ಮಾನ್ವಿ: ಪಟ್ಟಣದ ಟಿಎಪಿಸಿಎಂಸಿ ಬಯಲು ಆವರಣದಲ್ಲಿ ಮಾನ್ವಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ನಡೆದ ಬೃಹತ್ ಹಿಂದೂ ಶೋಭಾಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡೀತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶೀವಾಚನ ನೀಡಿ ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರö್ಯವನ್ನು ನೀಡಿದ ಮಹಾನಿಯರಿಗೆ ನಾವು ಗೌರವ ದೊರೆಯುವಂತೆ ನಾವು ಸ್ವತಂತ್ರ ದೇಶದಲ್ಲಿ ಬದುಕಬೇಕಾಗಿದೆ ಅದ್ದರೆ ನಾವೇ ಸ್ವತಃ ಭ್ರಷ್ಟರಾದಗ ರಾಷ್ಟçವನ್ನು ನಿರ್ಮಾಣ ಮಾಡುವುದಾದರು ಹೇಗೆ ನಮ್ಮ ಅಮೂಲ್ಯವಾದ ಮತವನ್ನು ಹಣಕ್ಕಾಗಿ ಮಾರಿಕೊಂಡಲ್ಲಿ ಭ್ರಷ್ಟಚಾರವನ್ನು ನಿರ್ಮೂಲನೆ ಮಾಡುವುದಾದರು ಹೇಗೆ ವಿಶ್ವದಲ್ಲಿ ಬಲಿಷ್ಟ ರಾಷ್ಟçವನ್ನು ಕಟ್ಟುವುದಾದರು ಹೇಗೆ ಅದ್ದರಿಂದ ಮೊದಲು ನಾವು ಸರಿಯಾಗ ಬೇಕಾದಲ್ಲಿ ಇಂದು ನಾವು ಮತವನ್ನು ಹಣ ಪಡೆಯದೆ ಅರ್ಹ ವ್ಯಕ್ತಿಗೆ ಮಾತ್ರ ಮತ ಹಾಕುತ್ತೇನೆ, ಲಂಚವನ್ನು ನೀಡದೆ ಸರ್ಕಾರಿ ಕಚೇರಿಗಳಲ್ಲಿ ನಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ,ನಾವು ಎಂದಿಗೂ ತೆರಿಗೆಯನ್ನು ವಂಚನೆ ಮಾಡುವುದಿಲ್ಲ ಪರಿಸರಕ್ಕೆ ಪ್ರತಿವರ್ಷ ಗಿಡಗಳನ್ನು ನೇಡುತ್ತೇನೆ ಸ್ವಾಭಿಮಾನ,ಧೈರ್ಯದಿಂದ ನಮ್ಮ ಹಿಂದೂ ಪರಂಪರೆಯ ಬಗ್ಗೆ ಹೆಮ್ಮೆ ಪಟ್ಟುಕೊಂಡು ,ದೇಶಕ್ಕಾಗಿ ನಾನೇನು ಕೋಡಬಲ್ಲೇ ಎನ್ನುವ ಅಸ್ಮಿತೆಯ ನಡುವೆ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ ಎನ್ನುವ ಸಂಕಲ್ಪವನ್ನು ಯುವ ಸಮುದಾಯ ಹೊಂದಿದಾಗ ಮಾತ್ರ ಭಾರತ ವಿಶ್ವಗುರುವಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಚೀಕಲಪರ್ವಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಆರ್ಶೀವಾಚನ ನೀಡಿ ನಮ್ಮ ಹಿರಿಯರು ಪ್ರತಿಯೊಂದು ಹಬ್ಬ ,ಆಚರಣೆಗಳನ್ನು,ಉತ್ಸವಗಳನ್ನು ,ಜಾತ್ರೆಗಳನ್ನು ವೈಜ್ಞಾನಿಕ ಅಂಶಗಳನ್ನಿಟ್ಟು ಕೊಂಡು ರೂಪಿಸಿದ್ದಾರೆ ನಮ್ಮ ಹಿಂದೂ ಧರ್ಮದ ಆಚರಣೆಗಳು ಸಮಾಜದಲ್ಲಿ ಸೌಹಾರ್ಧತೆಮಭಾವೈಕ್ಯತೆಯನ್ನು ಮೂಡಿಸುತ್ತ ಬಂದಿವೇ ಅಧುನಿಕತೆಯ ಹೆಸರಿನಲ್ಲಿ ನಮ್ಮ ಆಚರಣೆಗಳ ಮಹಾತ್ವವನ್ನು ತಿಳಿಯದೆ ಟೀಕಿಸುವವರು ಮೋದಲು ನಮ್ಮ ಆಚರಣೆಗಳ ಮಹಾತ್ವ ಹಾಗೂ ಹಿನ್ನೆಲೆಗಳನ್ನು,ಉದ್ದೇಶಗಳನ್ನು ನಾವು ತಿಳಿಸಿಕೊಡಬೇಕಾಗಿದೆ. ನಮ್ಮ ದೇಶದ ಯಾವುದೇ ಭೂಮಿಯಲ್ಲಿ ಅಸಗೆದರು ಕೂಡ ನಮ್ಮಗೆ ಶಿವಲಿಂಗ ದೊರೆಯುವುದಕ್ಕೆ ನಮ್ಮ ಹಿರಿಯರ ಭಕ್ತಿ ,ಆಚರಣೆಗಳೆ ಕಾರಣ ಎಂದು ತಿಳಿಸಿದರು.
ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಗ ಶಿವಾಚಾರ್ಯ ಮಹಾಸ್ವಾಮಿಗಳು, ಅಮರೇಶ್ವರ ಮಠದ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳು, ಬಾಗಲವಾಡ ಶಿವಯ್ಯಸ್ವಾಮಿಗಳು,ಸುವರ್ಣಗಿರಿ ಮಠದ ಶಂಕರಯ್ಯಸ್ವಾಮಿಗಳು ಆರ್ಶೀವಾಚನ ನೀಡಿದರು. ಮಾನ್ವಿ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷರಾದ ನೀಲಕಂಠಪ್ಪ ಮಾತನಾಡಿದರು.
ರಾಷ್ಟಿçÃಯ ಸ್ವಯಂ ಸೇವ ಸಂಘದ ಜಿಲ್ಲಾ ಪ್ರ.ಕಾರ್ಯವಾಹರಾದ ರಾಜೇಂದ್ರ ಮುತ್ತಿನ ಗೌಡ ಹರವಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ ರಾಷ್ಟಿçÃಯ ಸ್ವಯಂ ಸೇವ ಸಂಘವು ನೂರು ವರ್ಷಗಳಿಂದ ರಾಷ್ಟಿçÃಯ ವಿಚಾರಗಳನ್ನು ಇಟ್ಟುಕೊಂಡು ತಮ್ಮ ಕಾರ್ಯಕರ್ತರ ಮೂಲಕ ದೇಶದ ಮನೆ ಮನೆಗೆ ನಮ್ಮ ರಾಷ್ಟಿçಯತೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ದೇಶದಲ್ಲಿ ಲಕ್ಷಕೂ ಹೆಚ್ಚು ಹಿಂದೈ ಸಮವೇಶಗಳನ್ನು ಅಯೋಜಿಸುವಮೂಲಕ ರಾಷ್ಟç ಪ್ರೇಮವನ್ನು ಜಾಗೃತಗೊಳಿಸುತ್ತಿದೆ. ವಿಶ್ವಗುರುವಾಗುವುದಕ್ಕೆ ನಮ್ಮ ಭಾರತ ದೇಶದಿಂದ ಮಾತ್ರ ಸಾಧ್ಯ ಎಕೆಂದರೆ ಎರಡುಸಾವಿರ ವರ್ಷಗಳ ಪರಕಿಯರ ದಾಳಿಯ ನಂತರವು ನಮ್ಮ ಹಿಂದೂ ಧರ್ಮವನ್ನು,ಸನಾತನ ಪರಂಪರೆಯನ್ನು ಉಳಿಸಿಕೊಂಡು ಹೋಗುವುದಕ್ಕೆ ಹಿಂದೂಗಳಿAದ ಮಾತ್ರ ಸಾಧ್ಯವಾಗಿದೆ. ವಿಶ್ವವೇ ಇಂದು ನಮ್ಮ ಪರಂಪರೆಯನ್ನು ಗೌರವಿಸುತ್ತಿದೆ. ವಿಶ್ವದ ಎಲ್ಲ ಸಮುದಾಯಗಳನ್ನು ಪ್ರೀತಿಸುವ ,ಆಶ್ರಯವನ್ನು ನೀಡುವ ಹಿಂದೂಗಳ ಪರಿಸ್ಥಿತಿ ವಿದೇಶಗಳಲ್ಲಿ ಶೋಚನಿಯವಾಗಿದೆ. ಅದ್ದರಿಂದ ನಾವೇಲ್ಲ ಒಂದು ನಾವೇಲ್ಲ ಹಿಂದೂ, ಎಂದಾಗ ಮಾತ್ರ ನಮ್ಮ ಹಿಂದೂ ಧರ್ಮ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

