ತಮ್ಮ ಅಧಿಕಾರಾವಧಿಯಲ್ಲಿ ರಸ್ತೆ ಅಭಿವೃದ್ಧಿ, ಕುಡಿವ ನೀರು, ಶಾಲೆಗಳ ಅಭಿವೃದ್ಧಿ, ರೈತರ ಸಮಸ್ಯೆಗಳಿಗೆ ಪರಿಹಾರ, ಬಡಜನರ ಕಲ್ಯಾಣಕ್ಕಾಗಿ ಅನೇಕ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ ಜನರೊಟ್ಟಿಗೆ ನಿಕಟ ಸಂಪರ್ಕದಲ್ಲಿರುವ ನಾಯಕರು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ
ಅವರ ವಿರುದ್ಧ 6 ಸಾವಿರ ಕೋಟಿ ಹಗರಣ ಆರೋಪ ಬಿಜೆಪಿಗರು ಮಾಡುತ್ತಿದ್ದು ಇದು ಸತ್ಯಕ್ಕೆ ದೂರವಾದದು
ಎಂದು ತಾಲೂಕು ಕಾಂಗ್ರೆಸ್‌ ಯುವ ಮುಖಂಡರು ಹಾಗೂ ವಿರುಪಾಪುರ ಜಿಲ್ಲಾ ಪಂಚಾಯತಿ ಆಕಾಂಕ್ಷಿ ವೀರೇಶ ಎನ್.ಉಪ್ಪಲದೊಡ್ಡಿ ಪ್ರತಿಕ್ರಿಯೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಸುಖಾ ಸುಮ್ಮನೆ ರಾಜೀನಾಮೆಗೆ ಒತ್ತಾಯಿಸುವುದು ಅನಗತ್ಯ ಆರೋಪವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ದೇಶದ ಜನರ ನಂಬಿಕೆ ಕುಗ್ಗಿಸುತ್ತಿದೆ. ಪಾರದರ್ಶಕತೆ, ಜನಪರ, ಪ್ರಾಮಾಣಿಕತೆ, ಆಡಳಿತದ ಮಾತು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ದೊಡ್ಡ ಹಗರಣವೇ ಮಾಡಿದೆ. ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ದಿ ಯೋಜನೆ ಅಡಿಯಲ್ಲಿ ಯುವ ಜನತೆಗೆ ಉದ್ಯೋಗ ಒದಗಿಸುವ ಮಹತ್ವಾಕಾಂಕ್ಷಿಯ ಯೋಜನೆಯಾಗಿದೆ.

2015 ರಿಂದ 2024 ರವರೆಗೆ ಒಟ್ಟು ಮೂರು ಹಂತಗಳಲ್ಲಿ 10,194 ಕೋಟಿ ವೆಚ್ಚ ಮಾಡಲಾಗಿದೆ. 3.30 ಲಕ್ಷ ಬ್ಯಾಚ್ ಗಳಲ್ಲಿ 1.30 ಕೋಟಿ ಜನರಿಗೆ ತರಬೇತಿ ನೀಡಿದೆ ಎಂದು ಹೇಳುವ ಕೇಂದ್ರ ಸರ್ಕಾರ ಇದರ ಬಗ್ಗೆ ಸಂಪೂರ್ಣ ಮಾಹಿತಿಯೇ ಇಲ್ಲ. ಈ ಯೋಜನೆ ಅನುಷ್ಠಾನದಲ್ಲಿ ಹೆಜ್ಜೆಹೆಜ್ಜೆಗೂ ಬಹುದೊಡ್ಡ ಅಕ್ರಮ ನಡೆದಿದೆ ಎಂದು ಈಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ದಿ ಯೋಜನೆಯ ಲೆಕ್ಕಪರಿಶೋಧನೆ ವರದಿಯಲ್ಲಿ ಉಲ್ಲೇಖ ಇದೆ ಎಂದು (ಸಿಎಜಿ) ಮಹಾಲೇಖಪಾಲರು ಹೇಳಿದ್ದಾರೆ.

ತರಬೇತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿ ಹೇಳುತ್ತಿದೆ. ಆದರೆ ತರಬೇತಿ ಪಡೆದಿರುವ ಸಾವಿರಾರು ತರಬೇತಿದಾರರು ಯಾರು? ಇದರ ಬಗ್ಗೆ ಮಾತನಾಡದ ಬಿಜೆಪಿಯವರು ಯಾವುದೇ ದಾಖಲಾತಿಗಳು ಇಲ್ಲದೆ ಅನಾವಶ್ಯಕವಾಗಿ ಆರೋಪ ಮಾಡುವುದು ಎಷ್ಟು ಸರಿ? ದಲಿತ ಸಮುದಾಯದ ಹಿರಿಯ ನಾಯಕ ಆರ್.ಬಿ.ತಿಮ್ಮಾಪುರ ಉತ್ತಮ ರೀತಿಯಲ್ಲಿ ರಾಜ್ಯದ ಅಬಕಾರಿ ಇಲಾಖೆಯನ್ನು ನಿಭಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಬಾರ್ ಅಸೋಸಿಯೇಷನ್ ವತಿಯಿಂದ
14,101 ಬಾರ್‌ಗಳ ಲೈಸೆನ್ಸ್ ಹೊಂದಿವೆ. ಅದರಲ್ಲಿ 241 ಎಸ್.ಸಿ, ಎಸ್.ಟಿ, ಸಮುದಾಯದವರ ಅಂಗಡಿಗಳಿವೆ, 499 ಲೈಸೆನ್ಸ್ ರಿನಿವಲ್ ಆಗಿಲ್ಲ ಎಂದು ಮಾಹಿತಿ ನೀಡಿ, ಬಿಜೆಪಿಯವರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ. ಇದನ್ನು ಕೈ ಬಿಡಬೇಕು. ಇಲ್ಲದಿದ್ದಲ್ಲಿ
ರಾಜ್ಯದಾದ್ಯಂತ ಮುಂದಿನ ದಿನಗಳಲ್ಲಿ ತೀವ್ರವಾದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ದಲಿತ ಮುಖಂಡ ಗುರುರಾಜ ಮುಕ್ಕುಂದ ಮಾತನಾಡಿ, ಲೈಸೆನ್ಸ್ ಪಡೆಯದೆ ಅನಧಿಕೃತವಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿರುವ ಪ್ರಭಾವಿತ ವ್ಯಕ್ತಿಗಳ ಕೈವಾಡವು ಇದಾಗಿದೆ. ಇದಕ್ಕೆ ರಾಜೀನಾಮೆ ಅಗತ್ಯ ಇಲ್ಲ. ಯಾರೋ ಮಾಡಿದ ತಪ್ಪಿಗೆ ಅವರ ಹೆಸರನ್ನು ತಳುಕು ಹಾಕುವ ಕೆಲಸ ನಡೆಯುತ್ತಿದೆ
ದಾಖಲೆ ಇದ್ದಲ್ಲಿ ಬಹಿರಂಗಗೊಳಿಲಿ ಎಂದರು.

ಈ ವೇಳೆ: ಗುರುನಾಥ ವಕೀಲರು, ದುರಗೇಶ ಬಾಲಿ, ಗಾದಿಲಿಂಗಪ್ಪ ಅರಳಹಳ್ಳಿ, ನವೀನಕುಮಾರ, ಹನುಮೇಶ ಕರ್ನಿ, ಸೇರಿದಂತೆ ಅನೇಕ ಯುವ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *