ಮಾನ್ವಿ: ಪಟ್ಟಣದ ತಾಲೂಕು ವಕೀಲರ ಸಂಘಕ್ಕೆ 2026-27 ನೇ ಸಾಲಿಗಾಗಿ ನಡೆದ ಚುನಾವಣೆಯಲ್ಲಿ ವಕೀಲರ ಸಂಘದ ಅಧ್ಯಕ್ಷರಾಗಿ ರವಿಕುಮಾರ ಪಾಟೀಲ್, ಉಪಾಧ್ಯಕ್ಷರಾಗಿ ಶಿವಪ್ಪ ಸುಂಕನೂರು,ವಿಶ್ವನಾಥ ರಾಯಪ್ಪ, ಪ್ರ.ಕಾರ್ಯದರ್ಶಿಯಾಗಿ ಯಲ್ಲಪ್ಪ ಬಾದರದಿನ್ನಿ, ಜಂಟಿ ಕಾರ್ಯದರ್ಶಿಯಾಗಿ ನಾಗರಾಜ ಗೂಗಲ್, ಮಹಿಳಾ ಮೀಸಲು ಸ್ಥಾನಗಳಾದ ಖಜಾಂಚಿ ಸ್ಥಾನಕ್ಕೆ ಸ್ಟೇಲಾ ಶಾರ್ಲಾಟ್ ಜಂಟಿ ಕಾರ್ಯದರ್ಶಿಯಾಗಿ ಚಂದ್ರಕಲಾ ಅವಿರೋಧ ಆಯ್ಕೆ ಯಾಗಿದ್ದಾರೆ. ಒಟ್ಟು 234 ಸದಸ್ಯರಲ್ಲಿ 221 ಸದಸÀ್ಯರು ತಮ್ಮ ಮತವನ್ನು ಚಾಲಾಯಿಸಿದ್ದು ವಿಶೇಷವಾಗಿತ್ತು . ಚುನಾವಣಾಧಿಕರಿಗಳಾಗಿ ಹಿರಿಯ ನ್ಯಾಯಾವಾಧಿಗಳಾದ ಕೆ.ಶ್ರೀನಿವಾಸ ,ಸಹಾಯಕ ಚುನಾವಣಾಧಿಕಾರಿಗಳಾಗಿ ಅರವಿಂದ ದೇಸಾಯಿ, ಮತ್ತು ಎಂ.ಭರತ್ ಪಾಟೀಲ್ ಕಾರ್ಯನಿರ್ವಹಿಸಿದರು.
ನೂತನವಾಗಿ ವಕೀಲರ ಸಂಘಕ್ಕೆ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ನ್ಯಾಯಾಲಯದ ಅವರಣದಲ್ಲಿ ವಕೀಲರು ಗೌರವಿಸಿ ಸಂಭ್ರಮಾಚರಣೆ ಮಾಡಿದರು.

