ಕೃಷಿ ವಿಜ್ಞಾನಗಳ ವಿಶ್ವವಿದ್ಯಾ ಲಯ ರಾಯಚೂರನಲ್ಲಿ 22 ನವೆಂಬರ 2025 ರಂದು 17ನೇ ಸಂಸ್ಥಾಪನಾ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಜೀವಿಪರಿಸ್ಥಿತಿ ಹಾಗೂ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸಲು ಉದ್ಘಾಟಿಸಿದರು.
ಮಾತನಾಡಿದ ಅವರು, ಜೀವನದಲ್ಲಿ ಬರುವ ಬದಲಾವ ಣೆಗಳು ಮತ್ತು ಸವಾಲುಗಳನ್ನು ಸರಿಯಾದ ರೀತಿಯಲ್ಲಿ ಎದುರಿಸಿ ವಿದ್ಯಾರ್ಥಿಗಳು ತಮ್ಮ ಗುರಿ ತಲುಪಬೇಕೆಂದು ಕರೆ ನೀಡಿದರು. ಗ್ರಂಥಾಲಯವನ್ನು ಜ್ಞಾನ ದೇವಾಲಯದಂತೆ ಕಾಣಬೇಕು,
ಸ್ಪರ್ಧೆಯಲ್ಲದೇ ಸ್ವ-ಪ್ರಗತಿಗೆ ಆದ್ಯತೆ ನೀಡಬೇಕು ಎಂದು ವಿದ್ಯಾ ರ್ಥಿಗಳಿಗೆ ಪ್ರೇರಣೆ ನೀಡಿದರು. ಕೃಷಿ ಕ್ಷೇತ್ರದ ಮಹತ್ವವನ್ನು ಉಲ್ಲೇಖಿಸಿ, ಕೃಷಿತಾಂತ್ರಿಕ ಶಿಕ್ಷಣ ಪಡೆಯು ತ್ತಿರುವ ನೀವು ಅದೃಷ್ಟ ವಂತರಾಗಿ ದ್ದೀರಿ. ಸಮಾಜವೂ ನಿಮ್ಮ ಸೇವೆ ಯನ್ನು ನಿರೀಕ್ಷಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಕುಲಪತಿ ಡಾ. ಎಂ. ಹನುಮಂತಪ್ಪ ಅವರು, ವಿದ್ಯಾರ್ಥಿಗಳು ದೇಶ-ರಾಜ್ಯಗಳ ವಿವಿಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ವಿಶ್ವವಿದ್ಯಾಲಯವು ಇದುವರೆಗೆ ರೈತರಿಗೆ 55 ಹೊಸ ತಳಿಗಳು ಹಾಗೂ 500 ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಿದ್ದು, ಇ-ಸ್ಯಾಪ್’ ಸೇರಿದಂತೆ ಹಲವು ಆವಿಷ್ಕಾರಗಳು ದೇಶ ದಾದ್ಯಂತ ಉಪಯೋಗ ವಾಗುತ್ತಿ ದ್ದವೆಂದು ಹೇಳಿದರು. ಈ ವರ್ಷ
ವಿಶ್ವವಿದ್ಯಾಲಯ ಸಂಶೋಧಿಸಿದ ನಾಲ್ಕು ತಂತ್ರಜ್ಞಾನಗಳಿಗೆ ಪೇಟೆಂಟ್ ದೊರೆತಿರುವುದನ್ನೂ ಉಲ್ಲೇಖಿಸಿದರು. ಅವರು
ಆಡಳಿತ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಡಿ. ಅವರು ಸಂಶೋಧನೆಗಳ ಫಲಿತಾಂಶಗಳಲ್ಲಿ ಕೇವಲ 20% ಮಾತ್ರ ರೈತರಿಗೆ ತಲುಪುತ್ತಿರುವುದನ್ನು ಲಕ್ಷ್ಯಕ್ಕೆ ತೆಗೆದುಕೊಂಡು, ತಂತ್ರಜ್ಞಾನ ಅಳವಡಿಕೆಯ ಬಗ್ಗೆ ವಿಶೇಷ ಅಧ್ಯಯನ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಶಿಸ್ತು ಮತ್ತು ಬದ್ದತೆಯಿಂದ ಜ್ಞಾನ ಸಂಪಾದಿಸಿ ರೈತರಿಗೆ ಸೇವೆ ಸಲ್ಲಿಸಬೇ ಕೆಂದರು.
ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಡಾ. ಬಿ.ವಿ. ಪಾಟೀಲ್, ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ.ವಿ. ಪಾಟೀಲ್, ಆಡಳಿತ ಮಂಡಳಿಯ ಇನ್ನೊಬ್ಬ ಸದಸ್ಯ ಶ್ರೀ ಮಲ್ಲೇಶ ಕೊಲಿಮಿ ಅವರು ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ತಾಲ್ಲೂಕಿನ ಗುಡಿಹಾಳ ಗ್ರಾಮದ ಶಿವಕುಮಾರ ಪಾಟೀಲ್ ಅವರಿಗೆ ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಾಗಿ 2025ರ ಕೃಷಿರತ್ನ ಪ್ರಶಸ್ತಿ ಹಾಗೂ ಚಿನ್ನದ ಪದಕ ಪ್ರದಾನಿಸಲಾಯಿತು. ಜೊತೆಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕ, ಸಂಶೋಧನಾ ವಿಜ್ಞಾನಿ, ವಿಸ್ತರಣಾ ವಿಜ್ಞಾನಿ, ಕ್ಷೇತ್ರ ಅಧೀಕ್ಷಕ, ಸೇವಾ ಸಿಬ್ಬಂದಿ, ಕ್ಷೇತ್ರ ಸಹಾಯಕ ಹಾಗೂ ಅತ್ಯುತ್ತಮ ಕೃಷಿ ಕಾರ್ಮಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು.
ವಿಶ್ವವಿದ್ಯಾಲಯದ ಉಪನ್ಯಾಸಕರು , ಸಿಬ್ಬಂದಿ ಯವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
