ತಾಳಿಕೋಟಿ: ಕರ್ನಾಟಕದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ರಜಪೂತ ಸಮಾಜದ ಏಳಿಗೆಗಾಗಿ ರಜಪೂತ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಲು ಕ್ರಮ ವಹಿಸುವಂತೆ ಒತ್ತಾಯಿಸಿ ಸ್ಥಳೀಯ ರಜಪೂತ ಸಮಾಜ ಕ್ಷೇಮಾಭಿವೃದ್ಧಿ ಸಂಘ(ರಿ) ವತಿಯಿಂದ ಪಟ್ಟಣದ ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ ದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಉಪತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ವಿಜಯಸಿಂಗ್ ಹಜೇರಿ ಅವರು ಮಾತನಾಡಿ ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಜಪೂತ ಸಮಾಜವು ಆರ್ಥಿಕವಾಗಿ ಶೈಕ್ಷಣಿವಾಗಿ ಹಾಗೂ ಉದ್ಯೋಗ ರಂಗದಲ್ಲಿ ತೀವ್ರವಾಗಿ ಹಿಂದುಳಿದಿದೆ. ನಮ್ಮ ಯುವಕರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಗದೇ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ನಾಡಿನ ಅಭಿವೃದ್ಧಿಯಲ್ಲಿ ನಮ್ಮ ಸಮಾಜದ ಕೊಡುಗೆಯೂ ಅಪಾರವಾಗಿದೆ ಎಂದ ಅವರು ಈ ವಿಷಯಕ್ಕೆ ಸಂಬಂಧಿಸಿ ಈಗಾಗಲೇ ಸಮಾಜದ ಕೌಟುಂಬಿಕ ಸಮೀಕ್ಷೆ ಹಾಗೂ ಡಿಜಿಟಲ್ ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು ಸಮಗ್ರ ದತ್ತಾಂಶಗಳ ವರದಿಯು ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಪರಿಶೀಲನೆಯಲ್ಲಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಆರಂಭವಾಗಿರುವ ಈ ಪ್ರಕ್ರಿಯೆಗೆ ಪೂರಕವಾಗಿ ನಮ್ಮ ಸ್ಥಳೀಯ ಸಮಾಜವೂ ಕೂಡ ಇದಕ್ಕೆ ಧ್ವನಿಗೂಡಿಸುತ್ತಿದೆ. ನಮ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ ಆದಷ್ಟು ಬೇಗ ನಿಗಮ ಮಂಡಳಿ ಸ್ಥಾಪನೆಗಾಗಿ ಮನವಿ ಪತ್ರವನ್ನು ಎಲ್ಲಡೆಯಿಂದ ಕಳಿಸಿಕೊಡಲಾಗುತ್ತಿದೆ ಈ ಕುರಿತು ಮುಖ್ಯಮಂತ್ರಿಗಳು ಕ್ರಮ ವಹಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು. ರಜಪೂತ ಸಮಾಜದ ಅಧ್ಯಕ್ಷ
ಹರಿಸಿಂಗ್ ಮೂಲಿಮನಿ,ಉಪಾಧ್ಯಕ್ಷ ರತನಸಿಂಗ್ ಕೊಕಟನೂರ,ಭರತಸಿಂಗ್ ವಿಜಾಪುರ,ಸುರೇಶ ಹಜೇರಿ,ಮಾನಸಿಂಗ್ ಕೊಕಟನೂರ, ಗೋವಿಂದಸಿಂಗ್ ಮೂಲಿಮನಿ, ರಘುರಾಮಸಿಂಗ್ ಹಜೇರಿ(ಶೇಠ), ಸುರೇಶಕುಮಾರ ಹಜೇರಿ,ಕೇಸರಸಿಂಗ್ ಹಜೇರಿ, ಮಾನಸಿಂಗ್ ಹಜೇರಿ, ಸೀತಾರಾಮ್ ವಿಜಾಪುರ, ವಿಠಲಸಿಂಗ್ ಬೆಕಿನಾಳ,ಕೇಸು ದೇವಿ, ಅಶೋಕ ಬೆಕಿನಾಳ, ನಾರಾಯಣಸಿಂಗ್ ಕೊಕಟನೂರ, ದಿಲೀಪ್ ಹಜೇರಿ, ಅರುಣಸಿಂಗ್ ದಡೇದ, ಗಂಗಾರಾಮಸಿಂಗ್ ವಿಜಾಪುರ,ರಾಜು ವಿಜಾಪುರ, ರತನಸಿಂಗ್ ದೇವಿ, ಹರೀಶ ಮೂಲಿಮನಿ, ನಿಖಿಲ್ ಮೂಲಿಮನಿ, ರಾಘು ದೇವಿ, ಆನಂದ ಹಜೇರಿ, ವಿಶ್ವ ನಾಯಕ, ಶುಭಂ ಬಿಜಾಪುರ, ರಾಘು ಮೂಲಿಮನಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *