ಕವಿತಾಳ: ಪಟ್ಟಣದ ಹೊರವಲಯದಲ್ಲಿ ರಾತ್ರಿ ವೇಳೆ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತ ವ್ಯಕ್ತಿಯನ್ನು ದೇವದುರ್ಗ ತಾಲ್ಲೂಕಿನ ಸಡಕಲಗುಡ್ಡ ಗ್ರಾಮದ ಬಸವರಾಜ ತಂದೆ ರಂಗಯ್ಯ(೩೨) ಎಂದು ಗುರುತಿಸಲಾಗಿದ್ದು, ಮೃತನು ಸಡಕಲಗುಡ್ಡ ಗ್ರಾಮದಿಂದ ಪಾಮನಕಲ್ಲೂರು ಗ್ರಾಮದ ಹೆಂಡತಿ ಮನೆಗೆ ಹೊರಟಿದ್ದಾಗ ಎದುರಿನಿಂದ ಬಂದ ರಾಷ್ಟಿçಯ ಹೆದ್ದಾರಿ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುವ ಇನ್‌ಪ್ರಾ ಸ್ಟçಕ್ಚರ್ ಕಂಪನಿಗೆ ಸೇರಿದ ಟಿಪ್ಪರ್ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ ಡಿಕ್ಕಿ ರಬಸಕ್ಕೆ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನಿಗೆ ಹೆಂಡತಿ, ಮೂರು ಮಕ್ಕಳು ಇದ್ದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

