ರಾಯಚೂರು ಫೆಬ್ರವರಿ 10 (ಕರ್ನಾಟಕ ವಾರ್ತೆ): ಇಲ್ಲಿನ ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಗೆ ಸಿಎಸ್‌ಸಿ ಅನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಗೆ ವಯೋಮಿತಿ ಪ್ರಕಾರ ಅನುಧಾನ ಪಾವತಿಸಿದ ನಂತರ ಕೇಂದ್ರ ಸರ್ಕಾರದಿಂದ ಸಮನಾಂತರ ಅನುಧಾನವನು ಅರ್ಹ ಚಂದದಾರರ ಪಿಂಚಣಿ ಖಾತೆಗೆ ಪಾವತಿಸುತ್ತದೆ. ಫಲಾನುಭಾವಿಗೆ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂ.ಗಳ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಯೋಜನೆ ವ್ಯಾಪ್ತಿಯ ನೊಂದಾಯಿತ ಡೇ-ನಲ್ಮ್ ಯೋಜನೆಯಡಿ ಅರ್ಹ ಪಿ.ಎಂ.ಸ್ವ-ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಕುಟುಂಬಸ್ಥರು 18 ರಿಂದ 40 ವಯಸ್ಸಿನ ಒಳಗಿರುವ ಮತ್ತು ಮಾಸಿಕ ಆದಾಯ ರೂ.15,000ಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ ಇಎಸ್‌ಐ, ಪಿ.ಎಫ್, ಎನ್.ಪಿ.ಎಸ್ ಯೋಜನೆ ವ್ಯಾಪ್ತಿಗೆ ಒಳಪಟ್ಟಿರಬಾರದು. ಅಂತಹ ಫಲಾನುಭವಿಗಳು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಲಿಂಕ್ ಮೊಬೈಲ್‌ನೊಂದಿಗೆ ಫೆ. 15ರೊಳಗಾಗಿ ಸಿಎಸ್‌ಸಿ ಅನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಅದರ ಪ್ರತಿಯನ್ನು ರಾಯಚೂರು ಮಹಾನಗರಪಾಲಿಕೆ ಡೇ-ನಲ್ಮ್ ಶಾಖೆಯಲ್ಲಿ ಸಲ್ಲಿಸಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
