬೆಳೆಸುತ್ತವೆ” ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಖೋ ಖೋ ಕ್ರೀಡೆಯಲ್ಲಿ ‘ಅತ್ಯುತ್ತಮ ಆಲ್ ರೌಂಡರ್’ ಆಗಿ ಮಿಂಚಿ, ನಮ್ಮ ಊರು, ಜಿಲ್ಲೆ ಹಾಗೂ ವಿಭಾಗಕ್ಕೆ ಕೀರ್ತಿ ತಂದ ಸಾಧಕ ಮೌನೇಶ್ ನಾಯಕ್ ಅವರನ್ನು ಶಾಲಾ ಪೂಜ್ಯರು ಹಾಗೂ ಆಡಳಿತ ಮಂಡಳಿಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗುರುಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಾಲಾ ಆವರಣದಲ್ಲಿ ಗ್ರಾಮೀಣ ಸಂಸ್ಕೃತಿಯ ಅನಾವರಣವು ಎಲ್ಲರ ಗಮನ ಸೆಳೆಯಿತು

Leave a Reply

Your email address will not be published. Required fields are marked *