ಮಾನ್ವಿ : ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಚ್ ಶಿವರಾಮೇಗೌಡ್ರ ಅವರ 63ನೇ ಹುಟ್ಟುಹಬ್ಬದ ಅಂಗವಾಗಿ ಮಾನ್ವಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ನೆರಳು ಅನಾಥಾಶ್ರಮಕ್ಕೆ ಭೇಟಿ ನೀಡಿ ಆಶ್ರಮದಲ್ಲಿರುವ ತಾಯಂದಿರು ಹಾಗೂ ವೃದ್ಧರಿಗೆ ಹಣ್ಣು ಮತ್ತು ಅಕ್ಕಿ ವಿತರಿಸಿ, ಸಸಿಗೆ ನೀರು ಹಾಕುವ ಮೂಲಕ ಶುಭಾಶಯಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಮಾನ್ವಿ ತಾಲೂಕು ಅಧ್ಯಕ್ಷ ನರಸಿಂಹ ಅವರು, “ನಮ್ಮ ರಾಜ್ಯಾಧ್ಯಕ್ಷರಾದ ಶ್ರೀ ಎಚ್. ಶಿವರಾಮೇಗೌಡ್ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಾವು ಮಾಡುವ ಅಳಿಲು ಸೇವೆಗೆ ಪ್ರೇರಣೆ ನೀಡುತ್ತಿರುವ ನಮ್ಮ ನಾಯಕರಿಗೆ ಆ ಭಗವಂತನು ಕನ್ನಡಿಗರ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ” ಎಂದು ಹಾರೈಸಿದರು.
ಅದೇ ವೇಳೆ ನೆರಳು ವೃದ್ಧಾಶ್ರಮದ ವ್ಯವಸ್ಥಾಪಕರು ಹಾಗೂ ಅಧ್ಯಕ್ಷರು ಮಾತನಾಡಿ, ರಾಜ್ಯಾಧ್ಯಕ್ಷರಾದ ಹೆಚ್. ಶಿವರಾಮೇಗೌಡ್ರವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಸಮಾಜಸೇವೆ ಮುಂದುವರಿಸಲು ಇನ್ನಷ್ಟು ಶಕ್ತಿ ಸಿಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷರಾದ ಯಲ್ಲಪ್ಪ ನಿಲೋಗಲ್, ಪ್ರಧಾನ ಕಾರ್ಯದರ್ಶಿ ದೀಪಕ್, ನಗರ ಘಟಕ ಗೌರವಾಧ್ಯಕ್ಷ ಶಾಂತಕುಮಾರ್, ಕಾನೂನು ಸಲಹೆಗಾರ ಚೇತನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಸನತ್ ಕುಮಾರ್, ಹರೀಶ್, ಅಂಬರೀಶ್ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *