ರಾಯಚೂರು ಫೆಬ್ರವರಿ 04 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಫೆ.5ರಂದು ಮಧ್ಯಾಹ್ನ 1 ಗಂಟೆಗೆ ಆರಂಭವಾಗುವ ಉತ್ಸವದ ಅದ್ಧೂರಿ ಮೆರವಣಿಗೆಗೆ ಕರ್ನಾಟಕ ಸಂಘದ ಆವರಣವು ಮತ್ತು ರಾಯಚೂರು ಸಿಟಿಯು ಸಿದ್ಧವಾಗಿದೆ.
ಮೆರವಣಿಗೆಯು ಬಂಗಾರ ಬಜಾರ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವರೆಗೆ ಸಂಚರಿಸಲಿದೆ.
ಮೆರವಣಿಗೆಯು ಬಸವರಾಜ ಸಿಂಧನೂರು ಅವರಿಂದ ವೀರಗಾಸೆ, ಅಂಬರೇಶ ಹಸಮಕಲ್ ಅವರಿಂದ ಹಗಲುವೇಷ, ದೇವರಾಜು ಅವರಿಂದ ಚಿಲಿಪಿಲಿ ಗೊಂಬೆ, ಹನುಮಂತ ಮಸ್ಕಿ ಅವರಿಂದ ಕೀಲುಕುದುರೆ, ಲಿಂಗರಾಜ ನೀರಮಾನ್ವಿ ಅವರಿಂದ ಡೊಳ್ಳು ಕುಣಿತ, ಶಾಂತರಾಜು ಆಶಾಪೂರ ಅವರಿಂದ ಜಾಂಜ್ ಮೇಳ, ಶಿವರಾಜ ರುದ್ರಾಕ್ಷಿ ದೇವದುರ್ಗ ಅವರಿಂದ ಹಗಲುವೇಷ, ಲಂಕೆಪ್ಪ ಆಮದಿಹಾಳ ಅವರಿಂದ ಕಣಿಹಲಗೆ, ಬಸವರಾಜ ಸಿರವಾರ ಅವರಿಂದ ಡೊಳ್ಳುಕುಣಿತ, ಪಂಪನಗೌಡ ಸಿಂಧನೂರು ಅವರಿಂದ ತಾಷಾರಾಂಡೋಲು, ಚಿನ್ನಪ್ಪ ಸಿಂಧನೂರು ಅವರಿಂದ ಹಗಲುವೇಷ, ಗದ್ದೆಪ್ಪ ಭಜಂತ್ರಿ ಆಮದಿಹಾಳ ಅವರಿಂದ ಶಹನಾಯಿ ವಾದನ, ತಮ್ಮಣ್ಣ ರಾಠೋಡ ದೇವದುರ್ಗ ಅವರಿಂದ ಲಂಬಾಣಿ ನೃತ್ಯ, ನಾಗೇಶ ಬೆಂಗಳೂರು ಅವರಿಂದ ಕೊಂಬುಕಹಳೆ, ಹನುಮಂತ್ರಾಯ ಅವರಿಂದ ಗೊರವ ಕುಣಿತ, ಮಾರೆಪ್ಪ ಆತಕೂರ ಅವರಿಂದ ತಮಟೆವಾದನ, ಹಣಮಂತ್ರ ಭಜಂತ್ರಿ ಅವರಿಂದ ನಾಸಿಕಡೊಳ್ಳು, ಮಹೇಶ ಕವಿತಾಳ ಅವರಿಂದ ಹಗಲುವೇಷ, ನೀಲಕಂಠ ಕಲಬುರಗಿ ಅವರಿಂದ ಗೊಂಬೆ ಕುಣಿತ, ತಿಪ್ಪೇಸ್ವಾಮಿ ಚಿತ್ರದುರ್ಗ ಅವರಿಂದ ಮಹಿಳಾ ಡೊಳ್ಳು, ಶ್ರೀಕಾಂತ ದಕ್ಷಿಣ ಕನ್ನಡ ಅವರಿಂದ ಕಂಗೀಲು ಕುಣಿತ, ಕೆ ವಸಂತಕುಮಾರ ಬಳ್ಳಾರಿ ಅವರಿಂದ ಕಹಳೆವಾದನ, ಮಹಾಂತೇಶ ಚಿತ್ರದುರ್ಗ ಅವರಿಂದ ಸೋಮನಕುಣಿತ, ಸಿ ವೀರೇಶ ವಿಜಯನಗರ ಅವರಿಂದ ನಂದಿಧ್ವಜ ಮತ್ತು ಸಮಾಳ, ವೀರಯ್ಯ ಹಿರೇಮಠ ಕೊಪ್ಪಳ ಅವರಿಂದ ಭದ್ರಕಾಳಿ ಕುಣಿತ, ಮೀನ್ಷಾಕ್ಷಮ ದಾವಣಗೆರೆ ಅವರಿಂದ ಮಹಿಳಾ ವೀರಗಾಸೆ, ಕಲ್ಲಪ್ಪ ಹಂಚಿನಮನಿ ಧರವಾಡ ಅವರಿಂದ ಜಗ್ಗಲಗಿ, ಶ್ರೀನಿವಾಸ ದಾವಣಗೆರೆ ಕೋಳಿಕುಣಿತ, ಮಹಾಂತೇಶ ವಾಲಿ ಕೊಣ್ಣೂರ ಕರಡಿಮಜಲು, ಮಲ್ಲಿಕಾರ್ಜುನ ಕೊಪ್ಪದ ಅವರಿಂದ ಡೊಳ್ಳುಕುಣಿತ ಪ್ರಕಾರಗಳ ಮೂಲಕ ಮೆರವಣಿಗೆ ನಡೆಯಲಿದೆ.

Leave a Reply

Your email address will not be published. Required fields are marked *