ಗದಗ,ನ,24:- ಸಂಘದ ರಾಜ್ಯಾಧ್ಯಕ್ಷರಾದ ಡಾಕ್ಟರ್. ಹನುಮಂತ ಗೌಡ ಕಲ್ಮನಿಯವರು ಇಂದು ಬೆಳಿಗ್ಗೆ ಗದಗಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಕಳೆದ ಮೂರೂ ದಶಕಗಳಿಂದ ಅತಿಥಿ ಉಪನ್ಯಾಸಕರು ಶಿಕ್ಷಣ ವಲಯದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದರೂ,ಅವರ ಸೇವೆಗೆ ಶಾಶ್ವತ ಪರಿಹಾರ ಕೊಡಲು ಯಾವುದೇ ಸರ್ಕಾರ ಗಂಭೀರ ಮನಸ್ಸು ತೋರಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಫಸ್ಟ್ ಗ್ರೇಡ್ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಅತಿಥಿ ಉಪನ್ಯಾಸಕರ ನಿಸ್ವಾರ್ಥ ಸೇವೆಯಿಂದಲೇ ಸಾಗುತ್ತಿವೆ.
ಆದರೂ ಕೂಡ ಸ್ಥಿರೀಕರಣ, ವೇತನ ಸಮಾನತೆ, ವಾರ್ಷಿಕ ಭದ್ರತೆ,ಹಾಗೂ ಹಕ್ಕಿನ ಗುರುತಿನ ವಿಷಯದಲ್ಲಿ ಸರ್ಕಾರ ಇನ್ನೂ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ ಎಂಬುದು ಅತಿಥಿ ಉಪನ್ಯಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ನ್ಯಾಯಾಲಯದ ಆದೇಶದ ನೆಪವೊಡ್ಡಿ UGC ನಿಯಮಗಳ ಪ್ರಕಾರ N,E,T, k,S,E,T,PH,D, ಪಡೆದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನ ನಡೆಸಲು ಜೇಷ್ಠತಾ ಪಟ್ಟಿ ಬಿಟ್ಟು 5,600. ಜನ ಯು,ಜಿ,ಸಿ ನಿಯಮಗಳ ಪ್ರಕಾರ ಅರ್ಹತೆ ಪಡೆಯದೆ ಸುಮಾರು ಇಪ್ಪತ್ತು ವರ್ಷಗಳಿಂದ ಸೇವೆ ಮಾಡಿದ ಅನುಭವಿ ಹಿರಿಯ ಉಪನ್ಯಾಸಕರನ್ನು ಶಕ್ತಿ ಇರುವ ತನಕ ದುಡಿಸಿಕೊಂಡು ಈಗ ಬೀದಿಗೆ ಬಿಡುತ್ತಿರುವುದು ನ್ಯಾಯವೇ?
ನ್ಯಾಯ ನೀಡದಿದ್ದರೆ ಚಳಿಗಾಲದ ಅಧಿವೇಷನಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ, ಸಂಘವು 25 ನವೆಂಬರ್ 2025ರಂದು ಗದಗ ನಗರದಲ್ಲಿ ಬೃಹತ್ ಪ್ರತಿಭಟನೆ,ಮತ್ತು ಧರಣಿ ನಡೆಸುವುದಾಗಿ ಘೋಷಿಸಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಅತಿಥಿ ಉಪನ್ಯಾಸಕರು ದೊಡ್ಡ ಪ್ರಮಾಣದಲ್ಲಿ ಈ ಹೋರಾಟದಲ್ಲಿ ಭಾಗಿಯಾಗುವಂತೆ ಡಾಕ್ಟರ್, ಕಲ್ಮನಿಯವರು ಮನವಿ ಮಾಡಿದ್ದಾರೆ.
ಸರ್ಕಾರ ತ್ವರಿತವಾಗಿ ಶಾಶ್ವತ ನೀತಿ ಪ್ರಕಟಿಸಿ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ಮತ್ತು ಮಾನವೀಯ ವೇತನ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಶಿಕ್ಷಕರ ಸಂಕಷ್ಟವನ್ನು ನಿರ್ಲಕ್ಷಿಸುವ ಯಾವುದೇ ಆಡಳಿತವು ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯ ಮಾಡುತ್ತಿರುವಂತೆಯೇ ಆಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

