ಮಸ್ಕಿ: ತಾಲೂಕಿನ ಕಣ್ಣೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ 1ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ. ಮಸ್ಕಿ ತಾಲೂಕಿನ ಕೋಳಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ನಡೆದಿದೆ.

ಗಂಗಮ್ಮ ಗಂಡ ಶೇಖರಗೌಡ ಮಾಲಿ ಪಾಟೀಲ್ ಎನ್ನುವವರಿಗೆ ಸೇರಿದ ಬಣವೆ ಬೆಂಕಿಗಾಹುತಿಯಾಗಿದೆ. ಬೇಸಿಗೆಯಲ್ಲಿ ದನ ಕರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಬಾರದು ಎಂದು ಗಂಗಮ್ಮರವರು ೧ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಹುಲ್ಲಿನ ಬಣವೆಯನ್ನು ಸಂಗ್ರಹಿಸಿಟ್ಟಿದ್ದರು.

ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳದ ನರಸಪ್ಪ, ಗಂಗಪ್ಪ, ಮಂಜನಗೌಡ, ವಾಚಪ್ಪ, ಮೌನೇಶ್, ಅಮರೇಶಪ್ಪಗೌಡ, ವೆಂಕಟೇಶ್ ಸೇರಿದಂತೆ ಗ್ರಾಮಸ್ಥರು ಬೆಂಕಿ ನಂದಿಸಿದರು.

ಬೆಂಕಿ ಆರಿಸಲು ಇನ್ನು ಸ್ವಲ್ಪ ತಡವಾಗಿದ್ದರು ಪಕ್ಕದಲ್ಲಿ ಇದ್ದ ಮನೆಗೆ ಸೇರಿದಂತೆ ಸುಮಾರು ದನ ಕರುಗಳು ಬೆಂಕಿಗೆ ಆಹುತಿಯಾಗುತ್ತಿದ್ದವು.

ಸಂತ್ರಸ್ತ ಕುಟುಂಬ ಬಡತನದ ಕುಟುಂಬವಾಗಿದ್ದು, ನಷ್ಟ ಪರಿಹಾರವಾಗಿ ೧ ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು ಸರಕಾರಕ್ಕೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *