ಪಟ್ಟಣದ ಪುರಸಭೆಯ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ
ನೂರು ದಿನಗಳ ಕ್ಷಯರೋಗ ಅರಿವು ಮತ್ತು ಪತ್ತೆ ಹಚ್ಚುವಿಕೆ ಅಭಿಯಾನ ಕಾರ್ಯಕ್ರಮ ಪುರಸಭೆಯ ಪೌರ ಕಾರ್ಮಿಕರು ಹಾಗೂ ನೌಕರರಿಗೆ ಕ್ಷಯರೋಗ ಕುರಿತು ಆರೋಗ್ಯ ಅರಿವು ಕಾರ್ಯಕ್ರಮ ಮತ್ತು ಹ್ಯಾಂಡ್ ಹೆಲ್ಡ್ ಎಕ್ಸ್ ರೇ ಮೂಲಕ ರೋಗ ಪತ್ತೆ ಹಚ್ಚುವ ಶಿಬಿರದಲ್ಲಿ 48 ಜನರನ್ನು ಪರೀಕ್ಷೆ – ಗೊಳಪಡಿಸಲಾಯಿತು. ಸಂಶಯಾಸ್ಪದ 22 ಜನರಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬಿನಾಟ್ ಯಂತ್ರದ ಮೂಲಕ ಕಫ ಪರೀಕ್ಷೆ ಮಾಡಿಸಲು ಸೂಚಿಸಿದರು. ಎಲ್ಲರಿಗೂ ತಂಬಾಕು ಮತ್ತು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಮತ್ತು ಕ್ಷಯ ರೋಗ ಕುರಿತು ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು.ಎಲ್ಲ ಸಿಬ್ಬಂದಿಯವರಿಗೆ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಯನ್ನು ಡಾ: ಪ್ರಗತಿ ಮತ್ತು ತಂಡದವರು ನಡೆಸಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಟರಾಜ.ಹೆಚ್.ಎನ್. ದಂತ ಆರೋಗ್ಯ ವೈದ್ಯರಾದ ಡಾ: ಶೋಭಾ ನಾಯಕ. ಪುರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ಶಾನವಾಜ್. ಗದ್ದೆಪ್ಪ ಕ್ಷಯರೋಗ ಮೇಲ್ವಿಚಾರಕ ರವಿಕುಮಾರ ಹೂಗಾರ. ಅಮರೇಶ ಯಲಿಗಾರ. ಮಹಾಂತೇಶ ಬ್ಯಾಳಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

