ರಾಯಚೂರು,ಫೆ.2 -: ಇತ್ತೀಚೆಗೆ ಎಲ್ ಬಿಎಸ್ ನಗರದ ಈಶ್ವರ ದೇವಸ್ಥಾನದ ಸುತ್ತಮುತ್ತ ಹಾಗೂ ಹಿಂಬದಿ – ಮುಂಬದಿ ಓಣಿಗಳಲ್ಲಿ ಬ್ರಿಕ್ ಟೈಲ್ಸ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಇದೀಗ ಯುಜಿ ಡಿ ಟೆಂಡರ್ ಕಾರ್ಯ ಗತ ವಾಗಿದ್ದು, ಯುಜಿಡಿಗೆ ಕನೆಕ್ಷನ್ ಕೊಡಲು ಇತ್ತೀಚೆಗೆ ಹಾಕಿದ್ದ ಟೈಲ್ಸ್ ರಸ್ತೆ ಮತ್ತೆ ಅಗೆದು ಪುನಃ ಕಾಮಗಾರಿ ಅಸ್ತವ್ಯಸ್ಥ ಮಾಡಲಾ ಗಿದೆ. ಅದಲ್ಲದೆ ಈಶ್ವರ ದೇವ ಸ್ಥಾನದ ಸುತ್ತಮುತ್ತಲಿನ ಮನೆ ಗಳಿಗೆ ಕುಡಿಯುವ ನೀರಿನ ನಳದ ವ್ಯವಸ್ಥೆ ಇಲ್ಲದಾಗಿದ್ದು, ಯುಜಿಡಿ ಕಾಮಗಾರಿ ಪೂರ್ತಿಯಾಗಿ ,ಅದರ ಮೇಲೆ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಮತ್ತೊಂದು ಟೆಂಡರ್ ಪ್ರಕ್ರಿಯೆ ಬಂದಾಗ ಮತ್ತೆ ನಿರ್ಮಾಣವಾದ ರಸ್ತೆ ಯನ್ನು ಪುನಃ ಅಗೆದು ಕುಡಿ ಯುವ ನೀರಿನ ಪೈಪ್‌ಲೈನ್ ಅಳವಡಿಸಬಹುದು ಎಂಬ ಹೊಸ ಹೊಸ ಟೆಂಡರ್‌ನ ಆಹ್ವಾನವನ್ನು ಕೆಲವರು ಕಾದು ನೋಡುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ…
ಈ ರೀತಿ ತಾಳೆಗೆ ಸಿಗದಂತಾ ಕಳಪೆ ಕಾಮಗಾರಿಯಿಂದಾಗ ಎಲ್‌ಬಿಎಸ್ ನಗರದ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಇಂತಹ ಸರ್ಕಾರದ ಹಣವನ್ನು ದುರುಪಯೋಗ ಮಾಡುವವರ ವಿರುದ್ದ ಕಠಿಣ ಕ್ರಮ ವಾಗಬೇಕು ವ್ಯವಸ್ಥಿತವಾದ ಟೆಂಡರ್ ಕರೆದು ಮೊದಲು ಮೂಲಭೂತ ಅಗತ್ಯಗಳನ್ನು (ಬೇಸಿಕ್ ನೀಡ್ಸ್ ಉದಾ: ಕುಡಿಯುವ ನೀರು, ವಿದುತ್ಯ ದೀಪ) ಪೂರೈಸಿದ ನಂತರ ರಸ್ತೆ ಕಾಮಗಾರಿಗಳು ಚಾಲನೆಯಾಗಬೇಕು ಇದರಿಂದ ರಸ್ತೆಯನ್ನು ಪದೇ ಪದೇ ಅಗೆಯುವುದು ಸೇರಿದಂತೆ ಅನೇಕ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಇದು ಸಾರ್ವಜನಿಕ ಹಣ ಅಂದರೆ ನಮ್ಮ ಹಣವಲ್ಲವೇ?? ಕೂಡಲೇ ಇದಕ್ಕೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಉತ್ತರ ನೀಡಬೇಕಾಗಿದೆ… ಓಂದೆಡೆ ಎಡೆದೊರೆನಾಡು ಉತ್ಸವ ನಮ್ಮೇಲ್ಲರಿಗೂ ಸಂತೋಷ ತಂದಿದೆ.. ಆದರೇ ಈ ರೀತಿ ಚಿಕ್ಕ ಪುಟ್ಟ ಸಮಸ್ಯೆಗಳು ನಿವಾರಣೆಯಾದರೇ ರಾಯಚೂರಿನ ಅಭಿವೃದ್ದಿ ಉನ್ನತಕ್ಕೇರುವುದು ಸಂಶಯವೇ ಇಲ್ಲ.
** ಮೊದಲು ಓಣಿಯ ಟೈಲ್ಸ್ ರಸ್ತೆ ನಿರ್ಮಾಣ ಮಾಡಿದ್ದಾರೆ, ನಂತರ ಯುಜಿಡಿ ಕಾರ್ಯಾರಂಭವಾಗಿದ್ದು, ಅದಕ್ಕೆ ಮನೆಯಿಂದ ಪೈಪ್‌ಲೈನ್ ಕನೆಕ್ಷನ್ ಕೊಡಲು ನಿರ್ಮಾಣವಾದ ಟೈಲ್ಸ್ ರಸ್ತೆ ಒಡೆಯಬೇಕಾಗಿದ್ದು ಗೊಂದಲ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಂತಾಗಿದೆ.
– ಅರವಿಂದ, ಎಲ್‌ಬಿಎಸ್ ನಗರ ನಿವಾಸಿ
ಮೊದಲು ಈ ಏರಿಯಾದಲ್ಲಿ ಕುಡಿಯುವ ನೀರಿನ ನಳವೇ ಇಲ್ಲ , ಮೊದಲು ದೇವಸ್ಥಾನಕ್ಕೆ ನೀರಿಲ್ಲ,, ಬೋರ್‌ವೆಲ್ ಹಾಕಿದ್ರೂ ಕೆಲವೊಮ್ಮೆ ಕೆಟ್ಟು ನಿಂತಾಗ, ಕುಡಿಯುವ ನೀರಿಗೆ ಬಡಿದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ವರದಿಗಾರರು : ಕರ್ಲಿ ಗಣೇಶ
