ಮಸ್ಕಿ : ಪಟ್ಟಣದ
ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ದೇವರಿಗೆ ಮಂಗಳವಾರ ಬೆಳಿಗ್ಗೆ ಕಾರ್ತೀಕ ದೀಪೋತ್ಸವ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ದೇವರ ರುದ್ರಾಭಿಷೇಕ ಸೇರಿದಂತೆ ಪೂಜೆ ಕೈಂಕರ್ಯ ಗಳು ಜರುಗುತ್ತದೆ. ನಂತರ ಸಾಯಂಕಾಲ 6ಕ್ಕೆ ಕಾರ್ತೀಕ ದೀಪೋತ್ಸವದ ದೀಪಾರಾಧನೆ ಗಚ್ಚಿನಮಠದ ಶ್ರೀ ಗಳು ಚಾಲನೆ ನೀಡಲಿದ್ದಾರೆ. ನಂತರ ಭಕ್ತ ವೃಂದದವರಿಂದ ದೀಪೋತ್ಸವ ಜರುಗಲಿದೆ.ಈ ಎಲ್ಲಾ ಮಂಗಲಮಯ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗ ಬೇಕು ಎಂದು ಮಲ್ಲಿಕಾರ್ಜುನ ದೇವರ ಅರ್ಚಕರಾದ ಸಿದ್ದಯ್ಯ ಹಿರೇಮಠ ರವರು ಹಾಗೂ ದೇವಸ್ಥಾನ ಸಮಿತಿ ಪತ್ರಿಕೆ ಪ್ರಕಟನೆ ಮೂಲಕ ಮನವಿ ಮಾಡಿದರು.

