ಸಂಕೇತ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಸಿಂಧನೂರು ಇವರಿಂದ ಫೆ.7 ರಂದು ಮಧ್ಯಾಹ್ನ 3ಕ್ಕೆ ನಗರದ ಸತ್ಯಗಾರ್ಡನ್ ನಲ್ಲಿ “ಅಪೂರ್ವ ಸಂಗಮ’ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಕೇತ ಕಾಲೇಜಿನ ಕಾರ್ಯದರ್ಶಿ ಅನಿಲರಾಜ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರದಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಮೊದಲು ಪಾಠ ಮಾಡಿ ಬಿಟ್ಟು ಹೋದ ಶಿಕ್ಷಕರಿಗೂ, ಹಾಗೂ ಕಲಿತು ಹೋದ ಹಳೆಯ ವಿದ್ಯಾರ್ಥಿಗಳನ್ನು ಸಹ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಕರೆದು ಸನ್ಮಾನಿಸಿ ಗೌರವಿಸುವ ಕೆಲಸ ಮಾಡುತ್ತೇವೆ.
ಬೆಂಗಳೂರಿನ ಕೆ.ಎಫ್ ಸಿಸಿಐನ ತ್ರಿವಿಕ್ರಮ ಜೋಷಿ, ಸ್ಥಳೀಯ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ. ಆರ್.ಜಿ.ಎಮ್.ಶಾಲೆಯ ಅಧ್ಯಕ್ಷರು ಹಾಗೂ ನೇತ್ರತಜ್ಞ ಡಾ.ಚನ್ನನಗೌಡ ಮುಖ್ಯ ಅತಿಥಿಗಳಾಗಿ ಆಗಮಿಸುವರು ಸರ್ಟಿಫೈಡ್ ಲಿಮ್ರಾ ಇಂಟರ್ನ್ಯಾಷನಲ್ ಸ್ಪೆಷಿಲಿಟೇಟರ್ ಅಮೇರಿಕಾ ಇವರು ಮುಖ್ಯ ಭಾಷಣಕಾರರಾಗಿ ಆಗಮಿಸುವರು,
ಮಧ್ಯಾಹ್ನ 3 ರಿಂದ 6 ರವರೆಗೆ ವಿದ್ಯಾರ್ಥಿಗಳಿಗಾಗಿ ಫನ್ ಗೇಮ್ಸ್ ಆಡಿಸಲಾಗುವುದು, 6 ರಿಂದ 7:30 ರವರೆಗೆ ಉದ್ಘಾಟನೆ ಕಾರ್ಯಕ್ರಮ, ನಂತರ ಶಿಕ್ಷಕರಿಗೆ ಸನ್ಮಾನ, 7:30 ರಿಂದ ರಾತ್ರಿ 9 ರವರೆಗೆ ಪವನಭಟ್ ಅವರಿಂದ ಲೈವ್ ಮ್ಯೂಸಿಕ್ ಬ್ಯಾಂಡ್ ಹಳೆಯ ಕನ್ನಡ ಗೀತೆಗಳ ಕಾರ್ಯಕ್ರಮ ನಡೆಯಲಿದೆ ರಾತ್ರಿ 9 ರಿಂದ 10 ರವರೆಗೆ ಊಟದ ಜೊತೆಗೆ ಚಿಟ್ ಚಾಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ: ಪ್ರಾಚಾರ್ಯರಾದ ಬಸವರಾಜ ಬೊಮ್ಮನಾಳ, ದೀಪಕ್ ಎನ್.ತುರ್ವಿಹಾಳ, ಅಮರೇಶ ಅಲಬನೂರು, ಸಂಗಮೇಶ ಪಾಟೀಲ್, ವಿಶ್ವನಾಥ ಪತ್ತರ್, ವೆಂಕಟೇಶ ಭಂಡಾರಿ, ಸೇರಿದಂತೆ ಅನೇಕರಿದ್ದರು.

