ಸಿಂಧನೂರು — ಸೌರಭ ಸಂಸ್ಕೃತಿಕ ಕಲಾ ಬಳಗ( ರಿ)ಹಿರೇಮನ್ನಾಪುರ ಹಾಗೂ ಮೈಸೂರು ಬೆಂಗಳೂರು ಕಲಾ ಬಳಗದ ವತಿಯಿಂದ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಲಿಂಗೈಕ್ಯ ಶ್ರೀ ಡಾ.ಪಂಚಾಕ್ಷರಿ ಗವಾಯಿಗಳ 134ನೇ ಜಯಂತೋತ್ಸವ ಕಾರ್ಯಕ್ರಮವನ್ನು ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಲವಾರು ಕಲಾವಿದರುಗಳ ಗಣ್ಯಾತಿಗಣ್ಯರ ನೇತೃತ್ವದಲ್ಲಿ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ” ಸಂಗೀತ ಸೌರಭ” ಕಾರ್ಯಕ್ರಮವನ್ನು ಆಶ್ರಮದ ಸದಸ್ಯರಾದ ಡಾ. ಮಲ್ಲಿಕಾರ್ಜುನ ಹಿರೇಮಠ ಕರಡಕಲ್ ಇವರ ಮಾತೋಶ್ರೀಗಳಾದ ಉಮಾದೇವಿ ಹಿರೇಮಠ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮಕ್ಕೆ ಸ್ವಂತ ಜಾಗ ಹಾಗೂ ಅನುದಾನ ಸಿಗಲಿ ಎನ್ನುವ ಬೇಡಿಕೆಯೊಂದಿಗೆ ಸುಮಾರು 25 ದಿನಗಳ ಕಾಲ ಯಾತ್ರೆ ಮಾಡಿ ಕಾರುಣ್ಯ ಕುಟುಂಬಕ್ಕೆ ಆಗಮಿಸಿದ ಮಹಾದೇವಿ ಹಿರೇಮಠ ಅವರನ್ನು ಆಶ್ರಮದಲ್ಲಿ ಪಾದಪೂಜೆ ಮಾಡಿ ಗೌರವಿಸಲಾಯಿತು. ನಂತರ ರಾಜ್ಯ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸರಸ್ವತಿ ಪಾಟೀಲ್ ಕಾಸರಡ್ಡಿ ಇವರನ್ನು ಆಶ್ರಮದಲ್ಲಿ ಸನ್ಮಾನಿಸಿ ಗೌರವಿಸಿ ಆಶೀರ್ವದಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸರಸ್ವತಿ ಪಾಟೀಲ್ ಕಾಸರಡ್ಡಿ ಮಾತನಾಡಿ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರುಣ್ಯ ಆಶ್ರಮದ ಜನನ ಸಿಂಧನೂರಿನ ಕರುಣೆಯ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಹರೇಟನೂರು ಹಾಗೂ ಲಿಂಗಸುಗೂರಿನ ಕರಡಕಲ್ ಈ ಎರಡು ಜಂಗಮ ಕುಟುಂಬ ಜಂಗಮನ ಒಬ್ಬ ವ್ಯಕ್ತಿ ಎಲ್ಲಾ ಅದು ಸಮಾಜದ ಶಕ್ತಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಇಂತಹ ಕಾರ್ಯಕ್ಕೆ ಸಹಾಯ ಸಹಕಾರ ಮಾಡುವ ದಾನಿಗಳು ಅಂದ ಅನಾಥರ ಬಾಳಿಗೆ ಆಶಾಕಿರಣ ವಾಗಿದ್ದಾರೆ. ಮುಂದಿನ ದಿನಮಾನಗಳಲ್ಲಿ ಕಾರುಣ್ಯ ಆಶ್ರಮಕ್ಕೆ ನಮ್ಮ ನಿರಂತರ ಸಹಾಯ ಸಹಕಾರವಿರುತ್ತದೆ. ಮತ್ತು ಸರ್ಕಾರದ ಮೂಲಕ ಸ್ವಂತ ಜಾಗ ಹಾಗೂ ಅನುದಾನ ಕೊಡಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಹಿರೇಮನ್ನಾಪುರದ ಭೀಮಸೇನ ಕುಲಕರ್ಣಿ ಅವರು ಆಶ್ರಮದ ಸೇವೆಯ ಬಗ್ಗೆ ಸಾಹಿತ್ಯ ಬರೆದು ಹಾಡುವ ಮೂಲಕ ಸಮಾಜದ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಉಮಾದೇವಿ ಹಿರೇಮಠ ಕರಡಕಲ್ ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ವೇ.ಮೂ. ವಿಶೇಷ ಯಡಿಯೂರು ಮಠ ಶ್ರೀ ಶಾಂಭವಿ ಪುಣ್ಯಾಶ್ರಮ ಸಿಂಧನೂರು.ಡಾ. ಬಾಲಚಂದ್ರಪ್ಪನವರು ದಿವ್ಯ ಸಾನಿಧ್ಯ ಶಂಕರಲಿಂಗ ಮಠ ಹಿರೇಮನ್ನಾಪುರ, ಡಾ.ಸರಸ್ವತಿ ಪಾಟೀಲ್ ಕಾಸರಡ್ಡಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ. ಡಾ.ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಸದಸ್ಯರು ಕಾರುಣ್ಯ ಆಶ್ರಮ.ಆಮೀನಾ. M. ಕೊಡಗು, ಶ್ರೀಯುತ ಬಾಳಪ್ಪ, ಸಂತೋಷ್ ಅಂಗಡಿ ರಾಜ್ಯಾಧ್ಯಕ್ಷರು ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್. ರೆಹಮಾನ್ ಸಾಬ್,ಭೀಮಸೇನರಾವ್ ಕುಲಕರ್ಣಿ ಬಷೀರ್ ಅಹ್ಮದ್ ಶಿವಮೊಗ್ಗ ಖಾಸಿಂ ಅಲಿ ಕೊಪ್ಪಳ,ರೇಣುಕಾ ಆರಾಧ್ಯ ಮೈಸೂರು. ಬಕ್ಷಿ ದರವೇಶ ಕಲಾವಿದರು ಸಿಂಧನೂರು. ವಿಶಾಲಾಕ್ಷಿ ಹಿರೇಮಠ ಕಲಾವಿದರು ಸಿಂಧನೂರು. ವೀರೇಶ ದೇವರಮನ ಕಲಾವಿದರು ಸಿಂಧನೂರು. ಪಂಪನಗೌಡ ಹರೇಟನೂರು. ಅಂಬುಜಾ ತಾಲೂಕ ಅಧ್ಯಕ್ಷರು ಲಿಂಗಸುಗೂರು ತಾಲೂಕು ರೈತ ಸಂಘ. ಬಸವರಾಜ ರೈತ ಸಂಘದ ಮುಖಂಡರು ಲಿಂಗಸೂಗೂರು.ಮಾಳಪ್ಪ ಮಾಡಗಿರಿ ವೀರಭದ್ರಗೌಡ ಗಿಣಿವಾರ.. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಹಾಗೂ ರಾಜ್ಯದ ವಿವಿಧ ಕಲಾವಿದರು ಉಪಸ್ಥಿತರಿದ್ದರು.

