ತಾಳಿಕೋಟಿ: ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಲಿರುವ ವಿವಿಧ ಮಹಾಪುರುಷರ ಜಯಂತಿಗಳ ಕುರಿತು ಚರ್ಚಿಸಲು ಇಂದು (ಫೆ.7) ಪೂರ್ವಭಾವಿ ಸಭೆ ಕರೆಯಲಾಗಿದೆ. ಮುಂಜಾನೆ 11:00 ಘಂಟೆಗೆ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯ ಅಧ್ಯಕ್ಷತೆಯನ್ನು ತಹಸಿಲ್ದಾರ್ ಡಾ.ವಿನಯಾ ಹೂಗಾರ ವಹಿಸುವರು.ದಿನಾಂಕ 15-02-2026 ರಂದು ಆಚರಿಸಲಿರುವ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ, ದಿನಾಂಕ 19.2.2026ರಂದು ನಡೆಯಲಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ದಿನಾಂಕ 20-02-2026ರಂದು ಆಚರಿಸಲಿರುವ ಕವಿ ಸರ್ವಜ್ಞನವರ ಜಯಂತಿ ಕುರಿತು ಸದರಿ ಸಭೆಯಲ್ಲಿ ಚರ್ಚಿಸಲಾಗುವುದು. ಸಭೆಗೆ ಸಂಬಂಧಿಸಿದ ಸಮಾಜಗಳ ಮುಖ್ಯಸ್ಥರು ಹಾಗೂ ಪಟ್ಟಣದ ಗಣ್ಯ ಮಾನ್ಯರು ಸಕಾಲಕ್ಕೆ ಆಗಮಿಸಿ ತಮ್ಮ ಸಲಹೆ ಸೂಚನೆಗಳು ನೀಡಬೇಕೆಂದು ತಾಲೂಕ ಆಡಳಿತದ ಪ್ರಕಟಣೆ ತಿಳಿಸಿದೆ.



