ಉದ್ಯೋಗ ಖಾತ್ರಿ ಯೋಜನಡಿಯಲ್ಲಿ ಅಂಗವಿಕಲರಿಗೆ
125 ದಿನ ಕೆಲಸ ನೀಡದೆ, ಅನ್ಯಾಯ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಎನ್.ಎಮ್.ಆರ್.ತೆಗೆಯುತ್ತಿದ್ದು, ಅದೇರೀತಿ ಅಂಗವಿಕಲರಿಗೂ ಕೂಡ ಎನ್.ಎಮ್.ಆರ್ ಸೀಟ್ ತೆಗೆಯಲು ಕೇಳಿದರೆ, ವಿರುಪಾಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರಾಕರಿಸುತ್ತಿದ್ದಾರೆ ಎಂದು ಮನವಿ ಮಾಡಿದರು.
ತಾಲೂಕು ಪಂಚಾಯತಿ ಕಾರ್ಯಾಲಯದ ಮುಂದೆ ಅನೇಕ ವಿಕಲಚೇತನರು ಪ್ರತಿಭಟಿಸಿದರು. ನಂತರ ಸಹಾಯಕ ನಿರ್ದೇಶಕ ಅಮರಗುಂಡಪ್ಪ ಮಾತನಾಡಿ,
ವಿಶೇಷ ಸೌಲಭ್ಯದಡಿಯಲ್ಲಿ ಇದ್ದಲ್ಲೇ ನಿಮ್ಮ ನಿಮ್ಮ ಗ್ರಾಮದಲ್ಲಿ ಕೆಲಸ ಕೊಡಲು ಪಿಡಿಒ ಅವರಿಗೆ ಸೂಚನೆ ಕೊಡಲಾಗುವುದು ಎಂದು ತಿಳಿಸಿದರು.
ಪಂಚಾಯತಿ ಸಿಬ್ಬಂದಿಗಳು ನಮ್ಮನ್ನು ಅಸ್ವಸ್ಥರಂತೆ ಕಾಣುತ್ತಿದ್ದಾರೆ. ನರೇಗಾ ಕೆಲಸದಲ್ಲಿ ಕಲ್ಲುಮುಳ್ಳುಗಳು ಕಂಟಿಯಲ್ಲಿ ಹೋಗಲು ವಿಕಲಚೇತನರಿಗೆ ತೀರ ಕಷ್ಟ ಆಗುತ್ತಿದೆ. ನಮಗೆ ಪ್ರತ್ಯೇಕವಾಗಿ ನಮ್ಮ ಗ್ರಾಮದಲ್ಲಿ ಎನ್.ಎಮ್.ಆರ್ ತೆಗೆಯಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ನಾವು ಬಹಳಷ್ಟು ಶೋಷಣೆಗೆ ಒಳಗಾಗಿದ್ದು ಜೀವನ ನಡೆಸಲು ಕಷ್ಟಕರವಾಗಿರುತ್ತದೆ.
ವಿಕಲ ಚೇತನರಿಗೆ ಪ್ರತ್ಯೇಕವಾಗಿ ನಮ್ಮ ಗ್ರಾಮದಲ್ಲಿ ನಮಗೆ 125 ದಿನಗಳ ಕೂಲಿ ಕೆಲಸವನ್ನು ನೀಡಬೇಕು ಮತ್ತು ಅಂಗವಿಕಲರಿಗೆ ಶೇ.5ರಷ್ಟು ಯೋಜನೆಯ ಅಡಿಯಲ್ಲಿ ಬರುವ ಅನುದಾನ ಕೆಲವು ವರ್ಷಗಳಿಂದ ಬಳಕೆಯಾಗಿರುವುದಿಲ್ಲ. ಮತ್ತು ನೀಡುತ್ತಿಲ್ಲ. ಹಾಗೂ ಕರವಸೂಲಿ, ವಸತಿ ಹಂಚಿಕೆಯಲ್ಲಿ ಅನ್ಯಾಯವಾಗಿದ್ದು, ಗ್ರಾಮ ಪಂಚಾಯತಿಯಲ್ಲಿ ಶೇ.5 ರಷ್ಟು ಅನುದಾನದ ಮಾಹಿತಿ ನೀಡುತ್ತಿಲ್ಲ.
ಈ ಹಿಂದೆ ದಿ. 29-12-2025 ಹಾಗೂ 04-02-2026 ರಂದು ಈ ವಿಷಯದ ಕುರಿತು ವಿರುಪಾಪುರ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ವಿಕಲಚೇತನರ ಅನುದಾನದ ಹಿಂಬರಹ ನೀಡಿರುವುದಿಲ್ಲ. ಅಧಿಕಾರಿಗಳು ಗಮನ ಹರಿಸಿ ಕೂಡಲೇ ವಿಕಲಚೇತನಗರಿಗೆ ಸಿಗಬೇಕಾದ ಸೌಲಭ್ಯವನ್ನು ಕೂಡಲೇ ದೊರಕಿಸುಕೊಡುವಂತೆ ವಿನಾಯಕ ಮಲ್ಲದಗುಡ್ಡ ಮನವಿ ಮಾಡಿದರು.
ಈ ವೇಳೆ: ಬಸವರಾಜ ದೊಡ್ಡಮನಿ, ಪ್ರಕಾಶ ಶ್ರೇಷ್ಠಿ, ಶೇಖರಗೌಡ ಅರಳಹಳ್ಳಿ, ಯಮನೂರ ಅರಳಹಳ್ಳಿ, ಈಶ್ವರಯ್ಯಸ್ವಾಮಿ, ಮಲ್ಲೇಶಗೌಡ, ಅಂಬಣ್ಣ ಗೋಧಿ, ಹನುಮೇಶ ನವಲಿ, ಸೇರಿದಂತೆ ಅನೇಕರಿದ್ದರು.

