ಮಾನ್ವಿ ವಿಧಾನಸಭಾ ಕ್ಷೇತ್ರದ ಮರಾಠ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯ, ಸಿದ್ದರಾಮೇಶ್ವರ ದೇವಸ್ಥಾನ ಮುಂಭಾಗದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ಅವರೊಂದಿಗೆ ಭೂಮಿಪೂಜೆ ನೆರವೇರಿಸಿದೆ. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಹಂಪಯ್ಯ ಜಿ ನಾಯಕ ಅವರು, ತಹಶೀಲ್ದಾರರಾದ ಶ್ರೀ ಅಶೋಕ್ ಪವಾರ್ ಅವರು, ಕಾಂಗ್ರೆಸ್ ಮುಖಂಡರಾದ ಶ್ರೀ ಚುಕ್ಕಿ ಶಿವಕುಮಾರ್, ಶ್ರೀ ಬ್ರಿಜೇಶ್ ಪಾಟೀಲ್, ಶ್ರೀ ರಮೇಶ ದರ್ಶನಕರ್, ಶ್ರೀ ಆಜಿ ಖಾತ್ರಿ, ಶ್ರೀ ಹನುಮಂತ, ಶ್ರೀ ಶಿವಕುಮಾರ್ ಅರಕೇರಿ, ಶ್ರೀಮತಿ ರೇಣುಕಾ, ಶ್ರೀ ನಾಗಪ್ಪ, ಶ್ರೀ ಶ್ರೀನಿವಾಸ್, ಶ್ರೀ ಹನುಮಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
