ಕಳೆದ ಏಳೆಂಟು ತಿಂಗಳ ಹಿಂದೆಯೇ ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ನಿರ್ಮಿಸಿದ ಚರಂಡಿಯನ್ನ
ದಾಟಿಕೊಂಡೆ ಗ್ರಾಮಸ್ಥರು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ತಿರುಗಾಡಲು ಒಂದು ಸಿಡಿ ನಿರ್ಮಿಸಿ ಕೊಡುವಂತೆ ಗ್ರಾಮ ಪಂಚಾಯತಿ ಪಿಡಿಒ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿಕೊಂಡರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಸಾಬಯ್ಯನಾಯಕ ಚಿನ್ನಪಟ್ಟಿ ಆರೋಪ ಮಾಡಿದರು.
ತಾಲೂಕಿನ ವಳಬಳ್ಳಾರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ
ಬರುವ ಯದ್ದಲದೊಡ್ಡಿ ಗ್ರಾಮದಲ್ಲಿ ಚರಂಡಿ ಹಾಗೂ ಸಿಡಿ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಈಗಾಗಲೇ ಕಳೆದ ಏಳೆಂಟು ತಿಂಗಳ ಹಿಂದೆಯೇ ಒಂದನೇ ವಾರ್ಡ್ ನಲ್ಲಿ ಈ ಚರಂಡಿ ಕಾಮಗಾರಿ ಮುಗಿಸಿ ಅದಕ್ಕೆ ಸಿಡಿ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಸಿಡಿ ನಿರ್ಮಿಸುವಂತೆ ಗ್ರಾಮ ಪಂಚಾಯತಿ ಪಿಡಿಒ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿ ಮನವಿ ಮಾಡಿಕೊಂಡು ಆರೇಳು ತಿಂಗಳವಾದರೂ ಸಹ ಸಿಡಿ ಮಾಡದೆ, ನಿರ್ಲಕ್ಷ್ಯ ತೋರಿದ ಕಾರಣ ಜನರಿಗೆ ತಿರುಗಾಡಲು ಬಹಳ ತೊಂದರೆಯಾಗಿದೆ. ಆದಷ್ಟು ಬೇಗ ಚರಂಡಿಗೆ ಸಿಡಿ ನಿರ್ಮಾಣ ಮಾಡದೆ ಹೋದರೆ ಗ್ರಾಮಸ್ಥರ ಜೊತೆಗೂಡಿ ಹೋರಾಟ ಮಾಡುವುದಾಗಿ ಸಾಬಯ್ಯ ನಾಯಕ ಚಿನ್ನಪಟ್ಟಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆಗ್ರಹ ಪಡಿಸಿದರು.
ಚರಂಡಿ ನಿರ್ಮಾಣ ಮಾಡಲಾಗಿದೆ ಕೂಲಿಕಾರರು ಸಿಗದೆ ಇರುವುದರಿಂದ ಸಿಡಿ ಕೆಲಸ ವಿಳಂಬವಾಗಿದೆ ಆದಷ್ಟು ಬೇಗನೆ ನಿರ್ಮಾಣ ಮಾಡಲಾಗುವುದು ಅಲ್ಲದೆ ಸರ್ಕಾರದಿಂದ ಯಾವುದೇ ಅನುದಾನವು ಬಂದಿಲ್ಲ. ನನ್ನ ಕೈಯಿಂದ ದುಡ್ಡುಹಾಕಿ ಕೆಲಸ ಮಾಡಿದ್ದೇನೆ. ಒಳಬಳ್ಳಾರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬಿಕಮ್ಮ ಗಂಡ ಭೀಮಣ್ಣ ಮಾಹಿತಿ ನೀಡಿದರು.
ಈ ವೇಳೆ: ನಾಗಲಿಂಗ, ಧರಗಯ್ಯ, ವೀರೇಶ, ಅಯ್ಯಪ್ಪ, ಧರಗೇಶ, ಮದಕರಿ, ಸೇರಿದಂತೆ ಅನೇಕರಿದ್ದರು.

