ಕರ್ನಾಟಕ ರಾಜ್ಯ ಭತ್ತ, ಜೋಳ, ಹತ್ತಿ, ತೊಗರಿ, ಮತ್ತು ಸಮಗ್ರ ನೀರಾವರಿ ರೈತರ ಸಂಘಟನೆಯಿಂದ ನ.26 ರಂದು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಳಿಗಾಗಿ ತಹಶೀಲ್ದಾರ್ ಕಚೇರಿ ಮುಂದೆಯೇ ಅನಿರ್ಧಿಷ್ಟ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಮೃತ್ಯುಂಜಯಸ್ವಾಮಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ನಡೆಸುವ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಜಿಲ್ಲಾಧಿಕಾರಗಳು ಧಾವಿಸಿ, ರೈತರ ಸಮಸ್ಯೆ ಆಲಿಸಿ ರೈತರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲೆಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿಗಳು ಪ್ರತಿಭಟನೆ ಸ್ಥಳಕ್ಕೆ ಬರುವವರಿಗೆ ನಮ್ಮ ಅನಿರ್ಧಿಷ್ಟ ಧರಣಿಯ ಹೋರಾಟವು ಮಾತ್ರ ನಿರಂತರವಾಗಿರುತ್ತದೆ.

ಪ್ರತಿ ಹೋಬಳಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಕ್ಕೆ ಸರ್ಕಾರ ಮುಂದಾಗಬೇಕು.ಸರ್ಕಾರ ಪ್ರತಿಕ್ವಿಂಟಲ್‌ ಭತ್ತಕ್ಕೆ ಗ್ರೇಡ್ ಭತ್ತಕ್ಕೆ 2369 ರೂ.ಗ್ರೇಡ್ 2389 ರೂ.ನಿಗದಿಪಡಿಸಿದೆ. ಒಂದು ಚೀಲ ಗೊಬ್ಬರ 1700 ರೂ.ಇದೆ. ಅದೇ ಭತ್ತವನ್ನು 1700 ರೂಗೆ ಖರೀದಿ ಮಾಡಿದರೆ, ರೈತರಿಗೆ ಏನು ಉಳಿಯುತ್ತದೆ ಎಲ್ಲಿಗೆ ಹೋಗಬೇಕು. ಕೊಪ್ಪಳ ಹಾಗೂ ರಾಯಚೂರು ಎರಡು ಜಿಲ್ಲೆಗಳ ರೈತರನ್ನು ಒಳಗೊಂಡು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜೊತೆಗೆ ಬೆಂಬಲಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ವೇಳೆ: ಗೌರವಾಧ್ಯಕ್ಷರಾದ ಅಮರೇಶ ಸಾಹುಕಾರ್ ಚಿಕ್ಕದಿನ್ನಿ, ಉಪಾಧ್ಯಕ್ಷ ಶಿವಕುಮಾರ ಪಿ ವಟಗಲ್, ಕರಿಯಪ್ಪ ಪಾಟೀಲ್ ಡೊಣಮರಡಿ, ಅಮರೇಶ ಪಲ್ಲೇದ್ ಇದ್ದರು.

Leave a Reply

Your email address will not be published. Required fields are marked *