ಮಸ್ಕಿ ಸಮೀಪದ ಕವಿತಾಳ ಟು ಮಸ್ಕಿ ಮುಖ್ಯ ರಸ್ತೆಯ ಮಧ್ಯದಲ್ಲಿ ಬರುವ ಇರಕಲ್ ಗ್ರಾಮದ ರಸ್ತೆಯು ಬಹಳ ದಿನಗಳಿಂದ ತಗ್ಗು ಗುಂಡಿಗಳಿಂದ ಹಾಳಾಗಿ ಪ್ರಯಾಣಕ್ಕೆ ತುಂಬಾ ತೊಂದರೆಯಾಗಿತ್ತು. ಇಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್ ಸಿದ್ದನಗೌಡ ತುರವಿಹಾಳ ರವರು 19 ಲಕ್ಷ ರೂಪಾಯಿ ವೆಚ್ಚದ ಕಾಡ ಯೋಜನೆಯಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಕ್ಕೆ ರಸ್ತೆ ಕಲ್ಪಿಸುವುದು ಶಾಸಕರ ಮತ್ತು ನಮ್ಮ ಮುಖ್ಯ ಆದ್ಯತೆಯಾಗಿದೆ,ಅದಕ್ಕಾಗಿ ಇಂದು ಭೂಮಿ ಪೂಜೆ ಮಾಡಿದ್ದು ಬರುವ ದಿನಗಳಲ್ಲಿ ಮತ್ತಷ್ಟು ಕ್ಷೇತ್ರಾದ್ಯಂತ ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಗಮನ ಕೊಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್ ಸಿದ್ದನಗೌಡ ತುರವಿಹಾಳ ಹೇಳಿದರು. ಈ ವೇಳೆಯಲ್ಲಿ ಶ್ರೀ ಬಸವ ಪ್ರಸಾದ ಶರಣರು ಶಿವಶಕ್ತಿ ಪೀಠ ಇರಕಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟರಡ್ಡಿಗೌಡ ಹಾಲಾಪೂರ, ಬಲವಂತರಾಯ್ ಗೌಡ ವಟಗಲ್ , ಹನುಮೇಶ ಬಾಗೋಡಿ, ರವಿ ದೇಸಾಯಿ ಹಾಲಾಪೂರ, ಲಕ್ಷ್ಮಣ ಹಾಲಾಪುರ, ಕನಕಪ್ಪ ತೋರಣದಿನ್ನಿ, ಮೌನೇಶ ಹಾಲಾಪೂರ, ವಿಜಯಕುಮಾರ, ಕರಿಯಪ್ಪ ಪೊಲೀಸ್ ಪಾಟೀಲ್, ರವಿಕುಮಾರ, ಶಂಭುಲಿಂಗ ಇನ್ನಿತರರು ಇದ್ದರು.

