ತಾಳಿಕೋಟಿ: ತಾಲೂಕ ಆಡಳಿತ ವತಿಯಿಂದ ಆಚರಿಸಲಿರುವ ಸಂತ ಸೇವಾಲಾಲ್,ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸಂತ ಕವಿ ಸರ್ವಜ್ಞ ನವರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಫೆಬ್ರವರಿ 15ರಂದು ಶ್ರೀ ಸಂತ ಸೇವಾಲಾಲ್ ಜಯಂತಿ,19 ರಂದು ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಫೆಬ್ರವರಿ 20ರಂದು ಸಂತ ಕವಿ ಸರ್ವಜ್ಞ ನವರ ಜಯಂತಿಗಳು ಆಚರಿಸಲಿದ್ದು ಸದರಿ ಜಯಂತಿಗಳು ಯಶಸ್ವಿಗೆ ತಾಲೂಕ ಮಟ್ಟದ ಅಧಿಕಾರಿಗಳು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮೂವರೂ ಮಹಾಪುರುಷರ ಜಯಂತಿಗಳ ಆಚರಣೆಯಲ್ಲಿ ಯಾವುದೇ ರೀತಿಯ ಲೋಪಗಳು ಆಗದಂತೆ ನೋಡಿಕೊಳ್ಳಬೇಕು ಇದಕ್ಕೆ ಸಂಬಂಧಿಸಿದ ಸಮಾಜದ ಬಾಂಧವರೂ ಸಹಕರಿಸಬೇಕು ಎಂದರು. ಸಭೆಯಲ್ಲಿ ಸಂತ ಸೇವಾಲಾಲ್ ಸಮಾಜದ ಅಧ್ಯಕ್ಷ ಶಂಕರ್ ಎಂ.ಚೌಹಾಣ, ಮರಾಠ ಸಮಾಜದ ಅಧ್ಯಕ್ಷ ಸಂಭಾಜಿರಾವ್ ವಾಡಕರ್, ಕುಂಬಾರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ, ಗಣ್ಯರಾದ ಕಾಶಿರಾಯಾ ಮೋಹಿತೆ, ಶಶಿಧರ ಡಿಸಲೆ, ಅಣ್ಣಾಜಿರಾವ್ ಜಗತಾಪ,ವಿಠಲ್ ಮೋಹಿತೆ, ಪಿಎಸ್ಐ(ಅ.ವಿ.) ಎಸ್.ಎಂ.ಪಡಶಟ್ಟಿ, ಪುರಸಭೆ ಕಂದಾಯ ಅಧಿಕಾರಿ ಸುರೇಶ ಅಮರಣ್ಣವರ, ಶಿರಸ್ತೆದಾರ ಜೆ.ಆರ್. ಜೈನಾಪೂರ,ಸಿಆರ್ಸಿ ರಾಜು ವಿಜಾಪುರ, ಸಮಾಜ ಕಲ್ಯಾಣ ಇಲಾಖೆಯ ಎಸ್ ಎಂ ಕಲಬುರ್ಗಿ, ಕೆಕೆಆರ್‌ಟಿಸಿ ಬಿ.ಬಿ. ಚೋಕಾವಿ, ಎಪಿಎಂಸಿಯ ಎಸ್.ಆರ್.ಮಠ,ಸಿ.ಟಿ.ಸರ್ವೆಯ ರವಿ ನಾಯಕ ಹಾಗೂ ತಹಸಿಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಇದ್ದರು.

