ತಾಳಿಕೋಟೆ:ಲೋಕದಸಂತ ,ಕವಿ,ಭಾವೈಕ್ಯತೆಯ ಹರಿಕಾರ ಶಿಶುನಾಳ ಶರೀಫರು,ಅವರ ತತ್ವಪದಗಳು ಜನಮನದ ಪ್ರತಿಬಿಂಬ ಎಂದು ತಾಳಿಕೋಟೆಯ ಎಸ್.ಕೆ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲರಾದ ಡಾ.ಅರ್.ಎನ್.ಪಾಟೀಲ್ ಅವರು ಮಾತನಾಡಿದರು.
ತಾಳಿಕೋಟೆಯ ಕನ್ನಡ ಸಂಘದ ಮೂಲಕ ಪ್ರತಿ ತಿಂಗಳು ಎರಡನೇಯ ರವಿವಾರ ಒಂದು ಕನ್ನಡದ ಕಾರ್ಯಕ್ರಮದ ಅಂಗವಾಗಿ 8-2-2026 ರಂದು ಹಮ್ಮಿಕೊಂಡ “ಶಿಶುನಾಳ ಶರೀಫರ ತತ್ವಪದಗಳಲ್ಲಿ ಅನುಭಾವ” ಎಂಬ ವಿಶೇಷ ಉಪನ್ಯಾಸ ಕುರಿತು ಅವರು ಮಾತನಾಡಿದರು.
ಇದೆ ಸಂರ್ಭದಲ್ಲಿ ಶಿಶುನಾಳ ಶರೀಫ ಸಾಹೇಬರು ಬರೆದ ಅನೇಕ ಹಾಡುಗಳ ವಿಶ್ಲೇಷಣೆ ಮಾಡಿ,ಸಂಸಾರ ಮತ್ತು ಪಾರಮಾರ್ಥ ಅರಿವು ಇರುವಿನ ಕುರಿತು ತಿಳಿಸಿದರು.ಭೂಮಿ ದೊಡ್ಡದು,ಭೂಮಿಗಿಂತ ಸಾಗರ ದೊಡ್ಡದು,ಸಾಗರಕ್ಕಿಂತ ಆಕಾಶ ದೊಡ್ಡದು,ಆಕಾಶಕ್ಕಿಂತ ಬ್ರಹ್ಮಾಂಡ ದೊಡ್ಡದು,ಬ್ರಹ್ಮಾಂಡಕ್ಕಿಂತ ಆಶೆ ದೊಡ್ಡದು.ಅದಕ್ಕಾಗಿ ಆಶೆ ಬಿದ್ದು ಹೊಂಟಾಳೋ ಮಾರಿ,ನೂರೆಂಟು ಕೇರಿ ಎಂಬ ಶರೀಫರ ತತ್ವಪದ ಉಲ್ಲೇಖಿಸಿ ಮಾರ್ಮಿಕವಾಗಿ ತಿಳಿಸಿದರು.ಅಗ್ಗದ ಅರಿವಿ ತಂದು ಹಿಗ್ಗಿಲೆ ಹೊಲಿಸಿದಿ ಅಂಗಿ,ಹೆಗ್ಗಣವೊಯ್ತವ್ವತಂಗಿ ಎಂಬಲ್ಲಿ ಜೀವನದ ನಶ್ವರತೆ ಹಾಗೂ ಎಚ್ಚರಿಕೆಯನ್ನು ತಿಳಿಸಿದ್ದಾರೆ ಎಂದರು.ಬಿದ್ದಿಬೇ ಮುದಕಿ ,ನೀ ದಿನ ಹೋದಾಕಿ,ನೀ ಇರು ಜ್ವಾಕಿ ಎಂದು ಹೇಳುತ್ತಾ,ಬುದ್ದಿಗೇಡಿ ಮುದಕಿ ನೀ ಎಂದು ಅಂತರಾತ್ಮವನ್ನೆ ತಿವ್ವಿದು ಎಚ್ಚರಿಸುತ್ತಾರೆ ಎಂದರು.
ಇದೇ ಸಂರ್ಭದಲ್ಲಿ “ತೊಗಲ ಮಲಿ ಹಾಲ ಕೊಡುದು ದೊಡ್ಡವರಾಗಿ,ಶೀಲಮಾಡತಿರಿ ನಾಡೆಲ್ಲ” ಎಂಬ ಶರೀಫರ ಹಾಡನ್ನು ಕಂಚಿನ ಕಂಠದ ಮೂಲಕ ಹಾಡಿ ನೆರೆದ ಜನರ ಮನದೊಳಗೆ ತತ್ವಪದದ ಗಟ್ಟಿ ಹಾಗೂ ಅದರ ಸ್ವಾಧವನ್ನು ಹಿರಿಯರು,ಅನುಭವಿಗಳು, ಆಧ್ಯಾತ್ಮಿಕ ಚಿಂತಕರು ಆಗಿರುವ ವಿಶ್ರಾಂತ ಪ್ರಾಂಶುಪಾಲರಾದ ಡಾ.ಆರ್.ಎನ್.ಪಾಟೀಲ್ ಅವರು ಮಾತನಾಡಿದರು.
ಕಾರ್ಯದಕ್ರಮದ ಅಧ್ಯಕ್ಷತೆವಹಿಸಿದ ತಾಳಿಕೋಟಿ ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ ಕಾರ್ಚಿಯವರು ಮಾತನಾಡಿ ತತ್ವಪದಗಳು ಜೀವನದ ಸಂದೇಶವನ್ನು ಸಾರುತ್ತವೆ.ಡಾ.ಆರ್.ಎನ್.ಪಾಟೀಲರವರ ಅನುಭವದ ಮಾತುಗಳು ಹಾಗೂ ಸಂತ ಶಿಶುನಾಳ ಶರೀಫರ ತತ್ವಪದಗಳು ಕೇಳಿ ಆನಂದ ಎನಿಸಿದೆ.ಕಾರ್ಯಕ್ರಮ ಸಾರ್ಥಕ ಎನಿಸಿದೆ ಎಂದರು.
ರ್ಕಾಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರಾದ ಡಾ.ಗುರುಪಾದ ಘೀವಾರಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು,ಕಾರ್ಯಕ್ರಮದಲ್ಲಿ ಆರ್.ಬಿ.ಧಮ್ಮೂರ ಮಠ,ಆರ್.ವಿ.ಜಾಲವಾದಿ,ಹೆಚ್.ಬಿಕರೆಕಲ್.ಮಹಾಂತೇಶ ಹಾದಿಮನಿ,ಬಸನಗೌಡ ಚೋಕಾವಿ,ಪ್ರಭಾಕರ ಪತ್ತಾರ,ಗುಂಡುರಾವ ಧನಪಾಲ,
ದಿನಕರ ಜೊಷಿ,ಜಿ.ಎನ್.ರಾರಡ್ಡಿ,ಪ್ರಕಾಶ ಕಟ್ಟಿಮನಿ,ಮಹಾಂತೇಶ ಮುರಾಳ,
ಸಿದ್ದು ಪಡಶೆಟ್ಟಿ,ಗುರುನಾಥ ಕುಂಬಾರ,ಸಿದ್ದಾರ್ಥ ಕಟ್ಟಿಮನಿ,ಉಮಾ ಘೀವಾರಿ ಮುಂತಾದವರು ಉಪಸ್ಥಿತರಿದ್ದರು.
ನಿವೃತ್ತ ಪ್ರಾಚಾರ್ಯರಾದ ಡಾ.ಸಿ.ಲಿಂಗಪ್ಪನವರು ಕೊಳಲುವಾದನದೊಂದಿಗೆ ಹಾಗೂ ಹಿರಿಯರಾದ ಶ್ರೀ ಪ್ರಕಾಶ ಕಟ್ಟಿಮನಿಯವರು ತಾತ್ವಿಕ ಗೀತೆ ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಪ್ರಧಾನಕಾರ್ಯಧರ್ಶಿ ಶ್ರಿಕಾಂತ ಪತ್ತಾರ ಸ್ವಾಗತಿಸಿದರು.ಸಹ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ ನಿರೂಪಿಸಿದರು.ಕನ್ನಡ ಸಂಘದ ಸದಸ್ಯರಾದ ಕಾಶಿನಾಥ ಸಜ್ಜನ ವಂದಿಸಿದರು.

