ಮಸ್ಕಿ: ಪಟ್ಟಣದ ಗಾಂಧಿನಗರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಆಗಮಿಸಿದ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಜಿಲ್ಲಾಡಳಿತ ರೂಪಿಸಿರುವ ರಥಯಾತ್ರೆಗೆ ಪಟ್ಟಣದಲ್ಲಿ ಮಸ್ಕಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದನಗೌಡ ತುರುವಿಹಾಳ ಚಾಲನೆ ನೀಡಿದರು. ನಂತರ

ಪಟ್ಟಣದ ಹಳೆ ಪ್ರವಾಸ ಮಂದಿರ ಮುಂಭಾಗದಿಂದ ಮೆರವಣಿಗೆ ಪ್ರಾರಂಭಗೊಂಡು ಅಶೋಕ ವೃತ್ತ, ಚೆನ್ನಮ್ಮ ವೃತ್ತ,ಕನಕ ವೃತ್ತ, ರಾಷ್ಟ್ರೀಯ ಹೆದ್ದಾರಿಯ ಮುಖ್ಯರಸ್ತೆಯ ಮೂಲಕ ವಾಲ್ಮೀಕಿ ವೃತ್ತದಲ್ಲಿ,ಬೀಳ್ಕೊಡಲಾಯಿತು. ಈ ವೇಳೆಯಲ್ಲಿ ಪುರಸಭೆ ಅಧ್ಯಕ್ಷ ಸುರೇಶ್ ಅರಸುರು, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ್ ಪಾಟೀಲ್, ಪುರಸಭಾ ಸದಸ್ಯರು, ತಹಸಿಲ್ದಾರ ಮಂಜುನಾಥ ಭೋಗವತಿ, ತಾಲೂಕು ಪಂಚಾಯತಿ ಇಒ ಅಮರೇಶ್ ಯಾದವ, ಪುರಸಭಾ ಮುಖ್ಯ ಅಧಿಕಾರಿ ನರಸಾರೆಡ್ಡಿ , ಇನ್ನಿತರ ಅಧಿಕಾರಿಗಳು, ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶಾಲಾ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ ವೃಂದ, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ರಥಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *