ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಯುವನಿಧಿ ಫಲಾನುಭವಿಗಳ ದಾಖಲಾತಿಗಳನ್ನು ಪರಿಶೀಲಿಸಲಾಯಿತು ಎಂದು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಮಹಿಬೂಬಸಾಬ ಮುದ್ದಾಪೂರು ತಿಳಿಸಿದರು.
ನಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ ಮಾತನಾಡಿ ತಾಲೂಕಿನ ಒಟ್ಟು 526 ಯುವನಿಧಿ ಫಲಾನುಭವಿಗಳ ಪೈಕಿ 65 ಜನ ಯುವ ನಿಧಿ ಫಲಾನುಭವಿಗಳ ದಾಖಲೆಗಳ ಪರಿಶೀಲಿಸಿ ಸರಕಾರದ (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರ) ರಾಯಚೂರುದಲ್ಲಿ ಸಿಗುವ ಸ್ವಯಂ ಉದ್ಯೋಗದ ತರಬೇತಿಗಳ ಮಾಹಿತಿಯನ್ನು ನಿರುದ್ಯೋಗ ಯುವಕ, ಯುವತಿಯರಿಗೆ ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿದೇರ್ಶಕ ಸೋಮನಗೌಡ ಪಾಟೀಲ್‌, ತಾಲೂಕ ಪಂಚಾಯತಿಯ ಎನ್ ಆರ್ಎಲ್ಎಂ ಯೋಜನೆಯ ವಲಯ ಮೇಲ್ವಿಚಾರಕ ಪ್ರಕಾಶ ಹಾಗೂ ಸಿಬ್ಬಂದಿಗಳಿದ್ದರು, ಮಸ್ಕಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಯುವನಿಧಿ ಫಲಾನುಭವಿಗಳ ದಾಖಲಾತಿ ಪರಿಶೀಲಿಸಿದರು.

Leave a Reply

Your email address will not be published. Required fields are marked *