ಲಿಂಗಸುಗೂರು : ಹೈನುಗಾರಿಕೆ ಒಂದು ಪ್ರಮುಖ ಉಪಕಸುಬಾಗಿದ್ದು, ಇದರಿಂದ ದಿನನಿತ್ಯ ಆದಾಯಗಳಿಸಲು ಸಾಧ್ಯವಾಗುತ್ತದೆ. ಇತ್ತಿಚೀನ ದಿನಗಳಲ್ಲಿ ಹಲವಾರು ಯುವಕರ ಆಸಕ್ತಿಯಂತೆ ಮಹಿಳೆಯರು ಕೂಡ ಹೈನುಗಾರಿಕೆ ಮಾಡಲು ತಾಲೂಕು ಪಂಚಾಯತ ವ್ಯಾಪ್ತಿಯ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಯೋಜನೆ ಅಡಿಯಲ್ಲಿರುವ ಸ್ವ ಸಹಾಯ ಗುಂಪಿನ ಮಹಿಳೆಯರು ಹೈನುಗಾರಿಕೆ ಪ್ರಾರಂಭ ಮಾಡಲು ಮುಂದಾಗಿರುವುದು ವಿಶೇಷವಾಗಿರುತ್ತದೆ.
ಲಿಂಗಸೂಗೂರ ತಾಲೂಕಿನದ್ಯಾoತ ಸುಮಾರು 50-60 ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ರಚನೆ, 1500 ರಿಂದ 2000 ರವರಿಗೆ ಹಸುಗಳು ಖರೀದಿಸುವ ಗುರಿಯಂತೆ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಒಕ್ಕೂಟದಿಂದ ಸಮುದಾಯದ ಬಂಡವಾಳ ನಿಧಿ ಹಾಗೂ ಬ್ಯಾಂಕ್ ಸಾಲ ಸಂಪರ್ಕ ಮೂಲಕ ಹಸುಗಳು ಖರೀದಿಸಿ ಸಂಪೂರ್ಣ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದು.
ಗುಂತಗೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಕು ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಪರಿಮಳ ನರಸಮ್ಮ ಹಾಗೂ ದವಲಮಲ್ಲಿಕ ಗುಂಪಿನ ರುಕ್ಷನಬೇಗಂ, ಮುನಿರಾಬೇಗಂ, ಮಮತಾಜ್ ಬೇಗಂ ಹಸು ಖರೀದಿಸಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡವರು.
ಇಲ್ಲಿನ ರೈತ ಮಹಿಳೆಯರು ಕೂಲಿ ಕೆಲಸದಲ್ಲಿ ಜೀವನ ನಡಿಸದೆ ಕಷ್ಟಕರವಾದಾಗ ಪಟ್ಟಣಕ್ಕೆ ಗುಳೆ ಹೋಗ್ಬೇಕೆನ್ನುವ ಇಂತಹ ಸಂದರ್ಭದಲ್ಲಿ ಸಂಜೀವಿನಿ ಯೋಜನೆ ಸಿಬ್ಬಂದಿಗಳು ಹೈನುಗಾರಿಕೆ ಮಾಹಿತಿ ನೀಡಿದಾಗ ಸ್ವಯಂ ಪ್ರೇರಿತರಾಗಿ ತಮ್ಮ ಅಲ್ಪ ಸ್ವಲ್ಪ ಅವರ ಕೃಷಿ ಜೊತೆ ಉಪಕಸುಬಾಗಿ ಹೈನುಗಾರಿಕೆ ಉದ್ಯಮ ಆರಂಭಿಸಲು ಮುಂದಾದರು.
ಹಸು ಆಯ್ಕೆ: ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ ಮತ್ತು ಉತ್ತಮ ಹಾಲು ಉತ್ಪಾದಿಸುವ ಹಸುಗಳನ್ನು ಸ್ಥಳೀಯ ಪಶುವೈದ್ಯರ ಮಾಹಿತಿಯಂತೆ ಸೂಕ್ತ ತಳಿಗಳ ಬಗ್ಗೆ ಸಲಹೆ ಪಡೆದು ಎಮ್ಮೆಗಳನ್ನು ಖರೀದಿಸಲು ಮುಂದಾಗಿರುವುದು.
ಕೊಟ್ಟಿಗೆ ನಿರ್ಮಾಣ ಮತ್ತು ಆಕಗಳುಗಳ ಖರೀದಿ 2,00,000/-ಲಕ್ಷ ಬಂದಿದೆ, ಮೊದಲಿಗೆ ಐದು (5) ಹಾಲು ಹಿಂಡುವ ಆಕಳು ಮಿಶ್ರತಳಿಗಳನ್ನು ಖರೀದಿಸಿ
ಇದರಿಂದ ಪ್ರತಿದಿನ ಹಾಲಿನ ಕೇಂದ್ರಕ್ಕೆ
ಒಂದು ದಿನಕ್ಕೆ ಸುಮಾರು 20 ರಿಂದ 25 ಲೀಟರ ಹಾಲಿನ ಇಳುವರಿ ಪಡೆದು ಸರಾಸರಿ ಪ್ರತಿ ಲೀಟರಗೆ ರೂ. 40-45 ದರದಲ್ಲಿ ಮಾರಾಟ ಮಾಡುತ್ತಿದ್ದು, ಒಂದು ದಿನಕ್ಕೆ ರೂ. 1500 ರಿಂದ 2000 ರವರೆಗೆ ಆದಾಯ ಗಳಿಸುತ್ತಿದ್ದಾರೆ. ಅದರಲ್ಲಿ ಪಶು ಆಹಾರದ ಖರ್ಚು ಮತ್ತು ಔಷಧಿಯ ಖರ್ಚು ಸುಮಾರ ಶೇ. 50 ರಷ್ಟು ಬರುತ್ತದೆ ಎನ್ನುತ್ತಾರೆ ಅವರು.
ಇವರ ಮನೆ ಸ್ವಂತಃ ಜಮೀನಿನಲ್ಲಿ ಇರುವುದರಿಂದ ತಾವೇ ತಮ್ಮ ಕುಟುಂಬದವರೊಂದಿಗೆ ಹಾಗೂ ಕೂಲಿ ಆಳುಗಳೊಂದಿಗೆ ಕೂಡಿ ಕೆಲಸ ಮಾಡುತ್ತಾರೆ. ಜಮೀನಿನ ಕೃಷಿಯ ತ್ಯಾಜ್ಯಗಳಾದ, ಗೋವಿನ ಜೋಳದ ನುಚ್ಚು, ತೊಗರಿ ನುಚ್ಚು, ಕಡಲೆ ನುಚ್ಚು, ಗೋದಿ ತವಡು ಉಪಯೋಗಿಸಿ, ದಾಣಿ ಮಿಶ್ರಣವನ್ನು ಮನೆಯಲ್ಲಿಯೇ ತಯಾರು ಮಾಡುತ್ತಾರೆ, ಹಸಿರು ಮೇವಿನ ಕೊರತೆಯಾಗದಂತೆ, ಹೊಲದಲ್ಲಿ ಹನಿ ನೀರಾವರಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ.
ಇವರ ಯಶಸ್ಸನ್ನು ನೋಡಿ ಈ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮಹಿಳೆಯರು ಸಂಜೀವಿನಿ ಸ್ವ ಸಹಾಯ ಗುಂಪು ಸೇರಲು ಬಯಸಿ ಹಸುಗಳು ಖರೀದಿಗಾಗಿ ಸಾಲದ ಬೇಡಿಕೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *