ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ರಾಯಚೂರು 15ನೆಯ ವಾರ್ಷಿಕೋತ್ಸವ ಮತ್ತು ಇದರ ಅಂಗವಾಗಿ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ರಾಯಚೂರು ನಗರದ ಭಾರತೀಯ ವೈದ್ಯಕೀಯ ಕುಟುಂಬ ಸಂಘದಲ್ಲಿ ದಿನಾಂಕ 23.11.2025 ರಂದು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಜ್ಯೋತಿಯನ್ನು ಬೆಳಗಿಸಸುವದರ ಕಾರ್ಯಕ್ರಮವನ್ನು ಉದ್ಘಾಟನೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿಯಾದ ಡಾ. ದಂಡಪ್ಪ ಬಿರಾದಾರ ಮಾತನಾಡುತ್ತಾ.ಸೈನಿಕ ನಮ್ಮ ದೇಶದ ಶ್ರೇಷ್ಠ ಆಸ್ತಿ.ನಮ್ಮ ಹೆಮ್ಮೆ. ಎಂದರೆ ತಪ್ಪಾಗಲಾರದು. ಸೈನಿಕರು. ನಮ್ಮ ದೇಶದ ಗಡಿ ಕಾಯುವಂತ ಕಾವಲುಗಾರ.ದೇಶದ ರಕ್ಷಣೆಗಾಗಿ ಹೆತ್ತವರನ್ನು ತನ್ನ ಕುಟುಂಬದವರನ್ನು ಬಿಟ್ಟು ಮನದಲ್ಲಿ ಎಷ್ಟೇ ನೋವುಗಳಿದ್ದರು ಅವುಗಳನ್ನ ಬದಿಗೊತ್ತಿ ತನ್ನ ಸೇವೆ ದೇಶದ ರಕ್ಷಣೆಗೆ ಎಂಬುದನ್ನ ಅರ್ಥಗೊಂಡಿರುತ್ತಾನೆ.ಸೈನಿಕರ ಕೆಲಸವೂ ತುಂಬಾ ಕಷ್ಟಕರವಾಗಿದ್ದು. ಚಳಿ.ಬಿಸಿಲು. ಮಳೆ.ಎಂಬುದನ್ನು ಲೆಕ್ಕಿಸದೆ. ಹಗಲು. ರಾತ್ರಿ ಗಡಿ ಭದ್ರತಾ ಪಡೆಯಲಿ ತಮ್ಮ ಕಾಯಕವನ್ನು ಮಾಡುತ್ತಾರೆ.ಯುದ್ಧದ ಸಂದರ್ಭದಲ್ಲಿ ಹೋರಾಡಿ ಯಶಸ್ವಿ ಸಾಧಿಸಲು ಅವರ ದೇಶಭಕ್ತಿ ಮತ್ತು ಅವರ ಸಾಹಸವನ್ನು. ಪ್ರತಿಯೊಬ್ಬರು ಮರೆ ವಂತಿಲ್ಲ.ಊಟ ಮಾಡುವಾಗ ರೈತನನ್ನು ನೆನೆಸು. ಮಲಗುವಾಗ ಸೈನಿಕರನ್ನು ನೆನೆಸು. ಎನ್ನುವಂತೆ.ಜನ್ಮ ಭೂಮಿಯ ಸೇವೆಗಾಗಿ ಜೀವನವನ್ನೇ ಮುಡುಪಾಗಿಟ್ಟು ಕರ್ತವ್ಯ ನಿರ್ವಹಿಸುವ ಕಾಯಕಯೋಗಿಗಳೆಂದರೆ ಸೈನಿಕರು.ತಮ್ಮ ಹಲವಾರು ಬೇಡಿಕೆಗಳನ್ನ ಸುಮಾರು ದಿನಗಳಿಂದಲೂ ಮಾಡುತ್ತೀರಿ ಅವುಗಳನ್ನ ಜನಪ್ರತಿನಿಧಿಗಳನ್ನು ಸಂಪರ್ಕ ಮಾಡಿ ಸಕರಾತ್ಮಕ ರೀತಿಯಲ್ಲಿ ಈಡೇರಿಸಿಕೊಳ್ಳಬೇಕು. ಎಂದು ಡಾ. ಬಿರಾದಾರ್ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಧ್ಯಕ್ಷರಾದ ಎಂ ಎ ರಹಿಮ ಮಾತನಾಡುತ್ತಾ ನಮ್ಮ ಬೇಡಿಕೆಗಳ ಈಡೇರಿಸಿಕೊಳ್ಳಲು ಒಗ್ಗಟ್ಟಾಗಿ ಕಾರ್ಯವನ್ನ ನಿರ್ವಹಿಸಬೇಕು.ಅಂದಾಗ ಮಾತ್ರ ನಮ್ಮ ಬೇಡಿಕೆಗಳು ದಲಿತವಾಗಿ ಬೇಗನೆ ಈಡೇರಿಸಿಕೊಳ್ಳಬಹುದು ಮಹಾನಗರ ಪಾಲಿಕೆಯ ಆಯುಕ್ತರದ ಜುಬಿನ್ ಮಹಾ ಪಾತ್ರ ನಮಗೆ ಒಂದು ರೂಮಿನ ವ್ಯವಸ್ಥೆ ಮಾಡಿದ್ದಾರೆ .ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಬೇದಾರ್ ಟಿ.ಆರ್ ಸಿಂಗ್ ಎ.ಸಿ.ಸಿ ಬಟಾಲಿಯನ್ ಸಿಂಧನೂರ್ ತಾಲೂಕು ಅಧ್ಯಕ್ಷರಾದ ಪರಶುರಾಮ್ ಮೇಜರ್ ಡಾ. ದೀಪಿಕಾ ಪಾಟೀಲ್ ಸೇರಿದ ಇನ್ನಿತರ ಕಾರ್ಯಕ್ರಮ ಕುರಿತು ಮಾತನಾಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕಾರ್ಯಕ್ರಮದ ರೂವಾರಿಗಳಾದ ಚನ್ನ ರೆಡ್ಡಿ ಅವರು 15 ವರ್ಷಗಳಿಂದ ಸಂಘ ನಡೆದು ಬಂದ ದಾರಿಯ ಕುಳಿತು ಬಹಳ ಅರ್ತಪೂರ್ಣವಾಗಿ ಮಾತನಾಡಿದರು ವಿಜಯಕುಮಾರ್ ದಿನ್ನಿ ನವಿಬೇಕು ನಾಡಗೀತೆಯನ್ನು ಹೇಳಿದರು ಅಲ್ಲಿ ಮಲಬಾರ್ ಕೊನೆಯಲ್ಲಿ ವಂದಿಸಿದರು ಸುರೇಶ್ ಕಾರ್ಯಕ್ರಮ ನಿರೂಪಣೆ ಮಾಡಿದನು ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಮಾಜಿ ಸೈನಿಕರು ಸೇರಿದಂತೆ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಹಲವಾರು ಯುವಕರು ರಕ್ತದಾನ ಮಾಡಿ ತಮ್ಮ ದೇಶಭಕ್ತಿಯನ್ನು ಸಮಾಜ ಸ್ಮರಣೆ ಮಾಡಿದರು..

ಈ ಕಾರ್ಯಕ್ರಮದಲ್ಲಿ
ಡಾ ನಿವೃತ್ತ ಮೇಜರ್ ಶ್ರೀಮತಿ ದೀಪಶ್ರೀ ಪಾಟೀಲ್, ಡಾ ನಿವೃತ್ತ ಮೇಜರ್ ಮಲ್ಲಿಕಾರ್ಜುನ, ಶ್ರೀ ಡಾ ಡಿಎ ಬಿರಾದಾರ ಸುಭೇದಾರ್ ತೇಹರ್ ಸಿಂಗ್ ಎನ್ ಸಿಸಿ ಬಟಾಲಿಯನ್ ಮತ್ತು ಅ ಕ ಮಾ ಸೈ ಸಂಘದ ಗೌರವ ಅದ್ಯಕ್ಷರುಗಳಾದ ಶ್ರೀ ಸುಂದರ್ ಸಿಂಗ್, ಶ್ರೀ ಎಮ್ ಎ ರಹೀಮ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಚೆನ್ನಾರೆಡ್ಡಿ, ಉಪಾಧ್ಯಕ್ಷ ಶ್ರೀ ಗೋಪಾಲ್ ನಾಯಕ್, ಪ್ರದಾನ ಕಾರ್ಯದರ್ಶಿ ಗಳಾದ ಶ್ರೀ ಅಲಿ ಮಲಬಾರ್,
ಜಿಲ್ಲೆಯ ಎಲ್ಲಾ ತಾಲ್ಲೂಕು ಗಳಿಂದ ಸರ್ವ ಮಾಜಿ ಸೈನಿಕರು ಗಳು ಮತ್ತು ಕುಟುಂಬದ ಸದಸ್ಯರು ಗಳು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *