ಸಿಂಧನೂರು – ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಸುಮಾರು ಎರಡು ವರ್ಷಗಳಿಂದ ಆಶ್ರಯ ಪಡೆದಿದ್ದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದ ಜಗಜ್ಯೋತಿ ಬಸವಣ್ಣನವರ ಅನುಯಾಯಿಗಳಾದ ಶರಣ ಶ್ರೀ ಬಾಲಪ್ಪ ವಯಸ್ಸು -88 ಇವರು ಸಿಂಧನೂರಿನ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಸಿಂಧನೂರು ನಗರದ ಬಸವ ಬಳಗ ಹಾಗೂ ಬಸವಪರ ಸಂಘಟನೆಗಳ ಶರಣರ ಸಮಕ್ಷಮದಲ್ಲಿ ರಾಯಚೂರು ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗೆ ನೇತ್ರದಾನ ದೇಹ ದಾನ ಮಾಡಲಾಯಿತು. ಈ ಸಮಯದಲ್ಲಿ ಶರಣ ಶ್ರೀ ಬಸವರಾಜ ಪಗಡದಿನ್ನಿ ಕುರುಕುಂದಾ ಇಂದು ನಮ್ಮನ್ನೆಲ್ಲಾ ಅಗಲಿದ ಶರಣ ಬಾಲಪ್ಪನವರ ಆಶಯದಂತೆ ನೇತ್ರದಾನ ದೇಹ ದಾನ ಮಾಡಲಾಗಿದೆ. ಬಸವ ಅನುಯಾಯಿಗಳು ಪರೋಪಕಾರಿಗಳಾಗಿ ಇಂತಹ ಸಾಮಾಜಿಕ ಕಾರ್ಯವನ್ನು ಮಾಡುತ್ತಿರುತ್ತಾರೆ. ಮತ್ತು ನಮ್ಮ ಸಿಂಧನೂರಿನ ಕಾರುಣ್ಯಾಶ್ರಮವು ಬಸವಣ್ಣನವರ ಆದರ್ಶದಂತೆ ಕಾರ್ಯನಿರ್ವಹಿಸುತ್ತಿರುವುದು ಸಿಂಧನೂರಲ್ಲದೆ ನಾಡಿನ ಸಮಸ್ತ ಬಸವಾದಿ ಶರಣರ ಪ್ರೀತಿಗೆ ಪಾತ್ರವಾಗಿದೆ. ಸುಮಾರು ಎರಡು ವರ್ಷಗಳ ಕಾಲ ಇಂದು ಅಗಲಿದ ಶರಣ ಬಾಲಪ್ಪನವರ ಸೇವೆ ಮಾಡಿರುವ ಕಾರುಣ್ಯ ಕುಟುಂಬಕ್ಕೆ ಇನ್ನು ಹೆಚ್ಚಿನ ಸಾಮಾಜಿಕ ಸೇವೆ ಮಾಡುವಂತಹ ಶಕ್ತಿಯನ್ನು ನಾಡಿನ ಬಸವಾದಿ ಶರಣರು ಹರ ಗುರು ಚರಮೂರ್ತಿಗಳು ಕರುಣಿಸಲಿ ಎನ್ನುವ ವಿಶೇಷವಾದ ಪ್ರಾರ್ಥನೆ ನಮ್ಮೆಲ್ಲರದ್ದು. ಶರಣ ಬಾಲಪ್ಪನವರ ನೇತ್ರಗಳು ಇನ್ನೊಬ್ಬರ ಬಾಳಿಗೆ ಬೆಳಕಾಗಲಿ ಮತ್ತು ಅವರ ದೇಹ ವೈದ್ಯಕೀಯ ಶಿಕ್ಷಣಕ್ಕೆ ಮೆರುಗು ತರಲಿ ಎನ್ನುವ ಉದ್ದೇಶದಿಂದ ಸಿಂಧನೂರಿನ ಬಸವಪರ ಸಂಘಟನೆಗಳ ಮತ್ತು ಕಾರುಣ್ಯಾಶ್ರಮದ ಪದಾಧಿಕಾರಿಗಳ ಸಮಕ್ಷಮದಲ್ಲಿ ನೇತ್ರದಾನ ದೇಹ ದಾನ ಮಾಡಲಾಗಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಪ್ರಾರ್ಥನೆಯ ಮೂಲಕ ಶರಣರನ್ನು ಬಿಳ್ಕೊಡಲಾಗುವುದು ಎಂದು ಭಾವನಾತ್ಮಕವಾಗಿ ಮಾತನಾಡಿ ಹಲವಾರು ಬಸವಣ್ಣನವರ ವಚನಗಳನ್ನು ಪಠಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಮಯದಲ್ಲಿ ಶರಣ ರಮೇಶ ಬೊಮ್ಮನಾಳ. ಶರಣ ತಿಪ್ಪಣ್ಣ ಶಿಕ್ಷಕರು.ಸುಭಾಸ್ ನಿವೃತ್ತ ಶಿಕ್ಷಕರು ವೆಂಕಟ ಸ್ವಾಮಿ ನಾರಿನಾಳ ವೆಂಕಟೇಶ ಈಳಿಗೇರು ವಕೀಲರು ಕುಷ್ಟಗಿ.. ಕೆ. ಶರಣಪ್ಪ ತೆಂಗಿನಕಾಯಿ ಅಧ್ಯಕ್ಷರು ಬಸವ ಚಾರಿಟೇಬಲ್ ಟ್ರಸ್ಟ್. ಕರೇಗೌಡ ಕುರುಕುಂದಾ ಅಧ್ಯಕ್ಷರು ಬಸವ ಕೇಂದ್ರ ಸಿಂಧನೂರು. ಬಸವಲಿಂಗಪ್ಪ ಬಾದರ್ಲಿ. ಚಂದ್ರೇಗೌಡ ಹರೇಟನೂರು. ಅಮರೇಶ ಗುರಿಕಾರ. ಶಾಂತಪ್ಪ ಚಿಂಚರಿಕಿ. ವೀರನಗೌಡ ಬಸಾಪುರ. ಚಾಂದ್ ಸಾಬ್. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ರಾಯಚೂರು ರಿಮ್ಸ್ ಮೆಡಿಕಲ್ ಕಾಲೇಜ್ ಸಿಬ್ಬಂದಿಗಳಾದ ಜಬಿವುಲ್ಲಾ. ಶ್ರೀಮಠ ಸೇವಾ ಟ್ರಸ್ಟ್ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ. ಹಾಗೂ ಸಿಂಧನೂರ್ನ ಬಸವಪರ ಸಂಘಟನೆಗಳ ಹಲವಾರು ಶರಣರು ಉಪಸ್ಥಿತರಿದ್ದರು

